ಸರ್ಕಾರಿ ನೌಕರರ ಆರೋಗ್ಯ ಹಿತದೃಷ್ಟಿಗೆ ಆರೋಗ್ಯ ಸಂಜೀವಿನಿ ಅನುಕೂಲ: ಶಾಸಕ ರಾಘವೇಂದ್ರ ಹಿಟ್ನಾಳ

| Published : Mar 11 2024, 01:18 AM IST

ಸರ್ಕಾರಿ ನೌಕರರ ಆರೋಗ್ಯ ಹಿತದೃಷ್ಟಿಗೆ ಆರೋಗ್ಯ ಸಂಜೀವಿನಿ ಅನುಕೂಲ: ಶಾಸಕ ರಾಘವೇಂದ್ರ ಹಿಟ್ನಾಳ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ನೌಕರರಿಗೆ ಹಾಗೂ ಅವರ ಅವಲಂಬಿತ ಕುಟುಂಬದವರಿಗೆ ಜ್ಯೋತಿ ಸಂಜೀವಿನಿ ಯೋಜನೆಯ ಭಾಗ್ಯ ಎಲ್ಲರಿಗೂ ಲಭ್ಯ ಆಗಲಿ.

ಕೊಪ್ಪಳ: ಸರ್ಕಾರಿ ನೌಕರರಿಗೆ ಹಾಗೂ ಅವರ ಅವಲಂಬಿತ ಕುಟುಂಬದವರಿಗೆ ಜ್ಯೋತಿ ಸಂಜೀವಿನಿ ಯೋಜನೆಯ ಭಾಗ್ಯ ಎಲ್ಲರಿಗೂ ಲಭ್ಯ ಆಗಲಿ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.ನಗರದ ಎಂ.ಪಿ. ಪ್ಯಾಲೆಸ್‌ನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದಿಂದ ಜರುಗಿದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ, ಜ್ಯೋತಿ ಸಂಜೀವಿನಿ ಕಾರ್ಡ್ ವಿತರಣೆ, ತಾಲೂಕು ಮಟ್ಟದ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ನೌಕರರು ತಮ್ಮ ಸೇವಾ ಅವಧಿಯಲ್ಲಿ ತೀವ್ರ ತರಹದ ಕಾಯಿಲೆಗೆ ಒಳಗಾದ ಸಮಯದಲ್ಲಿ ಅವರು ಗುಣಮುಖರಾಗಲು ಹೆಚ್ಚಿನ ಹಣ ವೆಚ್ಚ ಮಾಡಬೇಕಿತ್ತು. ವೆಚ್ಚ ಮಾಡಿದ ಹಣವನ್ನು ಹಿಂಭರಿಸಬೇಕಾದರೆ ಅನೇಕ ತೊಂದರೆಗಳ ಜೊತೆಯಲ್ಲಿ ಕಡಿಮೆ ಮೊತ್ತ ಹಣ ಸಂದಾಯವಾಗುತ್ತಿತ್ತು. ಇದನ್ನು ಅರಿತ ಸರ್ಕಾರ ಏಳು ತೀವ್ರ ತರಹದ ಕಾಯಿಲೆಗಳಿಗೆ, ನೌಕರರ ಒಳಗಾದ ಕಾಯಿಲೆಗೆ ಸಮಯದಲ್ಲಿ ನೌಕರರನಿಗೆ ತೊಂದರೆಯಾಗಬಾರದು. ಜೊತೆಯಲ್ಲಿ ಚಿಕಿತ್ಸೆ ಕೂಡ ಬೇಗನೆ ದೊರೆಯಲಿ ಎಂಬ ನಿಟ್ಟಿನಲ್ಲಿ ಸರ್ಕಾರ ಜ್ಯೋತಿ ಸಂಜೀವಿನಿ ಕಾರ್ಡಿನ ಭಾಗ್ಯ ನೀಡಿದೆ ಎಂದರು.ಮಹಿಳೆಯರು ಅನೇಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಸಾಧನೆ ಮಾಡಿದ್ದಾರೆ. ಸಂವಿಧಾನವು ಕೂಡ ಅವರಿಗೆ ವಿಶೇಷವಾದ ಸೌಲಭ್ಯ ನೀಡುವುದರ ಜತೆಗೆ ಅವರ ಸಬಲೀಕರಣಕ್ಕಾಗಿ ಶ್ರಮಿಸುತ್ತಿದೆ. ೧೦ನೇ ತರಗತಿ ಸೇರಿದಂತೆ ವಿವಿಧ ಪರೀಕ್ಷೆಯಲ್ಲಿ ಜಿಲ್ಲೆ ಮೊದಲ ಸ್ಥಾನ ಬರುವ ಹಾಗೇ ಕಠಿಣ ಪರಿಶ್ರಮವನ್ನು ಶಿಕ್ಷಕರು ಪಡಬೇಕು. ಶಿಕ್ಷಕರು ತಮ್ಮ ಜವಾಬ್ದಾರಿ ಅರಿತು ಕಾರ್ಯ ನಿರ್ವಹಿಸಬೇಕು. ಶಾಸಕರ ಅನುದಾನದಲ್ಲಿ ಬಹುಪಾಲನ್ನು ಶೈಕ್ಷಣಿಕ ಅಭಿವೃದ್ಧಿಗೆ ಬಳಸಲಾಗಿದೆ ಎಂದರು.ಅಪರ ಜಿಲ್ಲಾಧಿಕಾರಿ ಸಾವಿತ್ರಿ ಕಡಿ, ಎಸ್ಪಿ ಯಶೋದಾ ವಂಟಿಗೊಡಿ, ವಿಪ ಸದಸ್ಯೆ ಹೇಮಲತಾ ನಾಯಕ, ಜಿಪಂ ಮಾಜಿ ಅಧ್ಯಕ್ಷ ರಾಜಶೇಖರ ಹಿಟ್ನಾಳ, ಡಿಸಿಸಿ ಬ್ಯಾಂಕ್ ಕಲಬುರಗಿಯ ಉಪಾಧ್ಯಕ್ಷ ಸುರೇಶ ಸಜ್ಜನ, ಕ್ಷೇತ್ರ ಶಿಕ್ಷಣಾಧಿಕಾರಿ ಶಂಕ್ರಯ್ಯ ಟಿ.ಎಸ್. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ನಾಗರಾಜ ಜುಮ್ಮಣ್ಣನ್ನವರ ಆಶಯ ನುಡಿಗಳನ್ನಾಡಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷ ಹೋಳಿಬಸಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಹೋರಾಟಗಾರ್ತಿ ಸಾವಿತ್ರಿ ಮುಜಮದಾರ ಉಪನ್ಯಾಸ ನೀಡಿದರು. ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದ ಹುಚ್ಚಮ್ಮ ಚೌದ್ರಿ ಹಾಗೂ ಡಿಸಿಸಿ ಬ್ಯಾಂಕ್ ಕಲಬುರಗಿಯ ಉಪಾಧ್ಯಕ್ಷ ಸುರೇಶ ಸಜ್ಜನ ಅವರನ್ನು ಸನ್ಮಾನಿಸಲಾಯಿತು.

ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ, ಅಕ್ಷರ ದಾಸೋಹ ತಾಲೂಕು ಅಧಿಕಾರಿ ಹನುಮಂತಪ್ಪ, ಕ್ಷೇತ್ರ ಸಮನ್ವಯಾಧಿಕಾರಿ ಪ್ರಕಾಶ ತಗಡಿನಮನಿ, ನೌಕರರ ಸಂಘದ ರಾಜ್ಯ ಪರಿಷತ್ತಿನ ಸದಸ್ಯ ಗೋಪಾಲ, ಕಾರ್ಯಾಧ್ಯಕ್ಷ ಶಿವಪ್ಪ ಜೋಗಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಕಾರ್ಯಕಾರಿ ಸಮಿಯ ಸದಸ್ಯ ನಿಂಗಪ್ಪ, ಪ್ರಾಣೇಶ ಪೂಜಾರ ಇದ್ದರು.