ಅತಿಥಿ ಉಪನ್ಯಸಕರನ್ನು ಶಾಲೆಗೆ ಕರೆಸಲು ಆಗ್ರಹ

| Published : Dec 21 2023, 01:15 AM IST

ಅತಿಥಿ ಉಪನ್ಯಸಕರನ್ನು ಶಾಲೆಗೆ ಕರೆಸಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಅತಿಥಿ ಉಪನ್ಯಾಸಕರ ಹಲವು ಬೇಡಿಕೆ ಹಿನ್ನೆಲೆಯಲ್ಲಿ ಧರಣಿ ನಡೆಯುತ್ತಿದ್ದು, ಉಪನ್ಯಾಸಕರು ಧರಣಿ ತೊರೆದು ಪಾಠ ಮಾಡಲು ಶಾಲೆಗೆ ಮರಳಬೇಕೆಂದು ಮನವಿ ಮಾಡಲಾಯಿತು.

ಹೊಳಲ್ಕೆರೆ: ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಿ ಅವರು ತಕ್ಷಣವೇ ಕಾಲೇಜಿಗೆ ವಾಪಾಸ್‌ ಕರೆಸಿ ಪಾಠ ಮಾಡಬೇಕೆಂದು ಆಗ್ರಹಿಸಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಹೊಳಲ್ಕೆರೆಯಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಿ ತಹಸೀಲ್ದಾರ್‌ ಬೀಬಿ ಫಾತಿಮಾ ಅವರಿಗೆ ಮನವಿ ಸಲ್ಲಿಸಿದರು.

ಕಾಲೇಜಿನಲ್ಲಿ ಸುಮಾರು 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಿಎ, ಬಿಕಾಂ, ಬಿಎಸ್‌ಸಿ ಕೋರ್ಸ್‌ ಅಧ್ಯಯನ ಮಾಡುತ್ತಿದ್ದಾರೆ. ಇಷ್ಟು ವಿದ್ಯಾರ್ಥಿಗಳಿಗೆ 10 ಕಾಯಂ ಉಪನ್ಯಾಸಕರು ಮಾತ್ರ ಇದ್ದು, 32 ಅತಿಥಿ ಉಪನ್ಯಾಸಕರಿದ್ದಾರೆ. ಅತಿಥಿ ಉಪನ್ಯಾಸಕರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಒಂದು ತಿಂಗಳಿನಿಂದ ಕಾಲೇಜಿಗೆ ಗೈರಾಗಿ ಪ್ರತಿಭಟನೆಗೆ ಹೋಗಿದ್ದಾರೆ. ಉಳಿದ ಖಾಯಾಂ ಉಪನ್ಯಾಸಕರನ್ನು ಲೋಕಸಭಾ ಚುನಾವಣೆಯ ಕಾರ್ಯಕ್ಕೆ ನೇಮಿಸಲಾಗಿದೆ. ಇದರಿಂದ ನಮಗೆ ಪಾಠ ಮಾಡುವವರೇ ಇಲ್ಲದಂತಾಗಿದ್ದಾರೆ ಎಂದು ವಿದ್ಯಾರ್ಥಿಗಳು ಮನವಿ ಮಾಡಿಕೊಂಡರು.

ಡಿ.27ಕ್ಕೆ ಸೆಮಿಸ್ಟರ್‌ ಶೈಕ್ಷಣಿಕ ಅವಧಿ ಕೊನೆಯಾಗಿರುತ್ತದೆ. ಅವಧಿ ಮುಗಿದ ಒಂದು ವಾರದಲ್ಲಿ ಪರೀಕ್ಷೆಗಳು ಪ್ರಾರಂಭವಾಗುತ್ತವೆ. ಆದರೆ ನಮಗೆ ಇದುವರೆಗೆ ಅರ್ಧದಷ್ಟೂ ಪಾಠಗಳು ಆಗಿಲ್ಲ. ಕೆಲವು ವಿಷಯಗಳ ಬೋಧನೆ ಇನ್ನೂ ಪ್ರಾರಂಭಿಸೆ ಇಲ್ಲ. ಅದರಲ್ಲೂ ಬಿಎ, ಬಿಎಸ್‌ಸಿ ಕೋರ್ಸ್‌ಗಳಿಗೆ ಅತಿಥಿ ಉಪನ್ಯಾಸಕರು ಮಾತ್ರ ಇರುವುದರಿಂದ ಹೆಚ್ಚು ಅನ್ಯಾಯ ಆಗಿದೆ. ಹೀಗಾದರೆ ಪರೀಕ್ಷೆ ಬರೆಯುವುದು ಹೇಗೆ ವಿಶ್ವವಿದ್ಯಾಲಯದವರು ಶೈಕ್ಷಣಿಕ ಅವಧಿಯನ್ನು ಒಂದು ತಿಂಗಳು ಮುಂದೂಡಬೇಕು. ಅತಿಥಿ ಶಿಕ್ಷಕರ ಬೇಡಿಕೆ ಈಡೇರಿಸಿ ಅವರು ತಕ್ಷಣವೇ ಕಾಲೇಜಿಗೆ ಬರುವಂತೆ ಮಾಡಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.

ವಿದ್ಯಾರ್ಥಿ ಮುಖಂಡ ಜಿ.ಕೆ.ಮುನಿ, ಡಿ.ಕೆ.ಜಗದೀಶ್, ಟಿ.ಎಸ್.ಮಧುವರ್ಧನ್, ಭೂಮಿಕಾ, ಎಂ.ಶ್ವೇತಾ, ಆರ್.ನೇತ್ರಾವತಿ ಹಾಗೂ ವಿದ್ಯಾರ್ಥಿಗಳು ಇದ್ದರು.