ಪಟ್ಟಣದ ಅಟಲ್‌ ಜನಸ್ನೇಹಿ ಕೇಂದ್ರದಲ್ಲಿ ಜನಸಂದಣಿ ಹೆಚ್ಚಿದ್ದ ಬಗ್ಗೆ ‘ಕನ್ನಡಪ್ರಭ’ ಪ್ರಕಟಿಸಿದ್ದ ವರದಿಗೆ ಪ್ರತಿಸ್ಪಂದನೆ ದೊರೆತಿದ್ದು, ಗುಂಡ್ಲುಪೇಟೆ ತಹಸೀಲ್ದಾರ್‌ ಎಂ.ಎಸ್‌. ತನ್ಮಯ್‌ ಅವರು ಅಟಲ್‌ ಜೀ ಜನಸ್ನೇಹಿ ಕೇಂದ್ರವನ್ನು ಮುಂಜಾನೆ 7.30ಕ್ಕೆ ತೆರೆಯಲು ಆದೇಶಿಸಿದ್ದಾರೆ.

‘ಕನ್ನಡಪ್ರಭ’ ವರದಿ ಬೆನ್ನಲ್ಲೇ ತಹಸೀಲ್ದಾರ್‌ರಿಂದ ಪೂರಕ ಕ್ರಮ

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಪಟ್ಟಣದ ಅಟಲ್‌ ಜನಸ್ನೇಹಿ ಕೇಂದ್ರದಲ್ಲಿ ಜನಸಂದಣಿ ಹೆಚ್ಚಿದ್ದ ಬಗ್ಗೆ ‘ಕನ್ನಡಪ್ರಭ’ ಪ್ರಕಟಿಸಿದ್ದ ವರದಿಗೆ ಪ್ರತಿಸ್ಪಂದನೆ ದೊರೆತಿದ್ದು, ಗುಂಡ್ಲುಪೇಟೆ ತಹಸೀಲ್ದಾರ್‌ ಎಂ.ಎಸ್‌. ತನ್ಮಯ್‌ ಅವರು ಅಟಲ್‌ ಜೀ ಜನಸ್ನೇಹಿ ಕೇಂದ್ರವನ್ನು ಮುಂಜಾನೆ 7.30ಕ್ಕೆ ತೆರೆಯಲು ಆದೇಶಿಸಿದ್ದಾರೆ.

ಅಟಲ್‌ ಜೀ ಜನಸ್ನೇಹಿ ಕೇಂದ್ರದ ಅವ್ಯವಸ್ಥೆ ಬಗ್ಗೆ ಜು.14ರಂದು ‘ಅಟಲ್ ಜೀ ಜನಸ್ನೇಹಿ ಕೇಂದ್ರಕ್ಕೆ ಜನವೋ ಜನ, ಗ್ರಾಹಕ ಹೈರಾಣ’ ಶೀರ್ಷಿಕೆಯಡಿ ‘ಕನ್ನಡಪ್ರಭ’ ವರದಿ ಪ್ರಕಟಿಸಿತ್ತು.ವರದಿ ಬೆನ್ನಲ್ಲೇ ಎಚ್ಚೆತ್ತ ತಹಸೀಲ್ದಾರ್‌ ಎಂ.ಎಸ್. ತನ್ಮಯ್‌, ಜು.೧೫ರ ಬುಧವಾರ ಬೆಳಗ್ಗೆ ೭.೩೦ಕ್ಕೆ ಜನಸ್ನೇಹಿ ಕೇಂದ್ರ ಆರಂಭಕ್ಕೆ ಚಾಲನೆ ಕೊಟ್ಟಿದ್ದಾರೆ.ಜನಸ್ನೇಹಿ ಕೇಂದ್ರದಲ್ಲಿ 2 ಕೌಂಟರ್‌ ತೆರೆಯಬೇಕು ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಶಿವಪುರ ಮಹದೇವಪ್ಪ ಆಗ್ರಹಿಸಿದ್ದರು.

ಬೆಳಗ್ಗೆ ೭.೩೦ಕ್ಕೆ ಅರಂಭವಾದರೆ ಮಧ್ಯಾಹ್ನ ಊಟದ ಸಮಯದಲ್ಲೂ ಹಾಗೂ ಸಂಜೆ ೭ರ ತನಕ ಕೆಲಸ ಆರಂಭಿಸಲು ಸೂಚನೆ ನೀಡಿದ್ದೇನೆ. ಜನರು ಸದ್ಯಕ್ಕೆ ಸದುಪಯೋಗಪಡಿಸಿಕೊಳ್ಳಿ ಎಂದು ತಹಸೀಲ್ದಾರ್‌ ಹೇಳಿದರು.