ಅರ್ಜುನ್ ಜನ್ಯ, ರಾಜೇಶ್ ಕೃಷ್ಣನ್, ಅವಿರ್ಭವ್ ಈ ವರ್ಷದ ತಾರಾ ಆಕರ್ಷಣೆ: ದಸರಾ ಸಾಂಸ್ಕೖತಿಕ ಸಮಿತಿಯಿಂದ ಆಯೋಜನೆ

| Published : Oct 02 2024, 01:02 AM IST

ಅರ್ಜುನ್ ಜನ್ಯ, ರಾಜೇಶ್ ಕೃಷ್ಣನ್, ಅವಿರ್ಭವ್ ಈ ವರ್ಷದ ತಾರಾ ಆಕರ್ಷಣೆ: ದಸರಾ ಸಾಂಸ್ಕೖತಿಕ ಸಮಿತಿಯಿಂದ ಆಯೋಜನೆ
Share this Article
  • FB
  • TW
  • Linkdin
  • Email

ಸಾರಾಂಶ

ಮಡಿಕೇರಿ ದಸರಾ ಜನೋತ್ಸವ ಪ್ರಯುಕ್ತ ಅ. 4ರಿಂದ 12 ರ ವರೆಗೆ ಪ್ರತಿನಿತ್ಯವೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಬಾರಿಯ ದಸರಾ ಜನಮನ ಸೆಳೆಯಲಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮಡಿಕೇರಿ ದಸರಾ ಜನೋತ್ಸವ ಪ್ರಯುಕ್ತ ಅ. 4 ರಿಂದ 12 ರವೆರೆಗೆ ಪ್ರತೀ ನಿತ್ಯವೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಹೆಚ್. ಟಿ ಮಾಹಿತಿ ನೀಡಿದ್ದಾರೆ.ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂಥರ್ ಗೌಡ, ಜಿಲ್ಲಾಧಿಕಾರಿ ಮತ್ತು ದಸರಾ ಸಮಿತಿ ಅಧ್ಯಕ್ಷರಾದ ವೆಂಕಟರಾಜಾ ಮಾರ್ಗದರ್ಶನದಲ್ಲಿ ದಸರಾ ಸಮಿತಿಯ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ರಾಜೇಶ್ ಬಿ ವೈ ಮತ್ತು ಖಜಾಂಜಿ ಅರುಣ್ ಶೆಟ್ಟಿ, ಸಮಿತಿ ಪದಾಧಿಕಾರಿಗಳ ಸಹಕಾರದೊಂದಿಗೆ ವೈವಿಧ್ಯಮಯ ಕಾರ್ಯಕ್ರಮಗಳು ಈ ಬಾರಿಯ ದಸರಾದಲ್ಲಿ ಜನಮನ ಸೆಳೆಯಲಿದೆ ಎಂದು ಅನಿಲ್ ತಿಳಿಸಿದ್ದಾರೆ.

ದಸರಾ ಕಾಯ೯ಕ್ರಮಗಳ ವಿವರ ಇಂತಿದೆ: ಅ. 4 ರಂದು ಮಡಿಕೇರಿಯ ಕಾವ್ಯಶ್ರೀ ಕಪಿಲ್ ಕಲಾಕಾವ್ಯ ತಂಡದಿಂದ ನೃತ್ಯ ವೈವಿಧ್ಯ, ಮೇವಡ ಕಾವೇರಿ ಅಯ್ಯಪ್ಪ ಮತ್ತು ತಂಡದಿಂದ ಗಾನಸುಧೆ, ಕೂಡಿಗೆಯ ಎ ಕ್ರಿಯೇಟೀವ್ ಡಾನ್ಸ್ ಅಕಾಡೆಮಿಯಿಂದ ಭಾರತೀಯ ಶಾಸ್ತ್ರೀಯ ನೃತ್ಯ, ಮೂರ್ನಾಡಿನ ಸ್ಟೆಪ್ ಅಪ್ ಶೇಡ ತಂಡದಿಂದ ನೃತ್ಯ ವೈಭವ, ನಿಮಿಷ, ನಾಪೋಕ್ಲುವಿನ ರವಿ ಓಂಕಾರ್ ತಂಡದಿಂದ ಸಂಗೀತ ರಸಮಂಜರಿ, ವಿರಾಜಪೇಟೆಯ ನಾಟ್ಯಾಂಜಲಿ ತಂಡದಿಂದ ನೃತ್ಯ ವೈವಿಧ್ಯ, ಸಂಪಾಜೆಯ ಸವಿತಾಕಿರಣ್ ತಂಡದಿಂದ ನೖತ್ಯ ವೈವಿಧ್ಯ, ಅ. 5 ರಂದು 11ನೇ ವರ್ಷದ ಮಕ್ಕಳ ದಸರಾ - ಬೆಳಗ್ಗೆ 9 ಗಂಟೆಯಿಂದ ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ಮಕ್ಕಳ ಸಂತೆ, ಮಕ್ಕಳ ಅಂಗಡಿ, ಮಕ್ಕಳ ಮಂಟಪ, ಛದ್ಮವೇಷ ಮತ್ತು ಕ್ಲೇಮಾಡೆಲಿಂಗ್ ಸ್ಪರ್ಧೆಗಳು, ಜತೆಗೆ ನಂಜನಗೂಡಿನ ಸುನಾದ್ ವಿನೋದಿನಿ ಸಂಗೀತ ಶಾಲಾ ತಂಡದಿಂದ ವಾದ್ಯ ಸಂಗೀತ, ಸಂಜೆ 6 ಗಂಟೆಯಿಂದ - ಹುಬ್ಬಳ್ಳಿಯ ಭೂಮಿಕಾ ದೀಪಿಕಾ ಅವರಿಂದ ಗಾನಸಂಜೆ, ಮಡಿಕೇರಿಯ ವಿಕ್ರಂ ಜಾದೂಗಾರ್ ಅವರಿಂದ ಮ್ಯೂಜಿಕ್ ಶೋ, ಬನ್ನೂರಿನ ಚಿಲಿಪಿಲಿ ಗೊಂಬೆಗಳಿಂದ ಮಕ್ಕಳಿಗೆ ರಂಜನೆ ಸೇರಿದಂತೆ ಮಕ್ಕಳ ತಂಡಗಳಿಂದ ವೈವಿಧ್ಯಮಯ ಕಾರ್ಯಕ್ರಮಗಳಿವೆ.

6 ರಂದು ಬೆಳಗ್ಗೆ 10 ಗಂಟೆಗೆ ಪ್ರಥಮ ವರ್ಷದ ಕಾಫಿ ದಸರಾಕ್ಕೆ ಚಾಲನೆ, ಡಾ. ಮಂಥರ್ ಗೌಡ ಮಾರ್ಗದರ್ಶನದಲ್ಲಿ ಕರ್ನಾಟಕ ಬೆಳೆಗಾರರ ಸಂಘ, ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್, ಕಾಫಿ ಮಂಡಳಿ, ತೋಟಗಾರಿಕೆ, ಕೃಷಿ, ಪಶುವೈದ್ಯಕೀಯ, ಮೀನುಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕಾಫಿ ದಸರಾ ಆಯೋಜನೆ, ಗಾಂಧಿ ಮೈದಾನದ ಗ್ಯಾಲರಿಯೊಳಗೆ 32 ಮಳಿಗೆಗಳಲ್ಲಿ ಕಾಫಿ, ಕೃಷಿ ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ ಸಂಬಂಧಿತ ಮಾಹಿತಿ ಪ್ರದರ್ಶನ, ವೇದಿಕೆಯಲ್ಲಿ ಕಾಫಿ ಮತ್ತು ಕೃಷಿಗೆ ಸಂಬಂಧಿಸಿದಂತೆ ವಿಷಯ ತಜ್ಞರಿಂದ ವಿಚಾರಸಂಕಿರಣ ಸಂಜೆ 6 ಗಂಟೆಯಿಂದ ಬೆಂಗಳೂರಿನ ಸರಿಗಮಪ ತಂಡದ ಜ್ಯುರಿ ಮಹೇಂದ್ರ ನೇತೖತ್ವದಲ್ಲಿ ಕಲಾವಿದರಾದ ದಿವ್ಯ ಹೆಗಡೆ, ರವಿಕುಮಾರ್, ಮೆಹಬೂಬ್ ಸಾಬ್, ಮಿಂಚು, ಪ್ರಗತಿ ಬಡಿಗೇರ್ , ಪೃಥ್ವಿ ಕುಂದಾಪುರ, ತಂಡದಿಂದ ಗಾನ ಸಂಭ್ರಮ, ಮಂಗಳೂರು ಗಾನನೖತ್ಯ ಅಕಾಡೆಮಿಯ ಟೀನಾ ಚೇತನ್ ತಂಡದಿಂದ ನೖತ್ಯ ವೈವಿಧ್ಯ - ಬೆಂಗಳೂರಿನ ಟೀಂ ಪೊನಿ ಧ್ವನಿ, ತಂಡದಿಂದ ಕೊಡಗಿನ ಸಂಸ್ಕೃತಿ ನೃತ್ಯ, ನಟರಾಜ ನೃತ್ಯ ನಿಕೇತನ ಕಲ್ಲುಗುಂಡಿ ತಂಡದಿಂದ ನೃತ್ಯ ವೈವಿಧ್ಯ.

7 ರಂದು ಬೆಳಗ್ಗೆ 10 ಗಂಟೆಯಿಂದ ಕಾಫಿ ದಸರಾ ಪ್ರಯುಕ್ತ ಮಳಿಗೆಗಳು ತೆರೆದಿರುತ್ತವೆ. ವೇದಿಕೆಯಲ್ಲಿ ಕಾಫಿ, ಕೃಷಿ ಸಂಬಂಧಿತ ಮಹತ್ವದ ವಿಚಾರಸಂಕಿರಣ ಆಯೋಜಿತವಾಗಿದೆ. ಸಂಜೆ 6 ಗಂಟೆಯಿಂದ ಸೋನಿ ರಿಯಾಲಿಟಿ ಶೋ ಸೂಪರ್ ಸ್ಟಾರ್ ಸಿಂಗರ್ ನ ವಿಜೇತ ಕೇರಳದ 7 ವರ್ಷದ ಬಾಲಕ ಅವಿರ್ಭವ್ ಹಾಡುಗಾರಿಕೆ, ಕುಶಾಲನಗರ ಏಂಜಲ್ ವಿಂಗ್ಸ್ ತಂಡದಿಂದ ನೃತ್ಯ ವೈವಿಧ್ಯ, ಕೊಡಗು ಪತ್ರಕರ್ತರ ಸಂಘದಿಂದ ಸಂಗೀತ ರಸಮಂಜರಿ, ಮಡಿಕೇರಿಯ ನಾಟ್ಯ ನಿಕೇತನ ತಂಡದಿಂದ ನೃತ್ಯ ಸಂಗಮ, ಮಡಿಕೇರಿಯ ಕಿಂಗ್ಸ್ ಆಫ್ ಕೂರ್ಗ್‌ ತಂಡದಿಂದ ಡಾನ್ಸ್ ಧಮಾಕ, ಟೀಮ್ ಆಫ್ ಡೆವಿಲ್ಸ್ ತಂಡದಿಂದ ನೖತ್ಯ ನಡೆಯಲಿದೆ.

8 ರಂದು 7 ನೇ ವರ್ಷದ ಮಹಿಳಾ ದಸರಾ, ಮಡಿಕೇರಿ ನಗರಸಭಾ ಸದಸ್ಯೆಯರು, ಕೊಡಗು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಮಹಿಳಾ ದಸರಾ ಕಾರ್ಯಕ್ರಮಗಳು ನಡೆಯಲಿವೆ. ಅಂದು ಬೆಳಗ್ಗೆ 10 ಗಂಟೆಯಿಂದಲೇ ಮಹಿಳೆಯರಿಗಾಗಿ ವೈವಿಧ್ಯಮಯ ಮನರಂಜನಾ ಸ್ಪರ್ಧೆಗಳು ಆಯೋಜಿತವಾಗಿದೆ, ಕಣ್ಣಿಗೆ ಬಟ್ಟೆ ಕಟ್ಟಿ ಮೇಕಪ್, ಮೆಹಂದಿ, ಹಾಕುವ ಸ್ಪರ್ಧೆ, ಸಾಂಪ್ರದಾಯಿಕ ಉಡುಗೆ ಸ್ಪರ್ಧೆ, ಬಲೂನ್ ಗ್ಲಾಸ್ ಸ್ಪರ್ಧೆ, ಬಾಂಬ್ ಇನ್ ದಿ ಸಿಟಿ, ಅಜ್ಜಿ ಜೊತೆ ಮೊಮ್ಮಕ್ಕಳ ನಡಿಗೆ, ಗಾರ್ಭ ಡ್ಯಾನ್ಸ್, ವಾಲಗತ್ತಾಟ್, ನಾರಿಗೆ ಒಂದು ಸೀರೆ, ಕಪ್ಪೆ ಜಿಗಿತ, ಕೇಶ ವಿನ್ಯಾಸ, ಒಂಟಿ ಕಾಲಿನ ಓಟದ ಸ್ಪರ್ಧೆಗಳು ಮಹಿಳೆಯರಿಗಾಗಿ ಆಯೋಜಿತವಾಗಿದೆ. ವಿವಿಧ ಕಾರ್ಯಕ್ರಮಗಳು. ಬೆಂಗಳೂರಿನ ಹೇಮ ವೆಂಕಟ್ ಅವರಿಂದ ದಾರದಲ್ಲಿ ದುರ್ಗೆಯ ಚಿತ್ರರಚನೆಯ ಆಕಷ೯ಣೆ, ಪೊನ್ನಂಪೇಟೆಯ ರೇಖಾ ಶ್ರೀಧರ್ ತಂಡದಿಂದ ನೃತ್ಯ ಆಯೋಜಿಸಲ್ಪಟ್ಟಿದೆ.

ಅಂದು ಸಂಜೆ 6 ಗಂಟೆಗೆ ರಿಯಾಲಿಟಿ ಶೋ , ಸರಿಗಮಪ ಕಲಾವಿದೆಯರಾದ ಸುರೇಖಾ, ರಮ್ಯ, ರೇಷ್ಮಾ, ಫ್ರಥ್ವಿ ಭಟ್, ಸ್ನೇಹ ನೀಲಪ್ಪ ಗೌಡ ಅವರಿಂದ ಗಾನ ಸುಧೆ, ಮಹಿಳೆಯರಿಂದ ವೈವಿಧ್ಯಮಯ ಕಾರ್ಯಕ್ರಮಗಳು.

ಅ. 9ರಂದು ಖ್ಯಾತ ಕಲಾವಿದೆ ಕೋಟೇರ ಯಾಮಿನಿ ಮುತ್ತಣ್ಣ ಮತ್ತು ತಂಡದಿಂದ ದೇವಿಮಾರ್ಗ ನೃತ್ಯ ರೂಪಕ,

ಮಡಿಕೇರಿಯ ವಿಂಗ್ಸ್ ಆಫ್ ಫ್ಯಾಷನ್ ತಂಡದಿಂದ- ನೃತ್ಯ ಸೌರಭ, ಮೈಸೂರಿನ ಶ್ರೀ ಗುರು ಸಂಗೀತ ಸೇವಾ ಸಂಘದಿಂದ ಗಾನಸುಧೆ ಮೈಸೂರಿನ ನಿತ್ಯನಿರಂತರ ವಿಶೇಷ ಚೇತನ ಮಕ್ಕಳಿಂದ ಕರ್ನಾಟಕ ವೈಭವ ನೃತ್ಯ ರೂಪಕ, ಮಂಗಳೂರಿನ ಯಶಸ್ವಿ ಡಾನ್ಸ್ ಗ್ರೂಪ್ ತಂಡದಿಂದ ಕಡಲ ಹಬ್ಬ ನೃತ್ಯ ವೈವಿಧ್ಯ, ಕೂರ್ಗ್‌ ಮೆಲೋಡೀಸ್ ತಂಡದಿಂದ ಸಂಗೀತ ರಸಮಂಜರಿ ಆಯೋಜಿತವಾಗಿದೆ, 10 ರಂದು ಬೆಳಗ್ಗೆ 9.30 ಗಂಟೆಯಿಂದ ಕೊಡಗು ಜಿಲ್ಲಾ ಜಾನಪದ ಪರಿಷತ್ ಸಹಯೋಗದಲ್ಲಿ 5ನೇ ವರ್ಷದ ಜಾನಪದ ದಸರಾ ಆಯೋಜಿತವಾಗಿದೆ. ಜಿಲ್ಲೆ ಮತ್ತು ಹೊರಜಿಲ್ಲೆಗಳ ಜಾನಪದ ಕಲಾತಂಡಗಳ ಜಾಥಾ ಜನರಲ್ ತಿಮ್ಮಯ್ಯ ವೃತ್ತದಿಂದ ಗಾಂಧಿ ಮೈದಾನದವರೆಗೆ ಸಾಗಲಿದ್ದು, ಕಲಾಸಂಭ್ರಮ ವೇದಿಕೆಯಲ್ಲಿ ಕಲಾತಂಡಗಳಿಂದ ವೈವಿಧ್ಯಮಯ ಜಾನಪದ ಕಲಾ ಪ್ರದರ್ಶನ ಆಯೋಜಿತವಾಗಿದೆ, ಇದೇ ಸಂದರ್ಭ ಪೊನ್ನಚ್ಚನ ಮಧುಸೂದನ್ ಸಂಗ್ರಹದ ಜಾನಪದ ಪರಿಕರಗಳ ಪ್ರದರ್ಶನ ಕೂಡ ಆಯೋಜಿತವಾಗಿದೆ. ಸಂಜೆ 6 ಗಂಟೆಯಿಂದ ಯುವ ದಸರಾ ಆಯೋಜಿತವಾಗಿದೆ.

11 ರಂದು ಆಯುಧಪೂಜಾ ದಿನ ಸಂಜೆ 6 ಗಂಟೆಗೆ ಮಡಿಕೇರಿಯ ನಾಟ್ಯ ಕಲಾ ಡಾನ್ಸ್ ಸ್ಟುಡಿಯೋ ತಂಡದಿಂದ ಡಾವ್ಸ್ ಸಂಗಮ, ಟೀಂ ಇಂಟೋಪೀಸ್ ವಿರಾಜಪೇಟೆ ತಂಡದಿಂದ ನೃತ್ಯ ವೈವಿಧ್ಯ, ಮೈಸೂರಿನ ನಾದವಿದ್ಯಾಲಯ ಸಂಗೀತ ನೃತ್ಯ ಅಕಾಡೆಮಿ ತಂಡದಿಂದ ಮಹಿಷಾಸುರ ಮರ್ದಿನಿ ನೃತ್ಯ, ಮಡಿಕೇರಿಯ ಕಂಚಿಕಾಮಾಕ್ಷಿ ತಂಡದಿಂದ ನೃತ್ಯ, ರಾತ್ರಿ 8.30 ಗಂಟೆಯಿಂದ ಖ್ಯಾತ ಹಿನ್ನೆಲೆ ಗಾಯಕ, ಸಂಗೀತ ನಿರ್ದೇಶಕರಾದ ಅರ್ಜುನ್ ಜನ್ಯ, ರಾಜೇಶ್ ಕೃಷ್ಣನ್, ಶಮಿತಾ ಮಲ್ನಾಡ್ ತಂಡದಿಂದ ಸಂಗೀತ ರಸಮಂಜರಿ

12 ರಂದು ವಿಜಯದಶಮಿ ಸಂಜೆ 6 ಗಂಟೆಯಿಂದ ಜೀ ಕನ್ನಡ ಸರಿಗಮಪ ಲಿಟಲ್ ಚಾಂಪ್ 19ರ - ರನ್ನರ್ ಅಪ್ ತನುಶ್ರೀ ಮಂಗಳೂರು ಬಾಳೆಲೆಯ ಸರಿಗಮಪ ಗಾಯಕ ಅನ್ವಿತ್ ಹಾಗೂ ಬೆಂಗಳೂರಿನ, ಪ್ರಜ್ಞಾ ಮರಾಠೆ ಅವರಿಂದ ಸಂಗೀತ ಸಂಜೆ , ಕನ್ನಡ ಸಿರಿ ಸ್ನೇಹಬಳಗ ಲೋಕೇಶ್ ಸಾಗರ್ ತಂಡದಿಂದ ಗಾನಸುಧೆ, ಪೊನ್ನಂಪೇಟೆಯ ನಾಟ್ಯ ಸಂಕಲ್ಪ ತಂಡದಿಂದ ನೖತ್ಯ ವೈವಿಧ್ಯ, ಮೈಸೂರಿನ ನೃತ್ಯ ವಿದ್ಯಾಪೀಠ ತಂಡದಿಂದ ಕನ್ನಡ ನೃತ್ಯ ಸಿರಿ, ರಾತ್ರಿ 10 ಗಂಟೆಯಿಂದ ಮರುದಿನ ಬೆಳಗ್ಗಿನ ಜಾವದವರೆಗೂ ಖ್ಯಾತ ತಂಡದಿಂದ ಸಂಗೀತ ರಸಮಂಜರಿ ಆಯೋಜಿತವಾಗಿದೆ ಎಂದು ಅನಿಲ್ ಎಚ್ ಟಿ ಮಾಹಿತಿ ನೀಡಿದ್ದಾರೆ.

ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಗಾಂಧಿ ಮೈದಾನದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ವೈದ್ಯಕೀಯ ನೆರವಿಗೂ ಜಿಲ್ಲಾಧಿಕಾರಿಗಳ ಸಹಕಾರದಿಂದ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಮಡಿಕೇರಿ ದಸರಾ ಸಾಂಸ್ಕೖತಿಕ ಸಮಿತಿಯಲ್ಲಿ ಸಂಚಾಲಕರಾಗಿ ತೆನ್ನೀರಾ ಮೈನ, ಸದಸ್ಯರಾಗಿ ಕುಡೆಕಲ್ ಸಂತೋಷ್, ಲೀಲಾಶೇಷಮ್ಮ, ವೀಣಾಕ್ಷಿ ರವಿಕುಮಾರ್, ಭಾರತಿ ರಮೇಶ್, ಮಿನಾಜ್, ಪ್ರವೀಣ್, ಪುದಿಯನೆರವನ ರೇವತಿ ರಮೇಶ್, ಪಾಲೆಯಂಡ ರೂಪಾ ಸುಬ್ಬಯ್ಯ, ಸತ್ಯ ಮಂಜು, ಕವನ್ ಕುತ್ತೋಳಿ, ಅರ್ಜುನ್ ರಾಜೇಂದ್ರ, ದಿವಾಕರ್ ರೈ, ಚೇಂದ್ರಿಮಾಡ ವಿನು ಈರಪ್ಪ, ನಿರಂಜನ್, ತಳೂರು ಡೀನಾ ವಿನಯಕಾಂತ್ ಕಾರ್ಯನಿರ್ವಹಿಸಿ ತಂಡಗಳ ಆಯ್ಕೆ ಮಾಡಿದ್ದಾರೆ ಎಂದೂ ಸಾಂಸ್ಕೃತಿಕ ಸಮಿತಿ ಪ್ರಕಟಣೆ ತಿಳಿಸಿದೆ.