ಸೇಡಂ ಪಟ್ಟಣದಲ್ಲಿ ಹಿಂದು ಯುವಕರ ಮೇಲೆ ಅನ್ಯ ಕೋಮಿನ ಯುವಕರಿಂದ ಹಲ್ಲೆ

| Published : Aug 11 2024, 01:33 AM IST

ಸೇಡಂ ಪಟ್ಟಣದಲ್ಲಿ ಹಿಂದು ಯುವಕರ ಮೇಲೆ ಅನ್ಯ ಕೋಮಿನ ಯುವಕರಿಂದ ಹಲ್ಲೆ
Share this Article
  • FB
  • TW
  • Linkdin
  • Email

ಸಾರಾಂಶ

ಕಲಬುರಗಿ ಜಿಲ್ಲೆಯ ಸೇಡಂ‌ ಪಟ್ಟಣದ ಕೋಡ್ಲಾ ಕ್ರಾಸ್ ಬಳಿ ರಸ್ತೆ ಮಧ್ಯೆ ಲಾರಿ ನಿಲ್ಲಿಸಿದ್ದನ್ನು ಯುವಕರು ಪ್ರಶ್ನೆ ಮಾಡಿದ್ದಕ್ಕೆ, ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅನ್ಯ ಕೋಮಿನ 15ಕ್ಕೂ ಹೆಚ್ಚು ಯುವಕರು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಜಿಲ್ಲೆಯ ಸೇಡಂ‌ ಪಟ್ಟಣದ ಕೋಡ್ಲಾ ಕ್ರಾಸ್ ಬಳಿ ರಸ್ತೆ ಮಧ್ಯೆ ಲಾರಿ ನಿಲ್ಲಿಸಿದ್ದನ್ನು ಯುವಕರು ಪ್ರಶ್ನೆ ಮಾಡಿದ್ದಕ್ಕೆ, ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅನ್ಯ ಕೋಮಿನ 15ಕ್ಕೂ ಹೆಚ್ಚು ಯುವಕರು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.

ರಘು ರಡ್ಡಿ ಮತ್ತು ರಾಹುಲ್​ ರೆಡ್ಡಿ ಹಲ್ಲೆಗೊಳಗಾದ ಯುವಕರಾಗಿದ್ದಾರೆ. ಮೆಹಬೂಬ್‌ ಹಾಗೂ ಸ್ನೇಹಿತರಾದ ಸೈಯದ್, ಸಲ್ಮಾನ್, ಶೇಖ್‌ ಇವರೆಲ್ಲರುಸೇರಿಕೊಂಡು ಹಲ್ಲೆ ಮಾಡಿದ್ದಾರೆ.

ರಘು ರೆಡ್ಡಿ ಹಾಗೂ ರಾಹುಲ್‌ ರೆಡ್ಡಿ ಗ್ಯಾರೇಜ್ ನಡೆಸುತ್ತಿದ್ದಾರೆ. ಆರೋಪಿ ಮೆಹಬೂಬ್‌ ಪಟೇಲ್‌ ರಸ್ತೆ ಮಧ್ಯೆ ಲಾರಿ ನಿಲ್ಲಿಸಿದ್ದನು. ರಾಹುಲ್ ರೆಡ್ಡಿ ಬೈಕ್ ಮೇಲೆ ಹೋಗುವಾಗ ಲಾರಿಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದ್ದಾನೆ. ಬಳಿಕ ರಾಹುಲ್​ ರೆಡ್ಡಿ ಲಾರಿಯನ್ನು ರಸ್ತೆ ಮಧ್ಯದಲ್ಲಿ ಏಕೆ ನಿಲ್ಲಿಸಿರುವೆ ಎಂದು ಮೇಹಬೂಬ್​ ಪಟೇಲ್​ನನ್ನು ಪ್ರಶ್ನಿಸಿದ್ದಾನ.

ಇದಕ್ಕೆ ಮೇಹಬೂಬ್ ಪಟೇಲ್ “ನಾನು ಲಾರಿ ಎಲ್ಲಿ ಬೇಕಾದರೂ ನಿಲ್ಲಿಸುತ್ತೇನೆ ನಿನ್ಯಾವನೋ ಕೇಳವನು” ಅಂತ ಅವಾಜ್ ಹಾಗಿದ್ದಾನೆ. ಬಳಿಕ ರಾಹುಲ್​ ಅವರಿಗೆ ಮೇಹಬೂಬ್ ಪಟೇಲ್ ಅವಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಹೀಗೆಯೇ ಇವರಿಬ್ಬರ ಮಧ್ಯೆ ಗಲಾಟೆ ಶುರುವಾಗಿದೆ.

ಇಬ್ಬರ ಮಧ್ಯೆ ಗಲಾಟೆ ವಿಚಾರ ತಿಳಿದು ರಾಹುಲ್ ಸಹೋದರ ರಘು ಸ್ಥಳಕ್ಕೆ ಬಂದಿದ್ದಾನೆ. ನಂತರ ಮೇಹಬೂಬ್ ಪಟೇಲ್ ಸ್ನೇಹಿತರಾದ ಸೈಯದ್ ಸುಲ್ತಾನ್, ಸಲ್ಮಾನ್ ಪಟೇಲ್, ಮೇಹಬೂಬ್ ಪಟೇಲ್, ಶೇಖ್ ಸಮೀರ್ ಸ್ಥಳಕ್ಕೆ ಬಂದು ಸಾರ್ವಜನಿಕವಾಗಿ ಏಕಾ ಏಕಿ ರೆಡ್ಡಿ ಸಹೋದರರ ಮೇಲೆ ಹಲ್ಲೆ ಮಾಡಿದ್ದಾರೆ. ಯುವಕರ ಮೇಲೆ ಹಲ್ಲೆ ಮಾಡಿದ ವಿಡಿಯೋ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಘಟನೆ ಸಂಬಂಧ ಸೇಡಂ ನಗರ ಪೊಲೀಸ್​ ಠಾಣೆಯಲ್ಲಿ ದೂರು ನೀಡಲಾಗಿದೆ . ಈಗಾಗಲೇ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಾಯಾಳು ರಘು ರೆಡ್ಡಿಯನ್ನು ಕಲಬುರಗಿಯಲ್ಲಿ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಸೇಡಂ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳಾದ ಸೈಯದ್ ಸುಲ್ತಾನ್, ಸಲ್ಮಾನ್ ಪಟೇಲ್‌, ಲಾರಿ ಚಾಲಕ ಮೇಹಬೂಬ್, ಸಮೀರ್​ನನ್ನು ಬಂಧಿಸಿದ್ದಾರೆ. ಎ1 ಆರೋಪಿ ಸೈಯದ್ ಸಮೀರ್ ಸೇರಿದಂತೆ ಇನ್ನೂ ಹಲವರು ಪರಾರಿಯಾಗಿದ್ದಾರೆ.