ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮದ ಭರವಸೆ ದೊರಕಿದೆ.ಸಮಸ್ಯೆ ಕುರಿತು ಮಂಗಳವಾರ ‘ಕನ್ನಡಪ್ರಭ’ ವಿಶೇಷ ವರದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸತೀಶ್ ಕುಮಾರ್ ಸ್ಪಷ್ಟೀಕರಣ ನೀಡಿ, ವೈದ್ಯರು ಮತ್ತು ಜೌಷಧಿಗಳ ಕೊರತೆಯ ಶ್ರೀಘ್ರವೇ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮದ ಭರವಸೆ ದೊರಕಿದೆ.

ಸಮಸ್ಯೆ ಕುರಿತು ಮಂಗಳವಾರ ‘ಕನ್ನಡಪ್ರಭ’ ವಿಶೇಷ ವರದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸತೀಶ್ ಕುಮಾರ್ ಸ್ಪಷ್ಟೀಕರಣ ನೀಡಿ, ವೈದ್ಯರು ಮತ್ತು ಜೌಷಧಿಗಳ ಕೊರತೆಯ ಶ್ರೀಘ್ರವೇ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಮಂಗಳವಾರದಂದು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಅವರು ವೇವ್ ಸಂಘಟನೆ ಪದಾಧಿಕಾರಿಗಳು ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರೊಂದಿಗೆ ಆರೋಗ್ಯ ಕೇಂದ್ರದ ಸ್ಥಿತಿಗತಿಗಳ ಬಗ್ಗೆ ಪ್ರತ್ಯಕ್ಷ ಮಾಹಿತಿ ಪಡೆದರು. ನಂತರ ಮಾತನಾಡಿದ ಅವರು ಜಿಲ್ಲೆಯಲ್ಲಿ ಕೇವಲ 7 ಮಂದಿ ಖಾಯಂ ನೇಮಕಾತಿ ಹೊಂದಿದ ವೈದ್ಯರಿದ್ದು ಉಳಿದ ಕಡೆಗಳಲ್ಲಿ ಗುತ್ತಿಗೆ ಆಧಾರದಲ್ಲಿದ್ದಾರೆ ಎಂದು ತಿಳಿಸಿದರು.

ಗುತ್ತಿಗೆ ಆಧಾರದಲ್ಲಿ ಇರುವವರು ಉನ್ನತ ವಿದ್ಯಾಭ್ಯಾಸ ಇತರ ಕಾರಣಗಳಿಂದ ಸೇವೆಯಿಂದ ನಿರ್ಗಮಿಸುತ್ತಿದ್ದು, ಬದಲಿ ವ್ಯವಸ್ಥೆಯಿಂದಾಗಿ ಸ್ಥಳೀಯರು ಸೇರಿದಂತೆ ರೋಗಿಗಳು ಬರುತ್ತಿಲ್ಲ ಎಂದು ಹೇಳಿದರು. ಹೊರ ನೇಮಕಗೊಂಡ ವೈದ್ಯರು ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ, ಈ ಕುರಿತು ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ತುರ್ತು ನೇಮಕಾತಿ ಎಂದು ಪರಿಗಣಿಸಿ ವೈದ್ಯ ಭರ್ತಿಗೆ ಪ್ರಯತ್ನಿಸಿ ನಿರ್ಣಾಯಕ ಖಾಲಿ ಹುದ್ದೆಯೆಂದು ಪರಿಗಣಿಸಿ ಅತಿವಶ್ಯಕ ನೇಮಕಾತಿ ಎಂದು ಭಾವಿಸಿ ಪ್ರಯತ್ನ ಮಾಡಲಾಗುತ್ತಿದೆ. ನಿಯೋಜನೆಗೊಂಡ ವೈಧ್ಯರು ಅನಧಿಕೃತವಾಗಿ ಗೈರು ಹಾಜರಾಗುತ್ತಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇಸಿಜಿ ಮತ್ತು ರಕ್ತದೊತ್ತಡ ಪರೀಕ್ಷೆ ಉಚಿತವಾಗಿ ಮಾಡಲಾಗುತ್ತಿದ್ದು ಈ 2 ವೈಧ್ಯಕೀಯ ದುರಸ್ಥಿಗೀಡಾಗಿದ್ದು ಅದನ್ನು ಆದ್ಯತೆ ಮೇರೆಗೆ ಸುಸ್ಥಿತಿಗೆ ತರಲಾಗಿದೆ ಎಂದು ರೋಗಿಗಳಿಗೆ ಮಾಹಿತಿ ನೀಡಿದರು.

ಅನಾರೋಗ್ಯ ಪೀಡಿತರ ಪರವಾಗಿ ಮಾತನಾಡಿದ ಕಾನಿಶ್ ಅವರು ಜೌಷಧಿಗಳ ಕೊರತೆ ವೈದ್ಯುರು ನೀಡಲಾಗುತ್ತಿರುವ ಜೌಷಧಿಗಳು ಲಭ್ಯವಿರುವುದಿಲ್ಲ ಇದರ ಸಭೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸತೀಶ್ ಕುಮಾರ್ ದೂರಿಕೊಂಡರು.

ವೇವ್ ಸಂಘಟನೆಯ ಸಂಚಾಲಕ ಕೆ.ಎ.ಲತೀಫ್ ಮಾತನಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸುತ್ತಲೂ ಸ್ವಚ್ಚತೆಯನ್ನು ಕಾಯ್ದುಕೊಳ್ಳುವುದು ಶೀಥಿಲಗೊಂಡ ಕಟ್ಟಡಗಳಲ್ಲಿ ಹಾವು ಸೇರಿದಂತೆ ಇತರ ವಿಷಜಂತುಗಳು ಸೇರಿಕೊಳ್ಳುತ್ತಿವೆ ಇದರಿಂದ ಇದರ ಹಿಂಬದಿಯಲ್ಲಿ ವಾಸದ ಮನೆ ಪಕ್ಕದ ಶಾಲೆಗೆ ಅಪಾಯ ತಪ್ಪಿದ್ದಲ್ಲ ಎಂದು ಮಾಹಿತಿ ನೀಡಿದರು.

ಈ ಬಗ್ಗೆ ಒಂದೂವರೆ ತಿಂಗಳ ಹಿಂದೆ ಸಂಬಂಧಿಸಿದ ಅಭಿಯಂತರರು ಭೇಟಿ ನೀಡಿದಾಗ ಅವರ ಗಮನಕ್ಕೆ ತರಲಾಗಿದ್ದು ಸ್ವಚ್ಚತೆಯ ಕಾರ್ಯವನ್ನು ಮಾಡಲಾಗುವುದೆಂದು ಭರವಸೆ ನೀಡಿದರೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಲತೀಫ್ ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಐ.ಭವಾನಿ ಇಲ್ಲಿನ ಸಮಸ್ಯೆಗಳ ನೈಜ ವಾಸ್ತಂಶವನ್ನು ಬಿಚ್ಚಿಟ್ಟರು ಅಲ್ಲದೆ ಕುಂದು ಕೊರತೆ ಜೌಷಧಿಗಳು ದೊರೆಯದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಡಾ. ಸತೀಶ್ ಕುಮಾರ್ ಅವರು ಸ್ವಚ್ಚತೆ ಕಾಪಾಡಿಕೊಳ್ಳುವುದು ಮತ್ತು ಶಿಥಿಲ ಕಟ್ಟಡ ತೆರವುಗೊಳಿಸಲು ರೂ .10 ಲಕ್ಷ ಅನುದಾನ ಬಿಡುಗಡೆಗೊಂಡಿದೆ. ಸಂಬಂಧಿಸಿದ ಅಭಿಯಂತರರು ಮತ್ತು ಗುತ್ತಿಗೆದಾರರು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಮಾಹಿತಿ ನೀಡಿದರು. ಆರೋಗ್ಯ ಕೇಂದ್ರದಲ್ಲಿರುವ ಜೌಷಧಿಗಳನ್ನೆ ರೋಗಿಗಳಿಗೆ ವೈದ್ಯರು ಚೀಟಿಯ ಮೂಲಕ ಒದಗಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಎಚ್.ಯು.ರಫೀಕ್‌ಖಾನ್ ರೂ 8 ಲಕ್ಷಕ್ಕೆ ಸ್ವಚ್ಚತೆ ಮತ್ತು ದುರಸ್ಥಿ ಕಾರ್ಯಕ್ಕೆ ಟೆಂಡರ್ ಆಗಿದ್ದು ಗುತ್ತಿಗೆದಾರ ಕೂಡ ನಿಯೋಜನೆಗೊಳಿಸಲಾಗಿದೆ ಈ ಬಗ್ಗೆ ಸ್ಥಳೀಯರು ಕ್ರಮ ವಹಿಸಿ ಕೆಲಸ ನಿರ್ವಹಿಸಿ ಕೊಡಬೇಕಿದೆ ಎಂದು ಡಿಎಚ್‌ಒ ಮಾಹಿತಿ ನೀಡಿದರು.

ಚಿತ್ರ.1:ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸತೀಶ್ ಕುಮಾರ್ ಆರೋಗ್ಯ ಕೇಂದ್ರದ ಸ್ಥಿತಿಗತಿಗಳ ಬಗ್ಗೆ ಪ್ರತ್ಯಕ್ಷ ಮಾಹಿತಿ ಪಡೆಯುತ್ತಿರುವುದು.