ಹಾರಕೂಡ ನಾಟ್ಯ ಸಂಘದಿಂದ ಕಲಾವಿದರ ಗುರುತಿಸುವ ಕಾರ್ಯ

| Published : Oct 10 2024, 02:26 AM IST

ಸಾರಾಂಶ

ಚಿಂಚೋಳಿ ತಾಲೂಕಿನ ರಂಗಭೂಮಿ ಕಲಾವಿದರು, ನಾಟಕ ಅಕಾಡೆಮಿ ಮತ್ತು ಕುಮಾರೇಶ್ವರ ಶ್ರೀ ಪ್ರಶಸ್ತಿ ಪಡೆದ ಕಲಾವಿದರನ್ನು ಪುರಸಭೆ ಅಧ್ಯಕ್ಷ ಆನಂದಕುಮಾರ ಟೈಗರ ಸನ್ಮಾನಿಸಿದರು.

ಕನ್ನಡಪ್ರಭ ವಾರ್ತೆ ಚಿಂಚೋಳಿ

ಹಾರಕೂಡ ಶ್ರೀ ಚೆನ್ನಬಸವೇಶ್ವರ ನಾಟ್ಯಸಂಘವು ಕಳೆದ ೨೫ ವರ್ಷಗಳಿಂದ ಗ್ರಾಮೀಣ ಪ್ರದೇಶದಲ್ಲಿರುವ ಯುವ ಕಲಾವಿದರನ್ನು ಗುರುತಿಸಿ ಅವರಿಗೆ ನಾಟಕದಲ್ಲಿ ಅಭಿನಯಿಸಲು ಅವಕಾಶ ನೀಡಿದ್ದರಿಂದಲೇ ರಾಜ್ಯಮಟ್ಟದ ಕರ್ನಾಟಕ ಅಕಾಡೆಮಿ ಪ್ರಶಸ್ತಿಗೆ ಕಲಾವಿದರು ಭಾಜನರಾಗಿರುವುದು ಸಂತಸವಾಗಿದೆ ಎಂದು ಪುರಸಭೆ ಅಧ್ಯಕ್ಷ ಆನಂದಕುಮಾರ ಟೈಗರ ಅಭಿಪ್ರಾಯವ್ಯಕ್ತಪಡಿಸಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್‌ ಕಲ್ಯಾಣಮಂಟಪದಲ್ಲಿ ಕರ್ನಾಟಕ ನಾಟಕ ಅಕಾಡೆಮಿ, ಹಾನಗಲ ಶ್ರೀಕುಮಾರೇಶ್ವರ ನಾಟ್ಯ ಸಂಘದ ಕುಮಾರಶ್ರೀ ಪ್ರಶಸ್ತಿ ಭಾಜನರಾದ ಕಲಾವಿದರನ್ನು ಸನ್ಮಾನಿಸಿ ಮಾತನಾಡಿದರು. ಆಧುನಿಕ ಯುಗದಲ್ಲಿ ಇಂದಿಗೂ ರಂಗಭೂಮಿ ಕಲೆ ತನ್ನದೇ ಆದ ವೈಶಿಷ್ಟತೆ ಹೊಂದಿಕೊಂಡು ಬರುತ್ತಿದೆ. ರಂಗಭೂಮಿಯಿಂದಲೇ ಅನೇಕರು ಸಿನಿಮಾ ನಟ ನಟಿಗಳಾಗಿದ್ದಾರೆ. ನಮ್ಮ ತಾಲೂಕವು ಅತಿ ಹಿಂದುಳಿದರು ಸಹಾ ಹಾರಕೂಡ ಚೆನ್ನಬಸವೆಶ್ವರ ನಾಟ್ಯ ಸಂಘ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದೆ ಎಂದರು.

ಸಮಾರಂಭದಲ್ಲಿ ಕರ್ನಾಟಕ ಅಕಾಡೆಮಿ ಮತ್ತು ಕುಮಾರಶ್ರೀ ಪ್ರಶಸ್ತಿ ಪಡೆದ ಸಿದ್ದಲಿಂಗಯ್ಯ ಸ್ವಾಮಿ ಮಲಕೂಡ, ಶಂಕರಜೀ ಹಿಪ್ಪರಗಿ ಮಾತನಾಡಿ ತಮ್ಮ ಕಲಾ ಅನುಭವವನ್ನು ವಿವರಿಸಿದರು.

ಚಿಂಚೋಳಿ ತಾಲೂಕಿನ ನಾಟಕ ಕಲಾವಿದರಾದ ಹಾನಗಲ್ ಕುಮಾರೇಶ್ವರ ನಾಟ್ಯಸಂಘದಿಂದ ಕುಮಾರಶ್ರೀ ಪ್ರಶಸ್ತಿ ಪಡೆದ ಮಲ್ಲಿಕಾರ್ಜುನರೆಡ್ಡಿ ನರನಾಳ, ಗೋಪಾಲರೆಡ್ಡಿ, ಚಂದ್ರಶೇಖರ ಲಗಶೆಟ್ಟಿ, ಶಾಮರಾವ ಕೊರವಿ, ಲಕ್ಷ್ಮಣ ಅವಂಟಿ, ಬಸವರಾಜ ದೇಶಮುಖ, ರಾವ ಪಾಟೀಲ ಮೋಘಾ, ಶಿವಯೋಗಿ ರುಸ್ತಂಪೂರ, ಗೈಬಣ್ಣ ವಾಲಿಕಾರ, ಸಂತೋಷ ಕಣ್ಣ, ಬಾಬುರಾವ ಉಪ್ಪಿನ, ಗೋಪಾಲ ಬಾಜೆಪಳ್ಳಿ, ಇತರರನ್ನು ಸನ್ಮಾನಿಸಲಾಯಿತು.ಪ್ರಶಾಂತ ಕಟ್ಟಿ ಸ್ವಾಗತಿಸಿ, ಶ್ರೀಧರ ವಗ್ಗಿ ವಂದಿಸಿದರು.