ಜಾಗತಿಕ ಸುಸ್ಥಿರತೆಯ ಸವಾಲುಗಳನ್ನು ಪರಿಹರಿಸುವಲ್ಲಿ ಮುಂಚೂಣಿ: ಡಾ. ಬಸವರಾಜ ಅನಾಮಿ

| Published : Mar 06 2025, 12:32 AM IST

ಜಾಗತಿಕ ಸುಸ್ಥಿರತೆಯ ಸವಾಲುಗಳನ್ನು ಪರಿಹರಿಸುವಲ್ಲಿ ಮುಂಚೂಣಿ: ಡಾ. ಬಸವರಾಜ ಅನಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಣದಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಆಳವಡಿಸುವ ಮೂಲಕ ಶಾಲೆಗಳು ಮತ್ತು ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳನ್ನು ಬದಲಾವಣೆಯ ಹರಿಕಾರರನ್ನಾಗಿ ರೂಪಿಸಬಹುದು ಎಂದು ಡಾ. ಬಸವರಾಜ ಅನಾಮಿ ಹೇಳಿದರು.

ಧಾರವಾಡ: ಎಂಜನೀಯರ್‌ಗಳು ಸ್ಥಳೀಯ ಮತ್ತು ಜಾಗತಿಕ ಸುಸ್ಥಿರತೆಯ ಸವಾಲುಗಳನ್ನು ಪರಿಹರಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಕೆಎಲ್‌ಇ ತಾಂತ್ರಿಕ ವಿವಿ ಕುಲಸಚಿವ ಡಾ. ಬಸವರಾಜ ಅನಾಮಿ ಹೇಳಿದರು. ದಿ ಇನ್ನಿಟಿಟ್ಯೂಶನ್ ಆಫ್ ಎಂಜಿನೀಯರ್ಸ್‌ ಸ್ಥಾನಿಕ ಕೇಂದ್ರ ಆಯೋಜಿಸಿದ್ದ ವಿಶ್ವ ಎಂಜನೀಯರಿಂಗ್ ದಿನಾಚರಣೆಯಲ್ಲಿ ಮಾತನಾಡಿದರು.

ಶಿಕ್ಷಣದಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಆಳವಡಿಸುವ ಮೂಲಕ ಶಾಲೆಗಳು ಮತ್ತು ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳನ್ನು ಬದಲಾವಣೆಯ ಹರಿಕಾರರನ್ನಾಗಿ ರೂಪಿಸಬಹುದು. ಇದರಿಂದ ಅವರು ಸುಸ್ಥಿರ ಭವಿಷ್ಯಕ್ಕೆ ಕೊಡುಗೆ ನೀಡುತ್ತಾರೆ. ಆದರೆ, ಇದು ಕೇವಲ ಕ್ಷಣಿಕ ಪ್ರಯತ್ನವಾಗಿರಬಾರದು ಎಂದರು. ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಸಾಧಿಸಲು ಹಣಕಾಸು, ರಾಜಕೀಯ ಮತ್ತು ಪರಿಸರದ ಅಡೆತಡೆಗಳನ್ನು ಪರಿಹರಿಸುವ ಬಹು ಪಾಲುದಾರರ ವಿಧಾನಗಳ ಅಗತ್ಯವಿದೆ. ಸಾಮಾನ್ಯ ಜನರೂ ತಮ್ಮ ಅಭ್ಯಾಸಗಳನ್ನು ಬದಲಾಯಿಸಿಕೊಳ್ಳುವ ಮತ್ತು ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಜಾಗೃತಿ ಮೂಡಿಸಿ ಬದಲಾವಣೆ ತರಬಹುದು ಎಂದರು.

ಎಂಜಿನಿಯರ್ಸ್‌ ಕೇಂದ್ರದಗ ಅಧ್ಯಕ್ಷ ಡಾ. ವಿ.ಎಸ್. ಹವಾಲ್ಧಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶ್ವ ಎಂಜಿನೀಯರಿಂಗ್‌ ದಿನಾಚರಣೆ ನಮ್ಮ ಪ್ರಪಂಚವನ್ನು ನಿರ್ಮಿಸಿದ ಹಾಗೂ ಸುಧಾರಿಸಿದ ಎಂಜಿನೀಯರ್‌ಗಳನ್ನು ಗೌರವಿಸಲು ಮತ್ತು ನೆನಪಿಸಲು ಉದ್ದೇಶಿಸಲಾಗಿದೆ. ಇದು ಹಿಂದಿನ ಮತ್ತು ಪ್ರಸ್ತುತ ಎಂಜಿನೀಯರ್‌ಗಳಿಗೆ ಗೌರವ ಸಲ್ಲಿಸುವ ಜೊತೆಗೆ ಶಾಶ್ವತ ಅಭಿವೃದ್ಧಿಯ ಗುರಿಯನ್ನು ಸಾಧಿಸುವ ಪರಂಪರೆ ಮುಂದುವರಿಯಲು ಸಹಕಾರಿ. ಇಂದಿನ ಸಂಪತ್ತುಗಳನ್ನು ಜವಾಬ್ಧಾರಿಯುತವಾಗಿ ಬಳಸುವುದರ ಜೊತೆಗೆ ಇದೇ ಸಂಪತ್ತುಗಳು ಮುಂದಿನ ಜನಾಂಗಗಕ್ಕೆ ಸಿಗುವಂತಾಬೇಕು ಎಂದರು.

ಗೌರವ ಕಾರ್ಯದರ್ಶಿ ಶ್ರೀಹರಿ ಕೆ.ಎಚ್. ವಂದಿಸಿದರು. ಡಾ. ಕೆ.ಎನ್. ಪಾಟೀಲ ಪರಿಚಯಿಸಿದರು. ವಿಜಯ ತೋಟಗೇರ ಸ್ವಾಗತಿಸಿದರು.