ಗೋಕಟ್ಟೆ ಮರು ನಿರ್ಮಾಣಕ್ಕೆ ಅಶ್ವಮೇಧ ಸೋಲಾರ್‌ ಕಂಪನಿಗೆ ತಹಸಿಲ್ದಾರ್ ತಾಕೀತು

| Published : Oct 25 2024, 12:47 AM IST

ಗೋಕಟ್ಟೆ ಮರು ನಿರ್ಮಾಣಕ್ಕೆ ಅಶ್ವಮೇಧ ಸೋಲಾರ್‌ ಕಂಪನಿಗೆ ತಹಸಿಲ್ದಾರ್ ತಾಕೀತು
Share this Article
  • FB
  • TW
  • Linkdin
  • Email

ಸಾರಾಂಶ

ಮೊಳಕಾಲ್ಮುರು: ತಾಲೂಕಿನ ಬಿ.ಜಿ.ಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಮುತ್ತಿಗಾರಹಳ್ಳಿ ರಸ್ತೆಯಲ್ಲಿ ನಿರ್ಮಾಣವಾಗಿರುವ ಅಶ್ವಮೇಧ ಸೋಲಾರ್ ಕಂಪನಿಯವರು ಒಡೆದಿರುವ ಗೋಕಟ್ಟೆ ಸ್ಥಳಕ್ಕೆ ಗುರುವಾರ ತಹಸೀಲ್ದಾರ್ ಜಗದೀಶ್ ಭೇಟಿ ನೀಡಿ ಪರಿಶೀಲಿಸಿದರು.

ಮೊಳಕಾಲ್ಮುರು: ತಾಲೂಕಿನ ಬಿ.ಜಿ.ಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿ ಮುತ್ತಿಗಾರಹಳ್ಳಿ ರಸ್ತೆಯಲ್ಲಿ ನಿರ್ಮಾಣವಾಗಿರುವ ಅಶ್ವಮೇಧ ಸೋಲಾರ್ ಕಂಪನಿಯವರು ಒಡೆದಿರುವ ಗೋಕಟ್ಟೆ ಸ್ಥಳಕ್ಕೆ ಗುರುವಾರ ತಹಸೀಲ್ದಾರ್ ಜಗದೀಶ್ ಭೇಟಿ ನೀಡಿ ಪರಿಶೀಲಿಸಿದರು.

ಸುತ್ತಲಿನ ಮೂರು ಹಳ್ಳಿಗಳ ಜಾನುವಾರುಗಳಿಗೆ ಕುಡಿವ ನೀರಿಗೆ ಆಶ್ರವಾಗಿದ್ದ ಇಲ್ಲಿನ ಗೋಕಟ್ಟೆ ಇತ್ತೀಚಿಗೆ ಸುರಿದ ಭರ್ಜರಿ ಮಳೆಯಿಂದಾಗಿ ಭರ್ತಿಯಾಗಿ ಬಾರಿ ಪ್ರಮಾಣದಲ್ಲಿ ನೀರು ಸಂಗ್ರಹವಾಗಿತ್ತು. ಆದರೆ ಗೋಕಟ್ಟೆಗೆ ಅಂಟಿಕೊಂಡಂತೆ ನಿರ್ಮಾಣವಾಗಿರುವ ಅಶ್ವಮೇಧ ಕಂಪನಿ ಪ್ಲಾಂಟ್‌ ಹಿನ್ನೆಲೆಯಲ್ಲಿ ತಮ್ಮ ಅನುಕೂಲಕ್ಕಾಗಿ ಗೋಕಟ್ಟೆ ಒಡೆದು ನೀರನ್ನು ಹೊರಬಿಟ್ಟಿದ್ದರು. ನೀರು ಪೋಲಾಗಿದ್ದ ಪರಿಣಾಮವಾಗಿ ಸ್ಥಳೀಯರು ಕಂಪನಿಯ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅ.24 ರಂದು "ಗೋಕಟ್ಟೆ ಒಡೆದು ನೀರು ವ್ಯರ್ಥ ಮಾಡಿದ ಸೋಲಾರ್ ಕಂಪನಿ " ಎನ್ನುವ ಶೀರ್ಷಿಕೆಯಡಿ ಕನ್ನಡಪ್ರಭ ವರದಿ ಪ್ರಕಟಿಸಿತ್ತು. ಪರಿಣಾವಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ತಹಸೀಲ್ದಾರ್ ಸೋಲಾರ್ ಕಂಪನಿ ಮಾಲೀಕರನ್ನು ತರಾಟೆಗೆ ತೆಗೆದುಕೊಂಡು ಗೋಕಟ್ಟೆ ಮರು ನಿರ್ಮಾಣ ಮಾಡಬೇಕೆಂದು ತಾಕೀತು ಮಾಡಿದ್ದಲ್ಲದೆ, ಸರ್ಕಾರದ ಆಸ್ತಿಗೆ ಹಾನಿ ಉಂಟು ಮಾಡಿರುವ ಕಾರಣ ಕಂಪನಿ ಮೇಲೆ ಪ್ರಕರಣ ದಾಖಲು ಮಾಡುವುದಾಗಿ ಜನರಿಗೆ ಭರವಸೆ ನೀಡಿದರು.

ಸ್ಥಳದಲ್ಲಿ ಕಂದಾಯ ಶಿರೇಸ್ತೆದಾರ್ ವೀರಭದ್ರಪ್ಪ, ಗ್ರಾಮ ಆಡಳಿತಗಾರ ಆನಂದ್, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಲ್ಲಿಕಾರ್ಜುನ. ಗ್ರಾಮ ಪಂಚಾಯಿತಿ ಸದಸ್ಯರಾದ ಪಾಪಣ್ಣ, ಮಹೇಶ್, ಬಸವರಾಜ, ಮುಖಂಡ ನಾಗರಾಜ ಇದ್ದರು.