ನಾಲ್ವರ ಬಂಧನ: ಚಿನ್ನಾಭರಣ, ಬೈಕ್‌ ವಶ

| Published : Jun 16 2024, 01:51 AM IST

ಸಾರಾಂಶ

ಚನ್ನಪಟ್ಟಣ: ಪುರ ಪೊಲೀಸ್ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿ, ಅವರಿಂದ ೭೯ ಗ್ರಾಂ ಚಿನ್ನಾಭರಣ ಹಾಗೂ ಕಳ್ಳತನಕ್ಕೆ ಬಳಸುತ್ತಿದ್ದ ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.

ಚನ್ನಪಟ್ಟಣ: ಪುರ ಪೊಲೀಸ್ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿ, ಅವರಿಂದ ೭೯ ಗ್ರಾಂ ಚಿನ್ನಾಭರಣ ಹಾಗೂ ಕಳ್ಳತನಕ್ಕೆ ಬಳಸುತ್ತಿದ್ದ ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ. ಮೈಸೂರು ನಗರದ ಮೇಟಿಗಳ್ಳಿ ನಿವಾಸಿಗಳಾದ ರವಿ, ಚಂದನ್ ಶೇಖರ್, ಸೈಯದ್ ಹುಸೇನ್‌ ಹಾಗೂ ಮೈಸೂರಿನ ಬೋಗಾದಿ ಗ್ರಾಮದ ರಾಜೇಂದ್ರಸಿಂಗ್ ಬಂಧಿತರು.

ಜೂನ್‌ ೧ರಂದು ಚನ್ನಪಟ್ಟಣದ ಮರಳುಹೊಲದ ರಾಜು ಕುಟುಂಬಸ್ಥರೊಂದಿಗೆ ಧರ್ಮಸ್ಥಳಕ್ಕೆ ಹೋಗಿದ್ದ ವೇಳೆ ಮನೆಯ ಬಾಗಿಲು ಮುರಿದು ೨.೮೪ ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ೬೫ ಸಾವಿರ ನಗದು ಕಳವು ಮಾಡಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಮಾರ್ಗದರ್ಶನ, ಚನ್ನಪಟ್ಟಣ ಡಿವೈಎಸ್‌ಪಿ ಕೆ.ಸಿ.ಗಿರಿ ನೇತೃತ್ವದಲ್ಲಿ ತನಿಖೆ ನಡೆಸಿದ ಪುರಪೊಲೀಸ್ ಠಾಣೆ ವೃತ್ತ ನಿರೀಕ್ಷಕ ರವಿಕಿರಣ್, ಸಿಬ್ಬಂದಿಗಳಾದ ಸುಭಾಷ್, ಭೈರಪ್ಪ, ಪ್ರಶಾಂತ್, ತವನಪ್ಪ, ಶಿವರಾಜು, ಪವನ್ ಕುಮಾರ್ ಪ್ರಕರಣವನ್ನು ಬೇಧಿಸಿ ನಾಲ್ವರನ್ನು ಬಂಧಿಸಿದ್ದು, ಅಂದಾಜು ೬ ಲಕ್ಷ ರು. ಮೌಲ್ಯದ ೭೯ ಗ್ರಾಂ ಚಿನ್ನಾಭರಣ ಹಾಗೂ ಕಳ್ಳತನಕ್ಕೆ ಬಳಸುತ್ತಿದ್ದ ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ.