ಕನ್ನಡಪ್ರಭ ವಾರ್ತೆ ಗುಬ್ಬಿ

ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದಾಗಿ ಡಾಂಬರ್‌ ದರ ರು 30,000 ಇದ್ದ ಬೆಲೆ ಈಗ 105,000 ಕ್ಕೆ ಹೆಚ್ಚಳವಾಗಿರುವುದರಿಂದ ಎಲ್ಲಾ ಕಾಮಗಾರಿಗಳು ಸ್ಥಗಿತವಾಗಿವೆ ಎಂದು ಶಾಸಕ ಎಸ್.ಆರ್ ಶ್ರೀನಿವಾಸ್ ತಿಳಿಸಿದರು.

ತಾಲೂಕಿನ ಕಸಬಾ ಹೋಬಳಿ ಅಮ್ಮನಘಟ್ಟ ಗ್ರಾಮದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಆಯುಷ್ಮಾನ್ ಆರೋಗ್ಯ ಕೇಂದ್ರದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾಮಗಾರಿಗೆ ಬಳಸುವ ವಸ್ತುಗಳ ಬೆಲೆ ಹೆಚ್ಚಳವಾಗಿದ್ದರಿಂದ ಸದ್ಯ ಜಲ್ಲಿ ರಸ್ತೆಗಳು ಮಾತ್ರ ನಡೆಯುತ್ತಿವೆ. ಯುದ್ಧ ನಿಂತ ನಂತರ ಕಾಮಗಾರಿ ಕೆಲಸಗಳು ಸುಗಮವಾಗಿ ನಡೆಯುತ್ತವೆ. ಸಿಎಂ ವಿಚಾರವಾಗಿ ಮಾತನಾಡುವವರು ಪೇಪರ್ ನಲ್ಲಿ ಬರೋದಕ್ಕೆ, ದೊಡ್ಡವರು ಗಮನಿಸಲಿ ಎಂದು. ಹಾಗೇ ಮಾತನಾಡುವುದು ಸರಿಯಲ್ಲ. ತಮ್ಮ ಯೋಗ್ಯತೆಗೆ ತಕ್ಕಂತೆ ಮಾತನಾಡಬೇಕು. ತಮ್ಮ ಪರಿಮಿತಿಯಲ್ಲಿ ಮಾತನಾಡಿದರೆ ಸಮಾಜಕ್ಕೂ ಚೆನ್ನಾಗಿರುತ್ತದೆ.ಪಕ್ಷಕ್ಕೂ ಚೆನ್ನಾಗಿರುತ್ತದೆ. ಲಿಮಿಟ್ ಮೀರಿ ಮಾತನಾಡಿದರೆ ದುರಹಂಕಾರ ಆಗುತ್ತದೆ ಎಂದು ಪರೋಕ್ಷವಾಗಿ ಎದುರಾಳಿಗಳನ್ನು ತಿವಿದರು. ತಾಲೂಕಿಗೆ ಒಂಬತ್ತು ಕೆಪಿಎಸ್ ಶಾಲೆಯನ್ನು ಹೊಸದಾಗಿ ಪ್ರಾರಂಭಿಸಲಾಗುತ್ತದೆ. ಈ ಯೋಜನೆಯಿಂದ ಅನೇಕ ಬಡ ಮಕ್ಕಳಿಗೆ ಅನುಕೂಲವಾಗುತ್ತದೆ ಎಂದರು. ಈ ವೇಳೆ ತಾಲೂಕು ವೈದ್ಯಾಧಿಕಾರಿ ಡಾ. ಬಿಂದುಮಾಧವ, ಪಿಡಿಒ ರವಿ, ಮುಖಂಡರಾದ ಯತೀಶ್, ಲಕ್ಕಣ್ಣ, ಗುತ್ತಿಗೆದಾರ ರವಿ , ಶ್ರೀನಿವಾಸ್, ಸಿದ್ದರಾಮಯ್ಯ, ಪಟೇಲ್ ಶಿವರಾಜ್, ನಂದೀಶ್, ಸಿದ್ದರಾಜು, ಬಿಸಿಎಂ ಇಲಾಖೆ ಪವಿತ್ರ, ಉಪಸ್ಥಿತರಿದ್ದರು.