ಶ್ರವಣದೋಷ ನಿವಾರಣಾ ಕಾರ್ಯಕ್ರಮ

| Published : Dec 21 2023, 01:15 AM IST

ಸಾರಾಂಶ

ಗಂಗಾವತಿ ತಾಲೂಕಿನಾದ್ಯಂತ ಸುಮಾರು 300ಕ್ಕೂ ಹೆಚ್ಚು ಶ್ರವಣದೋಷದ ರೋಗಿಗಳು ಬಂದು ಚಿಕಿತ್ಸೆ ಪಡದಿದ್ದಾರೆ. ಕಿವಿ, ಮೂಗು ತಜ್ಞ ಡಾ.ಅಭಿನಾಶ್ ಸಲಹೆ ಪಡೆದು ಕಿವಿಯ ಬಗ್ಗೆ ಸ್ವಲ್ಪ ಕಾಳಜಿ ವಹಿಸಬೇಕು.

ಗಂಗಾವತಿ: ಇಲ್ಲಿನ ಉಪವಿಭಾಗದ ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ರಾಷ್ಟ್ರೀಯ ಶ್ರವಣ ದೋಷ ನಿವಾರಣೆ ಮತ್ತು ನಿಯಂತ್ರಣ ಕಾರ್ಯಕ್ರಮ ನಡೆಯಿತು.ಗಂಗಾವತಿ ಉಪವಿಭಾಗ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಈಶ್ವರ ಶಿ.ಸವಡಿ, ಕಿವಿ-ಮೂಗು ತಜ್ಞ ಡಾ.ಅಭಿನಾಶ್ 300ಕ್ಕೂ ಹೆಚ್ಚು ಕಿವಿಗೆ ಸಂಬಂಧಿಸಿದ ದೋಷದ ಬಗ್ಗೆ ಪರೀಕ್ಷಿಸಿ ಚಿಕಿತ್ಸೆ ನೀಡಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಉಪವಿಭಾಗ ಸರ್ಕಾರಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಈಶ್ವರ ಸವಡಿ, ಗಂಗಾವತಿ ತಾಲೂಕಿನಾದ್ಯಂತ ಸುಮಾರು 300ಕ್ಕೂ ಹೆಚ್ಚು ಶ್ರವಣದೋಷದ ರೋಗಿಗಳು ಬಂದು ಚಿಕಿತ್ಸೆ ಪಡದಿದ್ದಾರೆ. ಕಿವಿ, ಮೂಗು ತಜ್ಞ ಡಾ.ಅಭಿನಾಶ್ ಸಲಹೆ ಪಡೆದು ಕಿವಿಯ ಬಗ್ಗೆ ಸ್ವಲ್ಪ ಕಾಳಜಿ ವಹಿಸಬೇಕು ಎಂದು ಸಾರ್ವಜನಿಕರಿಗೆ ಸಲಹೆ ನೀಡಿದರು.ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ.ಗೌರಿಶಂಕರ್, ಡಾ.ರವೀಂದ್ರನಾಥ, ಡಾ.ಪದ್ಮ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯ ಪ್ರಸಾದ್, ಡಾ.ರಾಧಿಕಾ, ಸುರೇಶ ಎಚ್., ರಮೇಶ ಹಾಲಮನಿ, ಸಿಬ್ಬಂದಿ ಕೆ.ಹನುಮೇಶ, ಗುರುಪ್ರಸಾದ್ ಸೇರಿದಂತೆ ಇತರರು ಇದ್ದರು.