ಮೂಡುಬಿದಿರೆ ಲೆಪ್ಪದ ಬಸದಿಯ ಅಟ್ಟಳಿಗೆ ಲೋಕಾರ್ಪಣೆ

| Published : Dec 21 2023, 01:15 AM IST

ಸಾರಾಂಶ

ಮೂಡುಬಿದಿರೆ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಉಪಸ್ಥಿತಿಯಲ್ಲಿ ಚೌಟರ ಅರಮನೆಯ ಕುಟುಂಬಸ್ಥರಾದ ಹಾಸನದ ಎಸ್.ಎಂ ರತ್ನ ರಾಜಯ್ಯ-ಕೇಸರಿ ದಂಪತಿ ಲೆಪ್ಪದ ಬಸದಿಯ ನವೀಕೃತ ಅಟ್ಟಳಿಗೆಯನ್ನು ಲೋಕಾರ್ಪಣೆಗೊಳಿಸಿದರು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಮೃಣ್ಮಯ ಮೂರ್ತಿಗಳು ಆರಾಧಿಸಲ್ಪಡುವ ಇಲ್ಲಿನ ಲೆಪ್ಪದ ಬಸದಿಯ ನವೀಕೃತ ಅಟ್ಟಳಿಗೆ ಲೋಕಾರ್ಪಣೆ ಹಾಗೂ ವಾರ್ಷಿಕ ಅಟ್ಟಳಿಗೆ ಅಭಿಷೇಕ ಚೌಟರ ಅರಮನೆಯ ಕುಟುಂಬಸ್ಥರಿಂದ ಶುಕ್ರವಾರ ನೆರವೇರಿತು.

ಮೂಡುಬಿದಿರೆ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಉಪಸ್ಥಿತಿಯಲ್ಲಿ ಚೌಟರ ಅರಮನೆಯ ಕುಟುಂಬಸ್ಥರಾದ ಹಾಸನದ ಎಸ್.ಎಂ ರತ್ನ ರಾಜಯ್ಯ-ಕೇಸರಿ ದಂಪತಿ ನವೀಕೃತ ಅಟ್ಟಳಿಗೆಯನ್ನು ಲೋಕಾರ್ಪಣೆಗೊಳಿಸಿದರು.

ಧರ್ಮಸ್ಥಳದ ಸುರೇಂದ್ರ ಕುಮಾರ್, ಮಾಜಿ ಸಚಿವ ಕೆ. ಅಭಯಚಂದ್ರ, ಬಸದಿಗಳ ಮೊಕ್ತೇಸರರಾದ ಪಟ್ಟಶೆಟ್ಟಿ ಸುದೇಶ್ ಕುಮಾರ್, ದಿನೇಶ್ ಕುಮಾರ್ ಆನಡ್ಕ, ಆದರ್ಶ್ ಎಂ., ಚೌಟರ ಅರಮನೆ ನಾಭಿರಾಜ್, ಕುಲದೀಪ ಎಂ. ಕೊಂಡೆ ಮನೆತನದ ಕೆ. ಹೇಮರಾಜ್, ವಿಶಾಲ್ ಕೀರ್ತಿ, ಎಂಸಿಎಸ್ ಅಧ್ಯಕ್ಷ ಬಾಹುಬಲಿ ಪ್ರಸಾದ್, ಪುರಸಭೆ ಸದಸ್ಯೆ ಶ್ವೇತಾ ಪ್ರವೀಣ್ ಉಪಸ್ಥಿತರಿದ್ದರು. ಮೂಡುಬಿದಿರೆಯ ಬಸದಿಗಳ ಪ್ರಧಾನ ಪುರೋಹಿತರು, ಯುವ ಪುರೋಹಿತರು, ಕೊಂಡೆ ಸ್ಟ್ರೀಟ್ ತ್ರಿಭುವನ್ ಅಸೋಸಿಯೇಶನ್ ಸದಸ್ಯರು, ಅಟ್ಟಳಿಗೆ ನಿರ್ಮಿಸಿದ ಸದಾಶಿವ ಕೋಟ್ಯಾನ್, ಸಹಕರಿಸಿದ ಮಹಾಬಲ ನಾಯ್ಕ ವಿದ್ಯುದ್ದೀಪಾಲಂಕಾರದ ಚಂದ್ರು ಕಹಳೆಯ ಸೀತಾರಾಮ ವಾಲಗದ ಸುರೇಶ್, ಚೆಂಡಯ ಹರೀಶ್ ಸಹಿತ ೩೫ ಮಂದಿಯನ್ನು ಸನ್ಮಾನಿಸಲಾಯಿತು.

ಆದರ್ಶ ಎಂ. ಸ್ವಾಗತಿಸಿದರು. ಡಾ.ಪ್ರಭಾತ್ ಬಲ್ನಾಡು ನಿರೂಪಿಸಿದರು. ಸರ್ವೇಶ್ ಜೈನ್ ಬಳಗದವರು ಜಿನ ಭಕ್ತಿಗೀತೆಗಳ ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟರು.