ಕೆ.ಆರ್. ನಗರ ತಾಲೂಕು ಘಟಕದ ಅಧ್ಯಕ್ಷ, ನಿರ್ದೇಶಕ ಸ್ಥಾನದ ಚುನಾವಣೆಗಳಲ್ಲಿ ಸ್ಪರ್ಧೆ ಮಾಡದಿರಲು ನಿರ್ಧಾರ

| Published : Jul 04 2024, 01:08 AM IST

ಕೆ.ಆರ್. ನಗರ ತಾಲೂಕು ಘಟಕದ ಅಧ್ಯಕ್ಷ, ನಿರ್ದೇಶಕ ಸ್ಥಾನದ ಚುನಾವಣೆಗಳಲ್ಲಿ ಸ್ಪರ್ಧೆ ಮಾಡದಿರಲು ನಿರ್ಧಾರ
Share this Article
  • FB
  • TW
  • Linkdin
  • Email

ಸಾರಾಂಶ

ನಿಗದಿಯಾಗಿದ್ದ ಅಖಿಲ ಭಾರತ ವೀರಶೈವ ಮಹಾಸಭಾ ಕೆ.ಆರ್. ನಗರ ತಾಲೂಕು ಘಟಕದ ಅಧ್ಯಕ್ಷ ಮತ್ತು ನಿರ್ದೇಶಕ ಸ್ಥಾನದ ಚುನಾವಣೆಗಳಲ್ಲಿ ಸ್ಪರ್ಧೆ ಮಾಡದಿರಲು ವೀರಶೈವ ಸಮಾಜದ ಮುಖಂಡರ ಸಭೆಯಲ್ಲಿ ತೀರ್ಮಾನಿಸಿತು.

ಕನ್ನಡಪ್ರಭ ವಾರ್ತೆ ಕೆ.ಆರ್. ನಗರನಿಗದಿಯಾಗಿದ್ದ ಅಖಿಲ ಭಾರತ ವೀರಶೈವ ಮಹಾಸಭಾ ಕೆ.ಆರ್. ನಗರ ತಾಲೂಕು ಘಟಕದ ಅಧ್ಯಕ್ಷ ಮತ್ತು ನಿರ್ದೇಶಕ ಸ್ಥಾನದ ಚುನಾವಣೆಗಳಲ್ಲಿ ಸ್ಪರ್ಧೆ ಮಾಡದಿರಲು ವೀರಶೈವ ಸಮಾಜದ ಮುಖಂಡರ ಸಭೆಯಲ್ಲಿ ತೀರ್ಮಾನಿಸಿತು.

ಪಟ್ಟಣದ ಹೊರ ವಲಯದಲ್ಲಿರುವ ಅರಕೆರೆ ವಿರಕ್ತ ಮಠದಲ್ಲಿ ಬುಧವಾರ ನಡೆದ ಕೆ.ಆರ್. ನಗರ ಮತ್ತು ಸಾಲಿಗ್ರಾಮ ತಾಲೂಕುಗಳ ವೀರಶೈವ ಸಮಾಜದ ಪ್ರಮುಖರ ಸಭೆಯಲ್ಲಿ ಈ ನಿರ್ಧಾರ ಮಾಡಲಾಯಿತಲ್ಲದೆ, ಈ ವಿಚಾರವನ್ನು ರಾಜ್ಯ ಘಟಕಕ್ಕೆ ವರದಿ ಮಾಡಲು ಸಭೆಯು ನಿರ್ಣಯ ಕೈಗೊಂಡಿತು.

ಕೆ.ಆರ್. ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಾಲಿಗ್ರಾಮ ಮತ್ತು ಕೆ.ಆರ್. ನಗರ ತಾಲೂಕುಗಳು ಇದ್ದು, ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಘಟಕವು ಕೆ.ಆರ್. ನಗರ ತಾಲೂಕಿಗೆ ಮಾತ್ರ ಚುನಾವಣೆ ಅಧಿಸೂಚನೆ ನಡೆಸುವುದರಿಂದ ಸಮಾಜದ ಮುಖಂಡರು ಈ ತೀರ್ಮಾನಕ್ಕೆ ಬಂದರು.

ಮುಂದೆ ಎರಡು ತಾಲೂಕುಗಳಿಗೆ ಪ್ರತ್ಯೇಕವಾಗಿ ಚುನಾವಣೆ ನಡೆಸಬೇಕೆಂಬ ಮನವಿಯನ್ನು ರಾಜ್ಯ ಘಟಕಕ್ಕೆ ಸಲ್ಲಿಸಿ ಶೀಘ್ರವಾಗಿ ಈ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಕೋರಲು ಸಭೆಯಲ್ಲಿ ಬಹುತೇಕ ಮುಖಂಡರು ಸಲಹೆ ನೀಡಿದಾಗ ಇದಕ್ಕೆ ಸರ್ವಾನುಮತದಿಂದ ಬೆಂಬಲ ನೀಡಲಾಯಿತು.

ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಕೆಂಪರಾಜು ಮಾತನಾಡಿ, ಮಾಜಿ ಅಧ್ಯಕ್ಷರಾದ ಎ. ಎಸ್. ಚನ್ನಬಸಪ್ಪ, ಚಂದ್ರಶೇಖರ್, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ.ಪಿ. ರಮೇಶ್ ಕುಮಾರ್, ಸಮಾಜದ ಹಿರಿಯ ಮುಖಂಡ ಸರಗೂರು ನಟರಾಜು, ತಾಪಂ ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಕೆಡಗ ನಟರಾಜು ಮತ್ತಿತರರು ಸಮಾಜದ ಸಂಘಟನೆಯ ಹಿತದೃಷ್ಟಿಯಿಂದ ಎರಡು ತಾಲೂಕುಗಳಲ್ಲಿ ಪ್ರತ್ಯೇಕ ಘಟಕಗಳನ್ನು ಮಾಡಿ ಚುನಾವಣೆ ನಡೆಸುವಂತೆ ಕೋರಲು ತೀರ್ಮಾನ ಮಾಡಿದ್ದೇವೆ ಎಂದರು.

ಚುನಾವಣೆಯಲ್ಲಿ ಸ್ಪರ್ಧೆ ಮಾಡದಿರಲು ತೀರ್ಮಾನ ಮಾಡಿದ ನಂತರ ಚುನಾವಣಾ ಪ್ರಕ್ರಿಯೆ ನಡೆಸಲು ರಾಜ್ಯ ಸಮಿತಿಯೊಂದಿಗೆ ಸಂವಹನ ನಡೆಸಲು ಅನುಕೂಲವಾಗುವಂತೆ ಸಾಲಿಗ್ರಾಮ ಮತ್ತು ಕೆ.ಆರ್. ನಗರ ತಾಲೂಕು ವ್ಯಾಪ್ತಿಗೆ ಅಡಹಾಕ್ ಸಮಿತಿ ಅಸ್ತಿತ್ವಕ್ಕೆ ತರಲಾಯಿತು.

ಕೆ.ಆರ್. ನಗರ ತಾಲೂಕು ಅಡಹಾಕ್ ಸಮಿತಿ ಸದಸ್ಯರಾಗಿ ಅಖಿಲ ಭಾರತ ಘಟಕದ ಅಧ್ಯಕ್ಷ ಕೆಂಪರಾಜು ಮಾಜಿ ಅಧ್ಯಕ್ಷರಾದ ಎ. ಎಸ್ ಚನ್ನಬಸಪ್ಪ ಚಂದ್ರಶೇಖರ್ ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿಪಿ ರಮೇಶ್ ಕುಮಾರ್ ನಗರ ಯೋಜನೆ ಪ್ರಾಧಿಕಾರದ ಅಧ್ಯಕ್ಷ ಕೆ. ಎಸ್. ಮಹೇಶ್, ವೀರಶೈವ ಲಿಂಗಾಯತ ನೌಕರರ ಬಳಗದ ಮಾಜಿ ಅಧ್ಯಕ್ಷ ಅರುಣ್ ಬಿ. ನರಂಗುದ್ ಮತ್ತು ಸಂಚಾಲಕರಾಗಿ ಎಪಿಎಂಸಿ ಮಾಜಿ ನಿರ್ದೇಶಕ ಎಲ್.ಪಿ.ರವಿಕುಮಾರ್ ಅವರನ್ನು ನೇಮಕ ಮಾಡಲಾಯಿತು.

ಉಳಿದಂತೆ ಸಾಲಿಗ್ರಾಮ ತಾಲೂಕು ಘಟಕದ ಅಡಹಾಕ್ ಸಮಿತಿ ಸದಸ್ಯರಾಗಿ ತಾಪಂ ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಕೆಡಗ ನಟರಾಜು, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ಉಪಾಧ್ಯಕ್ಷ ಭೇರ್ಯ ಪ್ರಕಾಶ್, ಕುಪ್ಪೆ ಗ್ರಾಮ ಮಾಜಿ ಉಪಾಧ್ಯಕ್ಷ ಕೆ.ವಿ. ನವೀನ್ ಕುಮಾರ್, ನಿವೃತ್ತ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಸಣ್ಣ ಲಿಂಗಪ್ಪ, ವೀರಶೈವ ಸಮಾಜದ ಹಿರಿಯ ಮುಖಂಡ ಸರಗೂರು ನಟರಾಜು ಮತ್ತು ಸಂಚಾಲಕರಾಗಿ ಗಾಯನಹಳ್ಳಿ ನಟರಾಜು ಅವರನ್ನು ನೇಮಕ ಮಾಡಲು ನಿರ್ಧಾರ ಕೈಗೊಳ್ಳಲಾಯಿತು.

ಅರ್ಜುನಹಳ್ಳಿ ಗ್ರಾಪಂ ಅಧ್ಯಕ್ಷ ಎ.ಆರ್. ಮಹದೇವಪ್ಪ, ತಾಲೂಕು ವೀರಶೈವ ಮಹಾಸಭಾ ತಾಲೂಕು ಘಟಕದ ಮಾಜಿ ಪ್ರಧಾನ ಕಾರ್ಯದರ್ಶಿ ಸಿ.ವಿ. ಗುಡಿ ಜಗದೀಶ್, ಪುರಸಭೆ ಮಾಜಿ ಉಪಾಧ್ಯಕ್ಷೆ ನಾಗರತ್ನಮ್ಮ, ತಾಲೂಕು ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ದಾಕ್ಷಾಯಿಣಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಜಶೇಖರ, ತಾಲೂಕು ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಲಾಲನಹಳ್ಳಿ ಮಹೇಶ್, ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಾರ್ಕಂಡೇಯಸ್ವಾಮಿ, ವೀರಶೈವ ಸಮಾಜದ ಮುಖಂಡರಾದ ಎಸ್.ವಿ. ಪ್ರಕಾಶ್, ಎ.ಎಲ್. ಜ್ಞಾನಾನಂದ್, ಮನೋಹರಿ, ಚಂದ್ರಶೇಖರ್, ಗಂಗಾಧರ್, ನಟರಾಜು, ಮಂಜುನಾಥ್ ಇದ್ದರು.