ಸಾರಾಂಶ
ಲೋಕಪಯೋಗಿ ಇಲಾಖೆಯಿಂದ ಮುಂಜೂರಾಗಿದ್ದ 6.50 ಕೋಟಿ ರು. ವೆಚ್ಚದ ಕಾಮಗಾರಿಗೆ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಗುದ್ದಲಿ ಪೂಜೆ. ಕಾಮಗಾರಿ ಅತಿ ಶೀಘ್ರದಲ್ಲೇ ಪ್ರಾರಂಭವಾಗಿ ಒಂದು ವರ್ಷದೊಳಗೆ ಕಟ್ಟಡ ಪೂರ್ಣವಾಗಿ ಉದ್ಘಾಟನೆಗೆ ಸಜ್ಜಾಗುತ್ತದೆ ಎಂದು ಭರವಸೆ. ಹಾಗೇ, ಸಾಗ್ಯ ಗ್ರಾಮದಲ್ಲಿ ಜೆ.ಜೆ.ಎಂ. ಯೋಜನೆ ಅಡಿಯ ಅನುದಾನದಲ್ಲಿ ಬಿಡುಗಡೆಯಾಗಿದ್ದ 84 ಲಕ್ಷ ರು. ವೆಚ್ಚದ ಬೋರ್ ವೆಲ್ ಹಾಗೂ ಓವರ್ ಟ್ಯಾಂಕ್ ನಿರ್ಮಿಸುವ ಕಾಮಗಾರಿಗೆ ಗುದ್ದಲಿ ಪೂಜೆ.
ಕನ್ನಡಪ್ರಭ ವಾರ್ತೆ ಹಲಗೂರು
ಸಮೀಪದ ಚಿಲ್ಲಾಪುರ ಗೇಟ್ ಬಳಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಗುದ್ದಲಿ ಪೂಜೆ ನೆರವೇರಿಸಿದರು.ಲೋಕಪಯೋಗಿ ಇಲಾಖೆಯಿಂದ ಮುಂಜೂರಾಗಿದ್ದ 6.50 ಕೋಟಿ ರು. ವೆಚ್ಚದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಶಾಸಕರು, ಕಾಮಗಾರಿ ಅತಿ ಶೀಘ್ರದಲ್ಲೇ ಪ್ರಾರಂಭವಾಗಿ ಒಂದು ವರ್ಷದೊಳಗೆ ಕಟ್ಟಡ ಪೂರ್ಣವಾಗಿ ಉದ್ಘಾಟನೆಗೆ ಸಜ್ಜಾಗುತ್ತದೆ ಎಂದು ಭರವಸೆ ನೀಡಿದರು.
ಇದರ ಪಕ್ಕದಲ್ಲೇ ಸಮುದಾಯ ಆರೋಗ್ಯ ಕೇಂದ್ರ ಮಾಡಲಾಗುತ್ತದೆ. ಇದರಿಂದ ಹಲಗೂರು ಶಿಕ್ಷಣ ಮತ್ತು ಆರೋಗ್ಯದಲ್ಲಿ ಕೇಂದ್ರ ಸ್ಥಾನವಾಗಿದೆ. ಎಲ್ಲ ಸರ್ಕಾರಿ ಸೌಲಭ್ಯಗಳು ಸಿಗುತ್ತವೆ ಎಂದರು.ಹಲಗೂರು ಪಂಚಾಯ್ತಿ ತಾಲೂಕಿನಲ್ಲೆ ದೊಡ್ಡ ಪಂಚಾಯ್ತಿಯಾಗಿದೆ. ಇದರ ಕಾರ್ಯ ವ್ಯಾಪ್ತಿ ಹೆಚ್ಚಾದಂತೆ ಜವಾಬ್ದಾರಿಯು ಹೆಚ್ಚಾಗುತ್ತದೆ. ಪಂಚಾಯ್ತಿ ಪ್ರಮುಖರು ಇದನ್ನೆಲ್ಲ ಸರಿದೂಗಿಸಿಕೊಂಡು ಹೋಗಬೇಕೆಂದು ಆಶಿಸುತ್ತೇನೆ ಎಂದರು.
ಈ ವೇಳೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಜನಾರ್ಧನ್, ತೊರೆಕಾಡನಹಳ್ಳಿ ಗ್ರಾಪಂ ಅಧ್ಯಕ್ಷ ಎಚ್.ಕೆ. ತೇಜ್ ಕುಮಾರ್ (ಶ್ಯಾಮ್), ಪಿಡಿಒ ಪ್ರಸಾದ್ ಕುಮಾರ್, ಸದಸ್ಯರಾದ ಸುಮಲತಾ ರವಿ, ಹಲಗೂರು ಗ್ರಾಪಂ ಅಧ್ಯಕ್ಷೆ ರಕ್ಷಿತಾ, ಜಿಪಂ ಮಾಜಿ ಸದಸ್ಯ ಚಂದ್ರಕುಮಾರ್, ಮುಖಂಡರಾದ ದೇವರಾಜು, ಮಹಾದೇವ, ಮೋಹನ ಕುಮಾರ್, ಮಂಜು, ಎಚ್.ವಿ.ರಾಜು, ಕೆಂಪಯ್ಯ, ಸಿದ್ದಪ್ಪ, ಸೇರಿದಂತೆ ಇತರರು ಇದ್ದರು.ಕುಡಿಯುವ ನೀರಿಗೆ ಆದ್ಯತೆ: ಶಾಸಕ ನರೇಂದ್ರಸ್ವಾಮಿಹಲಗೂರು: ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಅದಕ್ಕೆ ಮೊದಲು ಆದ್ಯತೆ ನೀಡುವುದಾಗಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.
ಸಮೀಪದ ಸಾಗ್ಯ ಗ್ರಾಮದಲ್ಲಿ ಜೆ.ಜೆ.ಎಂ. ಯೋಜನೆ ಅಡಿಯ ಅನುದಾನದಲ್ಲಿ ಬಿಡುಗಡೆಯಾಗಿದ್ದ 84 ಲಕ್ಷ ರು. ವೆಚ್ಚದ ಬೋರ್ ವೆಲ್ ಹಾಗೂ ಓವರ್ ಟ್ಯಾಂಕ್ ನಿರ್ಮಿಸುವ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಗ್ರಾಮದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಕ್ರಮ ವಹಿಸುವುದಾಗಿ ಹೇಳಿದರು.ಈ ವೇಳೆ ಮುಖಂಡರಾದ ಚಿಕ್ಕಸ್ವಾಮಿ, ರಾಜಣ್ಣ, ಕೆಂಪಯ್ಯ, ನಾಗೇಂದ್ರ, ಸುರೇಶ, ಬೇಕರಿ ಜಗದೀಶ, ಮಹಾದೇವ,ಸೋಮಶೇಖರ ಸೇರಿದಂತೆ ಇತರರು ಇದ್ದರು.