ಅರುವತ್ತೊಕ್ಲು: ಗೋಣಿಕೊಪ್ಪ ಕ್ಲಸ್ಟರ್‌ ಮಟ್ಟದ ಪ್ರತಿಭಾ ಕಾರಂಜಿ

| Published : Nov 07 2024, 11:50 PM IST

ಅರುವತ್ತೊಕ್ಲು: ಗೋಣಿಕೊಪ್ಪ ಕ್ಲಸ್ಟರ್‌ ಮಟ್ಟದ ಪ್ರತಿಭಾ ಕಾರಂಜಿ
Share this Article
  • FB
  • TW
  • Linkdin
  • Email

ಸಾರಾಂಶ

ಅರುವತ್ತೊಕ್ಲು ಸರ್ವದೈವತಾ ವಿದ್ಯಾಸಂಸ್ಥೆಯಲ್ಲಿ ಗೋಣಿಕೊಪ್ಪ ಸಮೂಹ ಸಂಪನ್ಮೂಲ ಕೇಂದ್ರ, ಸರ್ವದೈವತಾ ವಿದ್ಯಾ ಸಂಸ್ಥೆ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ, ಕ್ಷೇತ್ರ ಸಮಾನ್ವಯಾಧಿಕಾರಿಗಳ ಕಾರ್ಯಾಲಯ ಸಹಯೋಗದಲ್ಲಿ ಗೋಣಿಕೊಪ್ಪ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ನಡೆಯಿತು.

ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ

ಅರುವತ್ತೊಕ್ಲು ಸರ್ವದೈವತಾ ವಿದ್ಯಾಸಂಸ್ಥೆಯಲ್ಲಿ ಗೋಣಿಕೊಪ್ಪ ಸಮೂಹ ಸಂಪನ್ಮೂಲ ಕೇಂದ್ರ, ಸರ್ವದೈವತಾ ವಿದ್ಯಾ ಸಂಸ್ಥೆ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ, ಕ್ಷೇತ್ರ ಸಮಾನ್ವಯಾಧಿಕಾರಿಗಳ ಕಾರ್ಯಾಲಯ ಸಹಯೋಗದಲ್ಲಿ ಗೋಣಿಕೊಪ್ಪ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ನಡೆಯಿತು.

ಕಲೋತ್ಸವಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ರವಿ, ಸರ್ವದೈವತಾ ವಿದ್ಯಾಸಂಸ್ಥೆ ಅಧ್ಯಕ್ಷ ಕಾಡ್ಯಮಾಡ ಪ್ರಕಾಶ್ ಮೊಣ್ಣಪ್ಪ ಅಧ್ಯಕ್ಷತೆಯಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭ ಮಾತನಾಡಿದ ಡಾ. ರವಿ, ದೇಶದ ಭವಿಷ್ಯ ರೂಪಿಸಲು ಮಕ್ಕಳು ಅಡಗಿರುವ ಸೂಕ್ತ ಪ್ರತಿಭೆಗಳನ್ನು ಹೊರತರಲು ಪ್ರಯತ್ನಿಸಬೇಕು. ಈ ಮೂಲಕ ದೇಶ ಕಟ್ಟುವ ಕಾರ್ಯ ನಡೆಯಬೇಕಾಗಿದೆ. ವಿವಿಧ ಪ್ರಕಾರಗಳ ಕಲೆಗಳಲ್ಲಿ ಆಸಕ್ತಿ ತಾಳುವ ಮೂಲಕ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸಾಧ್ಯವಿದೆ ಎಂದರು.

ವಿವಿಧ ಕ್ಷೇತ್ರಗಳಲ್ಲಿ ವಿಭಿನ್ನವಾಗಿ ಪ್ರಯತ್ನಿಸುವ ಮೂಲಕ ಜೀವಿತ ಅವಧಿಯಲ್ಲಿ ಗುರುತಿಸಿಕೊಳ್ಳುವ ಕಾರ್ಯ ನಡೆಯಬೇಕಾಗಿದೆ. ಸೃಜನಶೀಲ ಗುಣಗಳನ್ನು ಗುರುತಿಸಿ ಅದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಕಾರ್ಯ ಪ್ರತಿಭಾ ಕಾರಂಜಿ ಕಾರ್ಯಕ್ರಮಗಳಿಂದ ನಡೆಯುತ್ತಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸರ್ವದೈವತಾ ವಿದ್ಯಾ ಸಂಸ್ಥೆ ಅಧ್ಯಕ್ಷ ಪ್ರಕಾಶ್ ಮೊಣ್ಣಪ್ಪ ಮಾತನಾಡಿ, ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದಾಗ ಜಯ ಸಿದ್ಧಿಸುತ್ತದೆ. ದೇಶದ ರಕ್ಷಣೆಗಾಗಿ ದೇಶದ ಬೆಳವಣಿಗೆಗಾಗಿ ಜೀವನವನ್ನು ಮುಖ್ಯ ಭಾಗ್ಯವಾಗಿಸಿಕೊಳ್ಳಬೇಕು. ಈ ಉದ್ದೇಶದೊಂದಿಗೆ ಬದುಕನ್ನು ಸಾಕ್ಷಾತ್ಕಾರ ಮಾಡಿಕೊಳ್ಳಬೇಕು ಎಂದರು.

ಅರುವತೊಕ್ಲು ಗ್ರಾ.ಪಂ. ಅಧ್ಯಕ್ಷೆ ಬಿ.ಬಿ ಶರೀಫಾ, ಸದಸ್ಯರಾದ ಜಮ್ಮಡ ಸೌಮ್ಯ, ಮಹೇಶ್, ಕ್ಷೇತ್ರ ಸಮಾನ್ವಯಾಧಿಕಾರಿ, ಬಿಂದು, ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಎಚ್.ಕೆ. ಕುಮಾರ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಂದ್ರ, ಗೋಣಿಕೊಪ್ಪ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ರಾಧಾ, ಪೊನ್ನಂಪೇಟೆ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಜೀವನ್, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕಾರ್ಯದರ್ಶಿ ಮಹೇಶ್, ರಾಜ್ಯ ಸಹಾಯಕ ಶಿಕ್ಷಕರ ಸಂಘದ ಅಧ್ಯಕ್ಷ ಕೃಷ್ಣ ಚೈತನ್ಯ, ಹಾತೂರು ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಮಾಲಿನಿ, ಸರ್ವ ದೈವತಾ ಕಾಲೇಜಿನ ಪ್ರಾಂಶುಪಾಲ ಪ್ರದೀಪ್, ಮುಖ್ಯ ಶಿಕ್ಷಕಿ ಮನೆಯಪಂಡ ಶೀಲಾ ಬೋಪಣ್ಣ ಮತ್ತು ವಿಶಾಲಾಕ್ಷಿ, ಭರತ್, ನಿವೃತ್ತ ಶಿಕ್ಷಕ ಸೋಮಯ್ಯ, ಕುಶಾಲಪ್ಪ ಮತ್ತಿತರರು ಇದ್ದರು.