ಹೊಳೆನರಸೀಪುರ ಪಟ್ಟಣದ ಶ್ರೀ ಕನ್ಯಕಾಪರಮೇಶ್ವರಿ ದೇವಾಲಯದಲ್ಲಿ ೭೧ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಪಟ್ಟಣದ ಪತಂಜಲಿ ಯೋಗಾಕೂಟದಲ್ಲಿ ಯೋಗಾಸನ ಗುರುಗಳಾಗಿ ಸೇವೆ ಸಲ್ಲಿಸುತ್ತಿರುವ ಕೆ. ಜಿ. ಗಣೇಶಬಾಬು ಹಾಗೂ ಸ್ಕೌಟ್ ಅಂಡ್ ಗೈಡ್‌ನಲ್ಲಿ ಸೇವೆ ಸಲ್ಲಿಸಿದ ಕುಮುದ ರಂಗನಾಥ್ ಅವರನ್ನು ಆರ್ಯವೈಶ್ಯ ಮಂಡಳಿ ಅಧ್ಯಕ್ಷರು ಹಾಗೂ ಸದಸ್ಯರು ಗೌರವಿಸಿದರು. ಯೋಗಗುರು ಕೆ. ಜಿ. ಗಣೇಶ್‌ ಬಾಬು ಹಾಗೂ ಕುಮುಧರಂಗನಾಥ್ ಅವರು ಮಾತನಾಡಿ ಸ್ಕೌಟ್ಸ್ ಅಂಡ್‌ ಗೈಡ್ಸ್‌ನಲ್ಲಿ ವಿದ್ಯಾರ್ಥಿಯೊಬ್ಬ ಸೇರ್ಪಡೆಗೊಂಡರೆ ಆತ ದೇಶ ಕಟ್ಟುವುದರಿಂದ ಹಿಡಿದು ಸಮಾಜದ ಆಸ್ತಿ ಆಗುವುದರಲ್ಲಿ ಸಂದೇಹವಿಲ್ಲ. ಆದ್ದರಿಂದ ನಿಮ್ಮ ಮಕ್ಕಳನ್ನು ಸ್ಕೌಟ್‌ ಮತ್ತು ಗೈಡ್‌ಗೆ ಸೇರಿಸಿ, ಸಮಾಜಕ್ಕೆ ಉತ್ತಮ ವ್ಯಕ್ತಿಯನ್ನು ನೀಡಿದ ಹೆಮ್ಮೆ ನಿಮ್ಮದಾಗುತ್ತದೆ ಎಂದರು.

ಹೊಳೆನರಸೀಪುರ: ಪಟ್ಟಣದ ಶ್ರೀ ಕನ್ಯಕಾಪರಮೇಶ್ವರಿ ದೇವಾಲಯದಲ್ಲಿ ೭೧ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಪಟ್ಟಣದ ಪತಂಜಲಿ ಯೋಗಾಕೂಟದಲ್ಲಿ ಯೋಗಾಸನ ಗುರುಗಳಾಗಿ ಸೇವೆ ಸಲ್ಲಿಸುತ್ತಿರುವ ಕೆ. ಜಿ. ಗಣೇಶಬಾಬು ಹಾಗೂ ಸ್ಕೌಟ್ ಅಂಡ್ ಗೈಡ್‌ನಲ್ಲಿ ಸೇವೆ ಸಲ್ಲಿಸಿದ ಕುಮುದ ರಂಗನಾಥ್ ಅವರನ್ನು ಆರ್ಯವೈಶ್ಯ ಮಂಡಳಿ ಅಧ್ಯಕ್ಷರು ಹಾಗೂ ಸದಸ್ಯರು ಗೌರವಿಸಿದರು.

ಯೋಗಗುರು ಕೆ. ಜಿ. ಗಣೇಶ್‌ ಬಾಬು ಹಾಗೂ ಕುಮುಧರಂಗನಾಥ್ ಅವರು ಮಾತನಾಡಿ ಸ್ಕೌಟ್ಸ್ ಅಂಡ್‌ ಗೈಡ್ಸ್‌ನಲ್ಲಿ ವಿದ್ಯಾರ್ಥಿಯೊಬ್ಬ ಸೇರ್ಪಡೆಗೊಂಡರೆ ಆತ ದೇಶ ಕಟ್ಟುವುದರಿಂದ ಹಿಡಿದು ಸಮಾಜದ ಆಸ್ತಿ ಆಗುವುದರಲ್ಲಿ ಸಂದೇಹವಿಲ್ಲ. ಆದ್ದರಿಂದ ನಿಮ್ಮ ಮಕ್ಕಳನ್ನು ಸ್ಕೌಟ್‌ ಮತ್ತು ಗೈಡ್‌ಗೆ ಸೇರಿಸಿ, ಸಮಾಜಕ್ಕೆ ಉತ್ತಮ ವ್ಯಕ್ತಿಯನ್ನು ನೀಡಿದ ಹೆಮ್ಮೆ ನಿಮ್ಮದಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಎ. ಆರ್‌. ರವಿಕುಮಾರ್‌, ಉಪಾಧ್ಯಕ್ಷರಾದ ಮುರುಳಿಧರಗುಪ್ತ, ಎ. ಮಂಜುನಾಥ್, ಎನ್. ಗೌತಮ್, ಆರ್ಯವೈಶ್ಯ ಮಹಿಳಾ ಮಂಡಳಿ ಅಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಕಾರ್ಯದರ್ಶಿ ವೀಣಾ ಸತೀಶ್, ಭಾರತಿ ರಮೇಶ್, ಮಾಜಿ ಅಧ್ಯಕ್ಷೆ ಶಶಿ ಶ್ರೀನಿವಾಸ್, ರೂಪಾ ಮಂಜುನಾಥ್, ಮಂಜುನಾಥ್ ಗುಪ್ತ, ಕೆ.ರವಿಕಿರಣ್, ಕೆ. ವಿ. ಉದಯಬಾನು, ಶ್ರೀನಿವಾಸ್ ಶೆಟ್ಟಿ, ಎ.ಶ್ರೀನಿವಾಸಮೂರ್ತಿ, ಕಾದಲನ್ ಕೃಷ್ಣ, ವಾಸುದೇವಮೂರ್ತಿ, ಶಂಕರನಾರಾಯಣ ಐತಾಳ್ ಸೇರಿದಂತೆ ಪತಾಂಜಲಿ ಯೋಗ ಕೂಟದ ಸದಸ್ಯರು ಹಾಗೂ ಸ್ಕೌಟ್ ಗೈಡ್ ಸದಸ್ಯರು ಹಾಜರಿದ್ದು, ಪ್ರಶಸ್ತಿಗೆ ಭಾಜನರಾದವರಿಗೆ ಶುಭಾಶಯ ಕೋರಿದರು.