ಸಾರಾಂಶ
ಕಾಪು: ನಮ್ಮ ಅಜ್ಜ ಮುತ್ತಜ್ಜ, ಹಿರಿಯರ ಕಾಲದಲ್ಲಿ ಆಟಿ ತಿಂಗಳು ಬಹಳ ಕಷ್ಟದ ಕಾಲವಾಗಿದ್ದು ಮಳೆಗಾಲದಲ್ಲಿ ಪರಿಸರದಲ್ಲಿ ಗಂಜಿಯೊಂದಿಗೆ ಬೆಳೆಯುತ್ತಿದ್ದ ಸೊಪ್ಪು, ಗೆಡ್ಡೆಗೆಣಸುಗಳನ್ನು ಆಹಾರವಾಗಿ ಬಳಸುತ್ತಿದ್ದರು. ಆರೋಗ್ಯವಾಗಿಯೂ ಬದುಕಿದ್ದರು. ಅದು ಆಯುರ್ವೇದ ಪದ್ಧತಿಯ ಔಷಧಿಯೂ ಆಗಿತ್ತು. ಇಂದು ಆಟಿಡೊಂಜಿ ದಿನದ ಆಚರಣೆಯೊಂದಿಗೆ ವರ್ಷದಲ್ಲೊಂದು ದಿನವಾದರೂ ಅಂದಿನ ಮಳೆಗಾಲದ ಆಹಾರ ತಿನ್ನುವುದು ಆರೋಗ್ಯಕ್ಕೂ ಒಳ್ಳೆಯದು ಎಂದು ಬೆಳ್ಮಣ್ ಸರಕಾರಿ ಪ.ಪೂ.ಕಾಲೇಜಿನ ಶಿಕ್ಷಕಿ ವಿಲಾಸಿನಿ ದೇವಾಡಿಗ ಹೇಳಿದ್ದಾರೆ.ಬಂಟಕಲ್ಲು-ಹೇರೂರು ದೇವಾಡಿಗ ಸೇವಾ ಸಂಘದ ವತಿಯಿಂದ ಶ್ರೀಗುರುರಾಘವೇಂದ್ರ ಸಮಾಜಸೇವಾ ಮಂಡಳಿಯ ಸಭಾಂಗಣದಲ್ಲಿ ಏರ್ಪಡಿಸಿದ ‘ಆಟಿಡೊಂಜಿ ದಿನ’ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ತುಳುನಾಡಿನ ಜಾನಪದ ಪರಂಪರೆ ಬಗ್ಗೆ ಮಾಹಿತಿ ನೀಡಿದರು.ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋ. ಹಾಸನ ತಾಲೂಕು ವಿಚಕ್ಷಣಾಧಿಕಾರಿ ಕವಿತಾ ಸುಧೀರ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕಟಪಾಡಿ ಎಎಸ್‌ಐ ದಯಾನಂದ ದೇವಾಡಿಗ ಇವರು ಸಂಘದ ಅಭಿವೃದ್ಧಿಗೆ ಪೂರಕವಾದ ಮಾಹಿತಿ ನೀಡಿ, ಎಸ್‌ಎಸ್‌ಎಲ್‌ಸಿ. ಪಿಯುಸಿ ಪ್ರತಿಭಾನ್ವಿತರನ್ನು ಅಭಿನಂದಿಸಿದರು.ಸಂಘದ ವಿಶೇಷ ಯೋಜನೆಯಾದ ‘ಆಸರೆ’ಯನ್ನು ಶ್ರೀಗುರುರಾಘವೇಂದ್ರ ಸಮಾಜಸೇವಾ ಮಂಡಳಿಯ ಉಪಾಧ್ಯಕ್ಷ ಮಾಧವ ಆಚಾರ್ಯ ಉದ್ಘಾಟಿಸಿದರು. ಈ ಸಂದರ್ಭ ವಿವಿಧ ಸ್ಫರ್ಧಾವಿಜೇತರಿಗೆ ಬಹುಮಾನ ನೀಡಲಾಯಿತು. ಸಂಘದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಸಂಘದ ಅಧ್ಯಕ್ಷ ದಿನೇಶ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಅಖಿಲಾ ದೇವಾಡಿಗ ಸ್ವಾಗತಿಸಿದರು. ಶ್ರೀನಿಧಿ ದೇವಾಡಿಗ ನಿರೂಪಿಸಿದರು. ಕಾರ್ಯದರ್ಶಿ ಅಭಿಷೇಕ್ ದೇವಾಡಿಗ ವಂದಿಸಿದರು. ಆಟಿ ತಿನಿಸುಗಳ ಸಹಭೋಜನ ವ್ಯವಸ್ಥೆ ಮಾಡಲಾಗಿತ್ತು.