ಮಹಿಳಾ ಪೇದೆ ಮೇಲೆ ಹಲ್ಲೆ!

| Published : Dec 03 2023, 01:00 AM IST

ಸಾರಾಂಶ

ಚನ್ನಪಟ್ಟಣ: ನಗರಸಭೆಯ ಸಾಮಾನ್ಯ ಸಭೆಯ ನಂತರ ನಗರಸಭೆ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, 28ನೇ ವಾರ್ಡ್ ನಗರಸಭೆ ಸದಸ್ಯೆ ಅಬಿದಾ ಬಾನು ಪುತ್ರ ಸುಹೇಲ್‌ನನ್ನು ವಿಚಾರಣೆಗೆ ಕರೆತರಲು ಹೋದಾಗ ಆತನೊಂದಿಗಿದ್ದ ಮಹಿಳೆ ಮಹಿಳಾ ಪೇದೆ ಮೇಲೆ ಹಲ್ಲೆ ನಡೆಸಿ ಪೊಲೀಸರ ಮೇಲೆ ಕಾರು ಹತ್ತಿಸಲು ಯತ್ನಿಸಿದ ಘಟನೆ ನಡೆದಿದೆ.

ನಗರಸಭೆ ಸದಸ್ಯ ವಾಸೀಲ್ ಅಲಿಖಾನ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಹೇಲ್‌ಗೆ ಆರಕ್ಷಕ ಉಪನಿರೀಕ್ಷಕ ಹರೀಶ್ ನೋಟೀಸ್ ಜಾರಿ ಮಾಡಿ ವಿಚಾರಣೆಗೆ ಕರೆದೊಯ್ಯಲು ಬಂದಿದ್ದ ವೇಳೆ ಸುಹೇಲ್‌ನೊಂದಿಗಿದ್ದ ಯುವತಿ ಭಾನುಪ್ರಿಯ ಎಂಬಾಕೆ ಪೋಲಿಸರ ಜೊತೆ ವಾಗ್ವಾದಕ್ಕಿಳಿದಿದ್ದಾಳೆ. ಆಕೆಯನ್ನು ಪೊಲೀಸರು ಕಾರಿನಿಂದ ಹೊರಗೆ ಕಳುಹಿಸಲು ಮುಂದಾದಾಗ ಕಾರು ಸ್ಟಾರ್ಟ್ ಮಾಡಿ ಪೊಲೀಸರ ಮೇಲೆ ಕಾರು ಹತ್ತಿಸಲು ಪ್ರಯತ್ನಿಸಿದ್ದಾಳೆ. ಎಚ್ಚೆತ್ತ ಪೊಲೀಸರು ಪಕ್ಕಕ್ಕೆ ಸರಿದಿದ್ದರಿಂದ ಬಚಾವಾಗಿದ್ದಾರೆ. ಈ ವೇಳೆ ಮಹಿಳೆ ಮಹಿಳಾ ಪೇದೆ ಅನಾರ್ಕಲಿ ಎಂಬುವವರಿಗೆ ಕಪಾಳಕ್ಕೆ ಹೊಡೆದು, ಕೈಯ್ಯನ್ನು ಕಚ್ಚಿದ್ದು, ಆಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.