ಸಾರಾಂಶ
ಹಾವು ಎಂದಿಗೂ ಹಾಲು ಕುಡಿಯುವುದಿಲ್ಲ. ಕಲ್ಲು ನಾಗರಕ್ಕೆ ಹಾಲೆರೆದು ಅಮೃತ ಸಮಾನವಾದ ಹಾಲನ್ನು ಮಣ್ಣಿಗೆ ಹಾಕುವ ಬದಲು ಆ ಹಾಲನ್ನು ಚಿಕ್ಕಮಕ್ಕಳಿಗೆ ಕುಡಿಸುವುದರ ಮೂಲಕ ಬಸವ ಪಂಚಮಿ ಆಚರಿಸುತ್ತಿರುವುದು ವಿಶೇಷ
ಮುಂಡರಗಿ: ಇಲ್ಲಿನ ಅನೇಕ ಪ್ರಗತಿಪರ ಸಂಘಟನೆಯ ಹಿರಿಯರು ಹಾಗೂ ಗೆಳೆಯರೆಲ್ಲರೂ ಸೇರಿಕೊಂಡು ಪ್ರತಿ ವರ್ಷವೂ ನಾಗರ ಪಂಚಮಿ ಮರುದಿನ ಹುತ್ತ ಮುರಿಯುವ ಹಬ್ಬದ ದಿವಸ ಪಟ್ಟಣದ ವಿವಿಧ ವಾರ್ಡ್‌ಗಳ ಸ್ಲಂ ಪ್ರದೇಶಗಳಿಗೆ ತೆರಳಿ ಅಲ್ಲಿನ ಮಕ್ಕಳಿಗೆ ಹಾಲು ಕುಡಿಸಿ ಬರುವ ಕಾರ್ಯ ಮಾಡುತ್ತಿರುವುದು ಅತ್ಯಂತ ಶ್ರೇಷ್ಠ ಕಾರ್ಯವಾಗಿದೆ ಎಂದು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಅವರು ಶುಕ್ರವಾರ ಸಂಜೆ ಮುಂಡರಗಿ ಪಟ್ಟಣದ ಕಡ್ಲಿಪೇಟೆ ಓಣಿಯಲ್ಲಿ ಬಸವ ಬಳಗ ಹಾಗೂ ಮಾನವ ಬಂಧುತ್ವ ವೇದಿಕೆ ಸಂಯುಕ್ತವಾಗಿ ಆಯೋಜಿಸಿದ್ದ ಬಸವ ಪಂಚಮಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಕ್ಕಳಿಗೆ ಹಾಲು ಕುಡಿಸಿ ಮಾತನಾಡಿದರು.ಹಾವು ಎಂದಿಗೂ ಹಾಲು ಕುಡಿಯುವುದಿಲ್ಲ. ಕಲ್ಲು ನಾಗರಕ್ಕೆ ಹಾಲೆರೆದು ಅಮೃತ ಸಮಾನವಾದ ಹಾಲನ್ನು ಮಣ್ಣಿಗೆ ಹಾಕುವ ಬದಲು ಆ ಹಾಲನ್ನು ಚಿಕ್ಕಮಕ್ಕಳಿಗೆ ಕುಡಿಸುವುದರ ಮೂಲಕ ಬಸವ ಪಂಚಮಿ ಆಚರಿಸುತ್ತಿರುವುದು ವಿಶೇಷವಾದ ಕಾರ್ಯಕ್ರಮವಾಗಿದೆ.ಇದು ಹೀಗೆ ಮುಂದುವರೆಯುವಂತಾಗಲಿ ಎಂದರು.
ಈ ಸಂದರ್ಭದಲ್ಲಿ ಪ್ರೊ. ಎ.ಬಿ.ಹಿರೇಮಠ, ಎಂ.ಎಂ. ಹೆಬ್ಬಾಳ, ಮುತ್ತು ಹಾಳಕೇರಿ, ಎಚ್.ಎಂ. ಕಾತರಕಿ, ಅಡಿವೆಪ್ಪ ಛಲವಾದಿ, ಡಿ.ಎಂ. ನಾಗರಳ್ಳಿ, ಜಿ.ಬಿ. ಬಂಕಾಪೂರ, ಬಸವರಾಜ ಬೆನ್ನೂರು, ದೇವು ಹಡಪದ, ದುದ್ದುಸಾಬ್ ಹಣಗಿ, ನಬೀಸಾಬ್ ಕೆಲೂರು, ಕೆ.ಕೆ.ಮುಲ್ಲಾನವರ, ವಿಷ್ಣು ಹಾಳಕೇರಿ, ಧೃವಕುಮಾರ ಹೂಗಾರ, ರಾಜಾಭಕ್ಷಿ ಬೆಟಗೇರಿ, ಸಂತೋಷ ಹಿರೇಮನಿ, ಸುರೇಶ ಬಣಗಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದು ಮಕ್ಕಳಿಗೆ ಹಾಲು ಕುಡಿಸಿದರು.ಎ.ಕೆ.ಮುಲ್ಲಾನವರ ಪ್ರಾಸ್ತಾವಿಕವಾಗಿ ಮಾತನಾಡಿದರು.