ಮಣಿಪಾಲ ರೋಟರಿಯಿಂದ ಪ್ರಶಸ್ತಿ ಪ್ರದಾನ

| Published : Jun 17 2024, 01:35 AM IST

ಸಾರಾಂಶ

ಪರಿಸರ ಸಂರಕ್ಷಣೆ, ಕೃಷಿ ಭೂಮಿಯ ಫಲವತ್ತತೆ ಕುರಿತು ವಿಶೇಷ ಅಧ್ಯಯನ ಮಾಡಿ ಸಾಧನೆಗೈದ ಅನಂತ ಪ್ರಭು ಗೋವಾ ಅವರಿಗೆ ರೋಟರಿ ನಿಕಟಪೂರ್ವ ಜಿಲ್ಲಾ ಗವರ್ನರ್ ಡಾ. ಗೌರಿ ರೋಟರಿ ಅವಾರ್ಡ್ ನೀಡಿ ಗೌರವಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ರೋಟರಿ ಕ್ಲಬ್ ಮಣಿಪಾಲ್ ವತಿಯಿಂದ ರೋಟರಿ ಜನಸೇವಾ ಅವಾರ್ಡ್ ಪ್ರಶಸ್ತಿ ಪ್ರದಾನ ಸಮಾರಂಭ ನಗರದ ಸರ್ಕಾರಿ ಮಹಿಳಾ ಹೈಸ್ಕೂಲ್ ಸಭಾಂಗಣದಲ್ಲಿ ನಡೆಯಿತು. ರೋಟರಿ ಜಿಲ್ಲೆ 3182ರ ಜಿಲ್ಲಾ ಗವರ್ನರ್ ಬಿ.ಸಿ. ಗೀತಾ ಕಾರ್ಯಕ್ರಮ ಉದ್ಘಾಟಿಸಿದರು.

ವಿವಿಧ ಕೇತ್ರಗಳಲ್ಲಿ ಗಣನೀಯ ಸೇವೆ ನೀಡುತ್ತಿರುವ ರೋಟರಿ ಜಿಲ್ಲೆ 3182ರ ಜಿಲ್ಲಾ ಗವರ್ನರ್ ಬಿ.ಸಿ. ಗೀತಾ ಅವರಿಗೆ ಸಮಾಜಸೇವೆ, ಗ್ರಾಮೀಣ ಅಭಿವೃದ್ಧಿ, ಉತ್ತಮ ಸಂಘಟನೆ ಮೂಲಕ ಸಮಾಜಸೇವೆಯ ವಿಶೇಷ ಸಾಧನೆಯನ್ನು ಗುರುತಿಸಿ ರೋಟರಿ ಜನಸೇವಾ ಅವಾರ್ಡ್ ಪ್ರಶಸ್ತಿಯನ್ನು ಶಾಸಕ ಯಶ್ಪಾಲ್ ಸುವರ್ಣ ನೀಡಿ ಗೌರವಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟ ಸೇವೆಯನ್ನು ಗುರುತಿಸಿ ಡಯಟ್ ಉಪಪ್ರಾಂಶುಪಾಲ ಡಾ. ಅಶೋಕ್ ಕಾಮತ್ ಅವರಿಗೆ ರೋಟರಿ ಜಿಲ್ಲಾ ಗವರ್ನರ್ ಬಿ.ಸಿ. ಗೀತಾ ಪ್ರಶಸ್ತಿ ಪ್ರದಾನ ಮಾಡಿ ಶುಭ ಹಾರೈಸಿದರು.

ಪರಿಸರ ಸಂರಕ್ಷಣೆ, ಕೃಷಿ ಭೂಮಿಯ ಫಲವತ್ತತೆ ಕುರಿತು ವಿಶೇಷ ಅಧ್ಯಯನ ಮಾಡಿ ಸಾಧನೆಗೈದ ಅನಂತ ಪ್ರಭು ಗೋವಾ ಅವರಿಗೆ ರೋಟರಿ ನಿಕಟಪೂರ್ವ ಜಿಲ್ಲಾ ಗವರ್ನರ್ ಡಾ. ಗೌರಿ ರೋಟರಿ ಅವಾರ್ಡ್ ನೀಡಿ ಗೌರವಿಸಿದರು.

ವೇದಿಕೆಯಲ್ಲಿ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಗಣಪತಿ, ಬಿಇಒ ಡಾ. ಯಲ್ಲಮ್ಮ, ಸಹಾಯಕ ಗವರ್ನರ್ ಪ್ರೇಮಕುಮಾರ್, ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಡಾ. ಸುಮಾ, ಪ್ರೌಢಸಾಲ ಮುಖ್ಯೋಪಾಧ್ಯಾಯನಿ ಇಂದಿರಾ, ರೋಟರಿ ಕಾರ್ಯದರ್ಶಿ ಡಾ. ಶ್ರೀಕಾಂತ್ ಪ್ರಭು, ಪ್ರಮುಖರಾದ ರೇಣು ಜಯರಾಂ, ಡಾ. ಗಿರಿಜಾ, ಜೈವಿಠಲ್, ರಾಮಚಂದ್ರ ಉಪಧ್ಯಾಯ ಉಪಸ್ಥಿತರಿದ್ದರು.

ರೋಟರಿ ಕ್ಲಬ್ ಮಣಿಪಾಲ್ ಅಧ್ಯಕ್ಷರಾದ ಶ್ರೀಪತಿ ಸ್ವಾಗತಿಸಿದರು. ರೋಟರಿ ಸೇವಾ ನಿರ್ದೇಶಕ ಅಮಿತ್ ಅರವಿಂದ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ರಾಜವರ್ಮ ವಂದಿಸಿದರು. ರೋಟರಿ ಪದಾಧಿಕಾರಿಗಳು, ಶಾಲಾ ಶಿಕ್ಷಕರು, ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.