ಸಾರಾಂಶ
ಪ್ರೀತಿಗೆ ವಿರೋಧ ಹಾಗೂ ಮುಂದೆ ನಮ್ಮಿಬ್ಬರ ಮದುವೆಗೂ ಕುಟುಂಬದವರು, ಸಮಾಜ ವಿರೋಧ ವ್ಯಕ್ತಪಡಿಸುತ್ತಾರೆ ಎಂದು ಹೆದರಿ, ಜಿಗುಪ್ಸೆಗೊಂಡು ಪ್ರೇಮಿಗಳಿಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ರಬಕವಿ ಬನಹಟ್ಟಿ ತಾಲೂಕಿನ ಸಮೀಪದ ನಂದಗಾಂವ ಗ್ರಾಮದದಲ್ಲಿ ಶುಕ್ರವಾರ ನಡೆದಿದೆ. ನಂದಗಾಂವದ ಸಚಿನ್ ಭೀರಪ್ಪ ದಳವಾಯಿ (22) ಹಾಗೂ ಅದೇ ಗ್ರಾಮದ ಪ್ರತಿಭಾ ಮಲ್ಲಪ್ಪ ಮಡಿವಾಳ (19) ನೇಣಿಗೆ ಶರಣಾದದವರು.
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಪ್ರೀತಿಗೆ ವಿರೋಧ ಹಾಗೂ ಮುಂದೆ ನಮ್ಮಿಬ್ಬರ ಮದುವೆಗೂ ಕುಟುಂಬದವರು, ಸಮಾಜ ವಿರೋಧ ವ್ಯಕ್ತಪಡಿಸುತ್ತಾರೆ ಎಂದು ಹೆದರಿ, ಜಿಗುಪ್ಸೆಗೊಂಡು ಪ್ರೇಮಿಗಳಿಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ರಬಕವಿ ಬನಹಟ್ಟಿ ತಾಲೂಕಿನ ಸಮೀಪದ ನಂದಗಾಂವ ಗ್ರಾಮದದಲ್ಲಿ ಶುಕ್ರವಾರ ನಡೆದಿದೆ. ನಂದಗಾಂವದ ಸಚಿನ್ ಭೀರಪ್ಪ ದಳವಾಯಿ (22) ಹಾಗೂ ಅದೇ ಗ್ರಾಮದ ಪ್ರತಿಭಾ ಮಲ್ಲಪ್ಪ ಮಡಿವಾಳ (19) ನೇಣಿಗೆ ಶರಣಾದದವರು.ಹಿರಿಯರಿಂದ ಪದೇಪದೇ ಬುದ್ಧಿವಾದ:
ಇಬ್ಬರೂ ಎರಡು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಗ್ರಾಮದ ಹಿರಿಯರು, ಮನೆಯವರು ಪದೇಪದೇ ಅವರಿಗೆ ಬುದ್ಧಿವಾದ ಹೇಳುತ್ತ ಬಂದಿದ್ದರು. ಆದರೆ, ಇದನ್ನು ಲೆಕ್ಕಿಸದೇ ಇಬ್ಬರೂ ಪ್ರೀತಿಸುತ್ತಿದ್ದರು. ಇನ್ನು ಮುಂದೆಯೂ ನಮ್ಮ ಮದುವೆಗೂ ಇವರು ವಿರೋಧ ವ್ಯಕ್ತಪಡಿಸುತ್ತಾರೆ ಎಂದು ಪರಸ್ಪರ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಕುರಿತಾಗಿ ಹುಡುಗಿ ತಾಯಿ ನೀಲವ್ವ ಮಲ್ಲಪ್ಪ ಮಡಿವಾಳ ಮಹಾಲಿಂಗಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ನಡೆದ ಸ್ಥಳಕ್ಕೆ ಮಹಜರು ನಡೆಸಲು ಜಮಖಂಡಿ ಡಿವೈಎಸ್ಪಿ ಶಾಂತವೀರ ಮತ್ತು ಮಹಾಲಿಂಗಪುರ ಠಾಣೆ ಠಾಣಾಧಿಕಾರಿ ಕಿರಣ ಸತ್ತಿಗೇರಿ ಹಾಗೂ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.