ಕಲೆ, ಕಲಾವಿದರನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು: ಬಸವಲಿಂಗ ಶ್ರೀಗಳು

| Published : Mar 05 2024, 01:32 AM IST

ಸಾರಾಂಶ

ಜನಪದ ಕಲೆ ಉಳಿಸುವ ನಿಟ್ಟಿನಲ್ಲಿ ಹಳ್ಳಿಗಳಲ್ಲಿ ಜನಪದ ಕಲಾವಿದರನ್ನು ಗುರುತಿಸುವ ಕೆಲಸವಾಗಬೇಕು

ಕನ್ನಡಪ್ರಭ ವಾರ್ತೆ ಅಫಜಲ್ಪುರ/ಕರಜಗಿ

ಆಧುನಿಕತೆಯ ಭರಾಟೆಗೆ ಸಿಲುಕಿ ಜನಪದ ಕಲೆಗಳು ನಶಿಸಿ ಹೋಗುತ್ತಿವೆ. ನಶಿಸಿ ಹೋಗುತ್ತಿರುವ ಇಂತಹ ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ರಿಕಾರ್ಡಿಂಗ್ ಸ್ಟುಡಿಯೋ ಉದ್ಘಾಟನೆಯಾಗಿದ್ದು, ಸ್ವಾಗತಾರ್ಹವಾಗಿದೆ ಎಂದು ನಾಗಣಸೂರದ ಅಭಿನವ ಬಸವಲಿಂಗ ಶ್ರೀಗಳು ಹೇಳಿದರು.

ಅವರು ತಾಲೂಕಿನ ಮಣ್ಣೂರ ಗ್ರಾಮದಲ್ಲಿ ಗೌರಿ ರಿಕಾರ್ಡಿಂಗ್ ಸ್ಟುಡಿಯೋ ಉದ್ಘಾಟಿಸಿ ಮಾತನಾಡಿ, ಜನಪದ ಕಲೆ ಉಳಿಸುವ ನಿಟ್ಟಿನಲ್ಲಿ ಹಳ್ಳಿಗಳಲ್ಲಿ ಜನಪದ ಕಲಾವಿದರನ್ನು ಗುರುತಿಸುವ ಕೆಲಸವಾಗಬೇಕು. ಇಲಾಖೆಯ ಜೊತೆಗೆ ಸಂಘ ಸಂಸ್ಥೆಗಳು ಕೂಡ ಗ್ರಾಮೀಣ ಪ್ರದೇಶದಲ್ಲಿ ಕಲೆಗಳು ಮತ್ತು ಕಲಾವಿದರನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು. ಗ್ರಾಮೀಣ ಪ್ರದೇಶದ ಯುವ ಕಲಾವಿದರಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಗೌರಿ ರಿಕಾರ್ಡಿಂಗ್ ಸ್ಟುಡಿಯೋ ಉದ್ಘಾಟನೆಯಾಗಿದ್ದು. ಗ್ರಾಮೀಣ ಪ್ರದೇಶದ ಯುವ ಜನತೆ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.

ಸರ್ಕಾರ ಗಡಿಭಾಗದಲ್ಲಿರುವ ಕಲಾವಿದರನ್ನು ಗುರುತಿಸಿ ಅವಕಾಶ ಕೊಟ್ಟಾಗ ಮಾತ್ರ ಅವರು ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ನಾಗಣಸೂರದ ಅಭಿನವ ಬಸವಲಿಂಗ ಶ್ರೀಗಳು ಹೇಳಿದರು.

ಅವರು ತಾಲೂಕಿನ ಮಣ್ಣೂರ ಗ್ರಾಮದಲ್ಲಿ ಗೌರಿ ರೆಕಾರ್ಡಿಂಗ್‌ ಸ್ಟುಡಿಯೋ ಉದ್ಘಾಟಿಸಿ ಮಾತನಾಡಿ, ಕರಜಗಿ ಹೋಬಳಿಯಲ್ಲಿ ಸಮೀಪದಲ್ಲಿ ಯಾವುದೇ ರೆಕಾರ್ಡಿಂಗ್‌ ಸ್ಟುಡಿಯೋ ಇರಲಿಲ್ಲ. ಈ ಭಾಗದ ಜನರು ವಿಜಯಪುರ ಹಾಗೂ ಸೋಲಾಪುರಕ್ಕೆ ಹೋಗಿ ರೆಕಾರ್ಡಿಂಗ್‌ ಮಾಡುವಂತಹ ಪರಿಸ್ಥಿತಿಯಿತ್ತು. ಇವತ್ತು ಮಣ್ಣೂರ ಗ್ರಾಮದಲ್ಲಿಯೇ ಗೌರಿ ರೆಕಾರ್ಡಿಂಗ ಸ್ಟುಡಿಯೋ ಪ್ರಾರಂಭವಾಗಿದೆ.

ಇದರಿಂದ ಎಲ್ಲರಿಗೂ ತುಂಬಾ ಅನಕೂಲವಾಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕ್ಲಬ್ ಕಲಾವಿದ ಗೌರಿಶಂಕರ ನಾಗಣಸೂರ ಹಾಲಯ್ಯಾ ಸ್ವಾಮಿ ಹಿರೇಮಠ, ಕರಿಸಿದ್ದೇಶ್ವರ ಮುತ್ಯಾ, ಯಲ್ಲಮ್ಮದೇವಿ ಟ್ರಸ್ಟ ಕಮಿಟಿ ಅಧ್ಯಕ್ಷ ಮಹಾದೇವಪ್ಪ ಕರೂಟಿ ಸುಭಾಷ ಕರೂಟಿ, ವಿಶ್ವನಾಥ ಕೊಪ್ಪಾ ಪ್ರವೀಣ ಗಾಡದ, ಶರಣಪ್ಪ ಕರೂಟಿ, ಹಣಮಂತ ಜಾನಕಾರ, ಸಿದ್ದು ಬಜಂತ್ರಿ ಇತರರಿದ್ದರು.