ಸಾರಾಂಶ
ರಾಮನಗರ: ಮೂವರು ರೌಡಿಗಳ ಗುಂಪೊಂದು ಲಾಂಗ್ ಗಳನ್ನು ಹಿಡಿದು ಯುವಕನನ್ನು ಅಟ್ಟಾಡಿಸಿ ಕೊಲೆಗೆ ಯತ್ನಿಸಿರುವ ಘಟನೆ ನಗರದ ರಾಯರದೊಡ್ಡಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ರಾಮನಗರ: ಮೂವರು ರೌಡಿಗಳ ಗುಂಪೊಂದು ಲಾಂಗ್ ಗಳನ್ನು ಹಿಡಿದು ಯುವಕನನ್ನು ಅಟ್ಟಾಡಿಸಿ ಕೊಲೆಗೆ ಯತ್ನಿಸಿರುವ ಘಟನೆ ನಗರದ ರಾಯರದೊಡ್ಡಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಮಾರ್ಚ್ 1ರಂದು ನಡೆದಿರುವ ಘಟನೆಯ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಯು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಕುರಿತು ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಲ ವರ್ಷಗಳ ಹಿಂದೆ ಅಪರಾಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ಮಹಾಲಿಂಗ ವಿರುದ್ಧ ಐಜೂರು ಮತ್ತು ಬಿಡದಿ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಆರೋಪದಡಿ ಪ್ರಕರಣ ದಾಖಲಾಗಿವೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಆತನ ಎದುರು ಗುಂಪಿನವರು ಕೊಲೆಗೆ ಯತ್ನಿಸಿರುವ ಶಂಕೆ ವ್ಯಕ್ತವಾಗಿದೆ.ಘಟನೆ ವಿವರ:
ನಗರದ ರಾಯರದೊಡ್ಡಿಯಲ್ಲಿರುವ ತಮ್ಮ ಮನೆ ಬಳಿಯ ಬ್ಯೂಟಿ ಪಾರ್ಲರ್ ಬಳಿ ಮಹಾಲಿಂಗ ತನ್ನ ಪತ್ನಿಯೊಂದಿಗೆ ನಿಂತಿದ್ದನು. ಈ ವೇಳೆ ವಾಹನದಲ್ಲಿ ಬಂದ ಮೂವರು ರೌಡಿಗಳು ಕೈಯಲ್ಲಿ ಲಾಂಗ್ ಹಿಡಿದುಕೊಂಡು ಮಹಾಲಿಂಗನತ್ತ ನುಗ್ಗಿದ್ದಾರೆ. ಮೂವರು ರೌಡಿಗಳ ತಂಡ ಏಕಾಏಕಿ ನುಗ್ಗಿದ್ದರಿಂದ ಮಹಾಲಿಂಗ ಸ್ಥಳದಿಂದ ಪರಾರಿಯಾಗಲು ಮುಂದಾಗಿದ್ದಾನೆ. ಆದರೂ ಬಿಡದ ರೌಡಿಗಳು ಗಲ್ಲಿಗಲ್ಲಿಗಳಲ್ಲಿ ಆತನನ್ನು ಅಟ್ಟಾಡಿಸಿಕೊಂಡು ಹೋಗಿದ್ದಾರೆ. ಈ ವೇಳೆ ಆತನ ಪತ್ನಿ ‘ನನ್ನ ಗಂಡನ ಬಿಡ್ರೊ’ ಎಂದು ಜೋರಾಗಿ ಕೂಗಿಕೊಂಡು ರೌಡಿಗಳ ಹಿಂದೆ ಓಡಿದ್ದಾರೆ. ಗಲ್ಲಿಗಳಲ್ಲಿ ಓಡಿದ ಮಹಾಲಿಂಗ ರೌಡಿಗಳಿಂದ ತಪ್ಪಿಸಿಕೊಂಡಿದ್ದಾನೆ.ರೌಡಿಗಳು ಮಹಾಲಿಂಗನನ್ನು ಅಟ್ಟಾಡಿಸಿಕೊಂಡು ಹೋದ ದೃಶ್ಯಗಳು ಮನೆಯೊಂದರ ಬಳಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.6ಕೆಆರ್ ಎಂಎನ್ 6.ಜೆಪಿಜಿ.
ಮಹಾಲಿಂಗನನ್ನು ಅಟ್ಟಾಡಿಸಿಕೊಂಡು ಹೋಗುತ್ತಿರುವ ರೌಡಿಗಳು.