ಸಾರಾಂಶ
ಲೋಕಾಪುರ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸಮೀಪದ ಲಕ್ಷಾನಟ್ಟಿ ಚೆಕ್ ಪೋಸ್ಟ್ ಗೆ ಸಹಾಯಕ ಚುನಾವಣಾಧಿಕಾರಿ ತಿಮ್ಮಣ್ಣ ಹುಲಿಮನಿ ಭೇಟಿ ನೀಡಿ ಪರಿಶೀಲಿಸಿದರು.
ಲೋಕಾಪುರ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸಮೀಪದ ಲಕ್ಷಾನಟ್ಟಿ ಚೆಕ್ ಪೋಸ್ಟ್ ಗೆ ಸಹಾಯಕ ಚುನಾವಣಾಧಿಕಾರಿ ತಿಮ್ಮಣ್ಣ ಹುಲಿಮನಿ ಭೇಟಿ ನೀಡಿ ಪರಿಶೀಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದೊಳಗೆ ಆಗಮಿಸುವ ಹಾಗೂ ಹೊರಹೋಗುವ ಪ್ರತಿ ವಾಹನವನ್ನು ಕಟ್ಟುನಿಟ್ಟಾಗಿ ತಪಾಸಣೆ ಮಾಡಲು, ಹಣ ಸಾಗಣೆ ಸೇರಿದಂತೆ ಅವ್ಯವಹಾರ ಕಂಡು ಬಂದಲ್ಲಿ ತಕ್ಷಣ ಮೇಲಧಿಕಾರಿಗಳ ಗಮನಕ್ಕೆ ತರಲು, ಪ್ರತಿ ವಾಹನ ತಪಾಸಣೆ ಮಾಡಿದ ವರದಿಯನ್ನು ಪುಸ್ತಕದಲ್ಲಿ ಕಡ್ಡಾಯವಾಗಿ ದಾಖಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.ಈ ವೇಳೆ ಕಂದಾಯ ನಿರೀಕ್ಷಕ ಸತೀಶ ಬೇವೂರ, ಎಸ್‌ಎಸ್‌ಟಿ ಅಧಿಕಾರಿ ವಿನೋದ ಸಂಕೆನ್ನವರ, ಪಿಎಸ್‌ಐ ರಾಕೇಶ ಬಗಲಿ, ಪಟ್ಟಣ ಪಂಚಾಯತಿ ಅಧಿಕಾರಿ ಸುನೀಲ ಗಾವಡೆ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಇದ್ದರು.