ಸಾರಾಂಶ
ಬನ್ನೇರುಘಟ್ಟದಲ್ಲಿರುವ ಸುಕಿನೋ ಕೇಂದ್ರದಲ್ಲಿ ಪ್ರಥಮ ಬಾರಿಗೆ ಹೈಡ್ರೋಥೆರಪಿ ಪರಿಚಯ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನೀರಿನಲ್ಲಿರುವ ವಿಶಿಷ್ಟ ಧಾತುಗಳನ್ನು ಬಳಸಿಕೊಂಡು ರೋಗಿಗಳ ಪುನರ್ವಸತಿ ಮತ್ತು ಒಟ್ಟಾರೆ ಆರೋಗ್ಯ ಸುಧಾರಣೆಗೆ ಪ್ರಯತ್ನಿಸುವ ‘ಹೈಡ್ರೋಥೆರಪಿ ಚಿಕಿತ್ಸೆ’ ಸುಕಿನೋ ಹೆಲ್ತ್‌ಕೇರ್ ಕೇಂದ್ರದಲ್ಲಿ ಆರಂಭವಾಗಿದೆ.ಬನ್ನೇರುಘಟ್ಟದಲ್ಲಿರುವ ಸುಕಿನೋ ಕೇಂದ್ರದಲ್ಲಿ ಪ್ರಥಮ ಬಾರಿಗೆ ಹೈಡ್ರೋಥೆರಪಿ ಪರಿಚಯಿಸಲಾಗುತ್ತಿದ್ದು, ನರರೋಗ ಮತ್ತು ಮಾಂಸಖಂಡಗಳ ಸಮಸ್ಯೆ ಇರುವ ರೋಗಿಗಳ ಆರೈಕೆಯಲ್ಲಿ ಜನಪ್ರಿಯವಾಗಿದೆ. ಅಕ್ವಾಥೆರಪಿ ಎಂದೂ ಕರೆಯಲಾಗುವ ಈ ಚಿಕಿತ್ಸೆಯು ಬೆಚ್ಚಗಿನ ನೀರಿನಲ್ಲಿ ನಡೆಸುವ ಒಂದು ಬಗೆಯ ವ್ಯಾಯಾಮವಾಗಿದೆ.
ಹೈಡ್ರೋಥೆರಪಿಯ ಮೂಲಕ ಸುಲಭವಾಗಿ ದೈಹಿಕ ಚಲನೆಯ ಮೂಲಕ ಸಮತೋಲನ ಕಾಯ್ದುಕೊಳ್ಳಬಹುದು. ಸುಕಿನೋದ ಹೈಡ್ರೋಥೆರಪಿ ನೀರಿನಲ್ಲಿರುವ ಗುಣಪಡಿಸುವ ಶಕ್ತಿಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಒತ್ತಡ ಮತ್ತು ಮಾನಸಿಕ ಖಿನ್ನತೆಯನ್ನೂ ಹೋಗಲಾಡಿಸುತ್ತದೆ.ಸುಕಿನೋ ಹೈಡ್ರೋಥೆರಪಿ ಸೇವೆಗಳು ನೀರಿನ ಗುಣಪಡಿಸುವ ಶಕ್ತಿಯನ್ನು ಬಳಸಿಕೊಂಡು ಆರೋಗ್ಯ ಸ್ಥಿತಿಯನ್ನು ಪರಿಹರಿಸಲು ಹಾಗೂ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯವನ್ನು ಉತ್ತೇಜಿಸಲು ನೆರವಾಗುತ್ತವೆ ಎಂದು ಸುಕಿನೋ ಹೆಲ್ತ್‌ಕೇರ್ ಸಲ್ಯೂಷನ್ಸ್ ಸಂಸ್ಥಾಪಕರು ಮತ್ತು ಸಿಇಒ ರಜನೀಶ್ ಮೆನನ್ ಹೇಳಿದರು.
ಸುಕಿನೋ ಕೇಂದ್ರದಲ್ಲಿ ನರ ಸಂಬಂಧಿ ಸಮಸ್ಯೆಗಳು, ಪಾರ್ಶ್ವವಾಯು, ಕ್ಯಾನ್ಸರ್, ಶಸ್ತ್ರಚಿಕಿತ್ಸೆಯ ನಂತರದ ಭೌತಚಿಕಿತ್ಸೆ ಮುಂತಾದ ಸೇವೆಗಳು ಲಭ್ಯ ಇವೆ. ಯಾವುದೇ ರೀತಿಯ ಸಮಸ್ಯೆ ಇದ್ದರೂ ಆರೈಕೆಯಿಂದ ವಂಚಿತರಾಗಬಾರದು ಎಂಬ ಉದ್ದೇಶದೊಂದಿಗೆ ಸುಕಿನೋ ಕಾರ್ಯ ನಿರ್ವಹಿಸುತ್ತಿದೆ ಎಂದು ಅವರು ಹೇಳಿದ್ದಾರೆ.