ಸಾರಾಂಶ
ಖಚಿತ ಮಾಹಿತಿ ಮೇರೆಗೆ ನಾಗರಗಾಳಿ ವಲಯದ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಮಂಗಳವಾರ ದಾಳಿ ನಡೆಸಿ ಶ್ರೀಗಂಧ ಸಾಗಿಸುತ್ತಿದ್ದ ವ್ಯಕ್ತಿಯನ್ನು ಮಾಲುಸಮೇತ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಖಾನಾಪುರ
ಖಚಿತ ಮಾಹಿತಿ ಮೇರೆಗೆ ನಾಗರಗಾಳಿ ವಲಯದ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಮಂಗಳವಾರ ದಾಳಿ ನಡೆಸಿ ಶ್ರೀಗಂಧ ಸಾಗಿಸುತ್ತಿದ್ದ ವ್ಯಕ್ತಿಯನ್ನು ಮಾಲುಸಮೇತ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.ತಾಲೂಕಿನ ಗರ್ಬೇನಟ್ಟಿ ಗ್ರಾಮದ ನಿವಾಸಿ ಮಂಜು ಬಸಪ್ಪ ಮುರಗೋಡ ಬಂಧಿತ ಆರೋಪಿ. ಈತನಿಂದ 1 ಕೆಜಿ 200 ಗ್ರಾಂ ಶ್ರೀಗಂಧದ ಗಿಡ ಮತ್ತು ಬೇರು ಹಾಗೂ ಸಾಗಾಟಕ್ಕೆ ಬಳಸಿದ ಬೈಕ್ ವಶಕ್ಕೆ ಪಡೆದಿದ್ದಾರೆ.
ತಾಲೂಕಿನ ನಾಗರಗಾಳಿ ಅರಣ್ಯದಲ್ಲಿ ಶ್ರೀಗಂಧದ ಮರವನ್ನು ಬೇರುಸಮೇತ ಕಡಿದು ಸಾಗಿಸುತ್ತಿರುವ ಕುರಿತು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ಬಂದಿದ್ದು, ಕೂಡಲೇ ಕಾರ್ಯಪ್ರವೃತ್ತರಾದ ನಾಗರಗಾಳಿ ಎಸಿಎಫ್ ಶಿವಾನಂದ ಮಗದುಮ್ , ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನೊಳಗೊಂಡ ತಂಡವನ್ನು ರಚಿಸಿ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ನಾಗರಗಾಳಿ ಆರ್‌ಎಫ್‌ಒ ಪ್ರಶಾಂತ ಮಂಗಸೂಳಿ, ಮೇರಡಾ ಡಿಆರ್‌ಎಫ್‌ಒ ಎನ್.ಜಿ. ಹಿರೇಮಠ, ಸಿಬ್ಬಂದಿ ವಿಜಯ ಕೌಜಲಗಿ, ಮಂಜು ಗೌಡರ ಪ್ರದೀಪ ತುರಮರಿ, ಶ್ರವಣ ಕುಮಾರ ಹಾಗೂ ಇತರರು ಭಾಗವಹಿಸಿದ್ದರು. ನಾಗರಗಾಳಿ ಆರ್‌ಎಫ್‌ಒ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ.