ವಿಡಿಯೋಗ್ರಾಫರ್‌ ಮೇಲೆ ಹಲ್ಲೆ, ಕಿಡಿಗೇಡಿಗಳ ಬಂಧಿಸಲು ಆಗ್ರಹ

| Published : May 24 2024, 12:54 AM IST

ವಿಡಿಯೋಗ್ರಾಫರ್‌ ಮೇಲೆ ಹಲ್ಲೆ, ಕಿಡಿಗೇಡಿಗಳ ಬಂಧಿಸಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಹಾವೇರಿ ಜಿಲ್ಲಾ ಹಾಗೂ ತಾಲೂಕು ವೃತ್ತಿ ನಿರತ ಛಾಯಾಗ್ರಾಹಕರ ಮತ್ತು ವಿಡಿಯೋ ಗ್ರಾಫರ್ ಸಂಘದ ವತಿಯಿಂದ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಮೂಲಕ ಗೃಹ ಸಚಿವ ಜಿ.ಪರಮೇಶ್ವರ ಅವರಿಗೆ ಮನವಿ ಸಲ್ಲಿಸಲಾಯಿತು.

ಹಾವೇರಿ: ಬೆಂಗಳೂರಿನಲ್ಲಿ ಈಚೆಗೆ ನಡೆದ ಮದುವೆ ಸಮಾರಂಭದಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ವಿಡಿಯೋಗ್ರಾಫರ್ ಮೇಲೆ ಹಲ್ಲೆ ಮಾಡಿರುವ ಕಿಡಿಗೇಡಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿ ಹಾವೇರಿ ಜಿಲ್ಲಾ ಹಾಗೂ ತಾಲೂಕು ವೃತ್ತಿ ನಿರತ ಛಾಯಾಗ್ರಾಹಕರ ಮತ್ತು ವಿಡಿಯೋ ಗ್ರಾಫರ್ ಸಂಘದ ವತಿಯಿಂದ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಮೂಲಕ ಗೃಹ ಸಚಿವ ಜಿ.ಪರಮೇಶ್ವರ ಅವರಿಗೆ ಮನವಿ ಸಲ್ಲಿಸಲಾಯಿತು.ಮದುವೆ ಕಾರ್ಯಕ್ರಮಗಳಿಗೆ ಫೋಟೋಗ್ರಾಫರ್‌ಗಳು ಹೋದಾಗ ಸಣ್ಣಪುಟ್ಟ ಗಲಾಟೆಗಳನ್ನೇ ದೊಡ್ಡದಾಗಿ ಬಿಂಬಿಸಿಕೊಂಡು, ಅವರ ಸಾಮಗ್ರಿಗಳನ್ನು ನಷ್ಟ ಪಡಿಸುವಂತಹ ಕೆಲಸವನ್ನು ಯಾರೇ ಮಾಡಿದರು ಅಂತವರ ವಿರುದ್ಧ ಕಾನೂನಿನ ಚೌಕಟ್ಟಿನಲ್ಲಿ ಕ್ರಮ ಜರುಗಿಸಬೇಕು ಮತ್ತು ತಪ್ಪಿತಸ್ಥರ ಮೇಲೆ ಪ್ರಕರಣ ದಾಖಲಿಸಿ ನಮಗೆ ನ್ಯಾಯ ಒದಗಿಸಿ ಕೊಡಬೇಕು. ಫೋಟೋಗ್ರಾಫರ್ ರಘು ಹಾಗೂ ಜಯಂತ್ ಇವರು ಶಿವಾಜಿನಗರದ ಶಾಮ್ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಮದುವೆಯ ಶುಭ ಕಾರ್ಯಕ್ರಮದಲ್ಲಿ ಫೋಟೋ ಗ್ರಾಫಿಕ್ ಮಾಡುತ್ತಿರುವಾಗ ಕ್ಷುಲ್ಲಕ ಕಾರಣದಿಂದ ಮದುವೆ ಮನೆಯವರು ಈ ರೀತಿ ಹಲ್ಲೆ ಮಾಡಿರುವುದು ಶೋಭೆ ತರುವಂತಹದಲ್ಲ ಹಾಗಾಗಿ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಮನವಿ ಮಾಡಲಾಯಿತು. ಜಿಲ್ಲಾಧ್ಯಕ್ಷ ರಾಜೇಂದ್ರ ರಿತ್ತಿ, ತಾಲೂಕಾಧ್ಯಕ್ಷ ಶಂಭುಗೌಡ ಅಂದಾನಿಗೌಡ್ರ, ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಕುಂಬಾರಿ, ತಾಲೂಕು ಕಾರ್ಯದರ್ಶಿ ಕುಮಾರ ಕೋಳೂರ, ತಾಲೂಕು ಉಪಾಧ್ಯಕ್ಷ ಬಸವರಾಜ ಚಾವಡಿ, ಹೇಮಂತ ಗ್ಯಾರನಗೌಡ್ರ, ರಘುವಿರ ಚವ್ಹಾಣ, ಅಶೋಕ ಬ್ಯಾಡಗಿ, ರಾಜು ಬಾರ್ಕಿ, ಪ್ರಕಾಶ ನಂದಿ, ನಾರಾಯಣ ದೊಂಗಡಿ, ರವಿಂದ್ರ ಆನ್ವೇರಿ, ನಾಗರಾಜ ಹೊಸಮನಿ ಮಾಲತೇಶ ಇಚ್ಚಂಗಿ, ಪಕ್ಕಿರಯ್ಯ ಹಿರೇಮಠ, ಪಕ್ಕಿರಸ್ವಾಮಿ ಮಟ್ಟೆಣನವರ ಹಾಗೂ ಗುಡ್ಡಪ್ಪ ಲಮಾಣಿ ಸೇರಿದಂತೆ ಇತರರು ಇದ್ದರು.