ಸಾರಾಂಶ
ಕನ್ನಡ ಚಿತ್ರರಂಗದ ಖ್ಯಾತನಟ ಧ್ರುವಸರ್ಜಾ ಚಿತ್ರದುರ್ಗ ಕ್ಷೇತ್ರದ ಶಾಸಕ ಕೆ.ಸಿ. ವೀರೇಂದ್ರ(ಪಪ್ಪಿ)ಅವರ ಮನೆಗೆ ಭೇಟಿ ನೀಡಿ ಕೆಲಗಂಟೆಗಳ ಕಾಲ ಅವರೊಂದಿಗೆ ಚರ್ಚೆ ನಡೆಸಿ, ಗಾಂಧಿನಗರದ ಸರ್ವಧರ್ಮ ಗಣಪತಿ ಮೂರ್ತಿ ಪ್ರತಿಷ್ಟಾಪನಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ಕನ್ನಡಪ್ರಭವಾರ್ತೆ ಚಳ್ಳಕೆರೆ
ಕನ್ನಡ ಚಿತ್ರರಂಗದ ಖ್ಯಾತನಟ ಧ್ರುವಸರ್ಜಾ ಚಿತ್ರದುರ್ಗ ಕ್ಷೇತ್ರದ ಶಾಸಕ ಕೆ.ಸಿ. ವೀರೇಂದ್ರ(ಪಪ್ಪಿ)ಅವರ ಮನೆಗೆ ಭೇಟಿ ನೀಡಿ ಕೆಲಗಂಟೆಗಳ ಕಾಲ ಅವರೊಂದಿಗೆ ಚರ್ಚೆ ನಡೆಸಿ, ಗಾಂಧಿನಗರದ ಸರ್ವಧರ್ಮ ಗಣಪತಿ ಮೂರ್ತಿ ಪ್ರತಿಷ್ಟಾಪನಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.ಸುದ್ದಿಗಾರರೊಂದಿಗೆ ಮಾತನಾಡಿದ ನಟ ಧ್ರವಸರ್ಜಾ, ಕೆ.ಸಿ.ವೀರೇಂದ್ರ(ಪಪ್ಪಿ)ಯವರು ಕನ್ನಡ ಚಿತ್ರರಂಗದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ವಿಶೇಷವಾಗಿ ಕನ್ನಡ ಚಿತ್ರರಂಗದ ಖ್ಯಾತ, ಹಿರಿಯನಟ ದೊಡ್ಡಣ್ಣನವರ ಅಳಿಯ ಆಗಿದ್ದಾರೆ. ಚಿತ್ರರಂಗದ ನಾಯಕ ನಟರಿಂದ ಹಿಡಿದು ಚಿಕ್ಕಪುಟ್ಟ ಪಾತ್ರಗಳನ್ನು ನಿಭಾಯಿಸುವ ನಟರೂ ಸಹ ಪಪ್ಪಿಯವರೊಂದಿಗೆ ಹೆಚ್ಚು ಸೌಹಾರ್ಧತೆಯನ್ನು ಹೊಂದಿದ್ದಾರೆ.
ಗಣೇಶನ ಉತ್ಸವಕ್ಕೆ ಆಗಮಿಸಲು ಆಮಂತ್ರಣ ನೀಡಿದ್ದರು. ಹಾಗಾಗಿ ಅವರ ಸ್ನೇಹಕ್ಕೆ ಬೆಲೆ ನೀಡಿ ಚಳ್ಳಕೆರೆಗೆ ಆಗಮಿಸಿ ಅಭಿಮಾನಿಗಳ ದರ್ಶನ ಪಡೆದಿದ್ದೇನೆ. ಕನ್ನಡ ಚಿತ್ರರಂಗ ಇನ್ನೂ ಹೆಚ್ಚಿನ ಮಟ್ಟದಲ್ಲಿ ಬೆಳೆಯಬೇಕಿದೆ. ಪ್ರೇಕ್ಷಕರು ಆಪೇಕ್ಷೆಪಡುವ ಪಾತ್ರ ಹಾಗೂ ಚಿತ್ರಗಳನ್ನು ನೀಡಲು ಸಾಕಷ್ಟು ಪರಿಶ್ರಮ ವಹಿಸಲಾಗುತ್ತಿದೆ ಎಂದರು.ಶಾಸಕ ಕೆ.ವಿ.ವೀರೇಂದ್ರ(ಪಪ್ಪಿ) ಮಾತನಾಡಿ, ನಟರಾಗಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಚಿತ್ರರಂಗದ ಪ್ರಭಾವಿ ನಟರಲ್ಲಿ ಧ್ರುವ ಸರ್ಜಾ ಸಹ ಒಬ್ಬರು. ಕಳೆದ ಹಲವಾರು ವರ್ಷಗಳಿಂದ ನಾನು ಅವರನ್ನು ಚಳ್ಳಕೆರೆಗೆ ಆಗಮಿಸುವಂತೆ ಮನವಿ ಮಾಡಿದ್ದೆ. ಆದರೆ ಅದು ಸಾಧ್ಯ ಆಗಿರಲಿಲ್ಲ. ಇಂದು ಆಕಸ್ಮಿಕವಾಗಿ ಬೆಂಗಳೂರಿಗೆ ಮರಳುವ ಸಂದರ್ಭದಲ್ಲಿ ಚಳ್ಳಕೆರೆಗೆ ಭೇಟಿ ನೀಡಿದ್ದಾರೆ. ಸ್ನೇಹ ಜೀವಿ ಧ್ರುವಸರ್ಜಾ ವಿಶ್ವಾಸಕ್ಕೆ ಹೆಚ್ಚು ಬೆಲೆಕೊಡುತ್ತಾರೆಂಬುವುದಕ್ಕೆ ಇಂದು ಅವರು ಆಗಮಿಸಿ ಮಾತನಾಡಿರುವುವುದು ಸಾಕ್ಷಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಗಾಂಧಿನಗರದ ಸರ್ವಧರ್ಮಗಣಪತಿ ಸಮಿತಿ ಅಧ್ಯಕ್ಷ, ನಗರಸಭಾ ಸದಸ್ಯ ಹೊಯ್ಸಳಗೋವಿಂದ, ಮುರುಳಿ ಇನ್ನಿತರರು ಉಪಸ್ಥಿತರಿದ್ದರು.