ನವವೃಂದಾವನದಲ್ಲಿ ಜಯತೀರ್ಥರ ಅಷ್ಟೋತ್ತರ ಕಾರ್ಯಕ್ರಮ ಸಂಪನ್ನ

| Published : Mar 11 2024, 01:19 AM IST

ನವವೃಂದಾವನದಲ್ಲಿ ಜಯತೀರ್ಥರ ಅಷ್ಟೋತ್ತರ ಕಾರ್ಯಕ್ರಮ ಸಂಪನ್ನ
Share this Article
  • FB
  • TW
  • Linkdin
  • Email

ಸಾರಾಂಶ

ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀರಾಯರ ಭಕ್ತರು ನವವೃಂದಾವನದಲ್ಲಿ ಭಾನುವಾರ ಶ್ರೀಜಯತೀರ್ಥರ ಅಷ್ಟೋತ್ತರ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.

ಗಂಗಾವತಿ: ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀರಾಯರ ಭಕ್ತರು ನವವೃಂದಾವನದಲ್ಲಿ ಭಾನುವಾರ ಶ್ರೀಜಯತೀರ್ಥರ ಅಷ್ಟೋತ್ತರ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.

ಸುಪ್ರಭಾತ, ಸಕಲ ಬೃಂದಾವನಗಳಿಗೆ ನಿರ್ಮಾಲ್ಯ ಅಭಿಷೇಕ, ವಿಶೇಷ ಪಂಚಾಮೃತಾಭಿಷೇಕ, ಅಷ್ಟೋತ್ತರ, ಭಜನೆ, ಹೂವಿನ ಅಲಂಕಾರ, ವಸ್ತ್ರ ಅಲಂಕಾರ, ಸಕಲ ಯತಿಗಳ ಬೃಂದಾವನಕ್ಕೆ ಹಸ್ತೋದಕ, ಮಹಾಮಂಗಳಾರತಿ ಇತ್ಯಾದಿ ಕಾರ್ಯಕ್ರಮಗಳು ಜರಗಿದವು.

ಪಂಡಿತರಾದ ಶ್ರೀನಿಧಿ ಆಚಾರ್ಯ, ಸುಳಾದಿ ಹನುಮೇಶ ಆಚಾರ್ಯ, ಭೀಮಸೇನ ರಾವ್ ಕುಲಕರ್ಣಿ ಇಡಪನೂರ್, ಹೊಸಪೇಟೆಯ ಹಳೆ ರಾಯರ ಮಠದ ಪವನಆಚಾರ್ಯ, ಗಂಗಾವತಿಯ ಶ್ರೀರಾಯರ ಮಠದ ವ್ಯವಸ್ಥಾಪಕರಾದ ಸಾಮವೇದ ಗುರುರಾಜ ಆಚಾರ್, ನವಲಿ ಸುಧೀರ್, ಆನೆಗುಂದಿ ಶ್ರೀಪಾದರಾಜರ ಮಠದ ವ್ಯವಸ್ಥಾಪಕ ವಿಜಯ ದೇಸಾಯಿ ಗೋತಗಿ, ಆನೆಗುಂದಿ ಶ್ರೀಮಠದ ವ್ಯವಸ್ಥಾಪಕ ಸುಮಂತ ಕುಲಕರ್ಣಿ ಇಡಪನೂರ, ಅರ್ಚಕರಾದ ನರಸಿಂಹ ಆಚಾರ್, ವಿಜಯೇಂದ್ರ ಚಳ್ಳಾರಿ, ಶ್ರೀಮಠದ ಶಿಷ್ಯರು, ಭಕ್ತರು, ಅಭಿಮಾನಿಗಳು, ತಮಿಳುನಾಡಿನ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.