ಜಗಳೂರು ಪತ್ರಕರ್ತರ ಸಂಘಕ್ಕೆ ಅತ್ಯುತ್ತಮ ರಾಜ್ಯ ಪ್ರಶಸ್ತಿ ಪ್ರದಾನ

| Published : Jan 21 2025, 12:33 AM IST

ಜಗಳೂರು ಪತ್ರಕರ್ತರ ಸಂಘಕ್ಕೆ ಅತ್ಯುತ್ತಮ ರಾಜ್ಯ ಪ್ರಶಸ್ತಿ ಪ್ರದಾನ
Share this Article
  • FB
  • TW
  • Linkdin
  • Email

ಸಾರಾಂಶ

ತುಮಕೂರಿನಲ್ಲಿ ನಡೆದ ರಾಜ್ಯಮಟ್ಟದ 39ನೇ ಪತ್ರಕರ್ತರ ಸಮ್ಮೇಳನದಲ್ಲಿ ಸಾಂಘಿಕ ಮತ್ತು ಕ್ರಿಯಾಶೀಲ ಚಟುವಟಿಕೆಗಳ ನಡೆಸಿದ ಸಾಧನೆಗೆ ಜಗಳೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ “ರಾಜ್ಯದ ಅತ್ಯುತ್ತಮ ಪತ್ರಕರ್ತರ ಸಂಘ”ಪ್ರಶಸ್ತಿ ಪ್ರದಾನ ಮಾಡಲಾಗಿದೆ.

- ತುಮಕೂರಿನ ಸಮ್ಮೇಳನದಲ್ಲಿ ಪ್ರಶಸ್ತಿ ಸ್ವೀಕರಿಸಿದ ಜಗಳೂರು ತಾಲೂಕು ಅಧ್ಯಕ್ಷ ಚಿದಾನಂದ್‌

- - - ಕನ್ನಡಪ್ರಭ ವಾರ್ತೆ ಜಗಳೂರು

ತುಮಕೂರಿನಲ್ಲಿ ನಡೆದ ರಾಜ್ಯಮಟ್ಟದ 39ನೇ ಪತ್ರಕರ್ತರ ಸಮ್ಮೇಳನದಲ್ಲಿ ಸಾಂಘಿಕ ಮತ್ತು ಕ್ರಿಯಾಶೀಲ ಚಟುವಟಿಕೆಗಳ ನಡೆಸಿದ ಸಾಧನೆಗೆ ಜಗಳೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ “ರಾಜ್ಯದ ಅತ್ಯುತ್ತಮ ಪತ್ರಕರ್ತರ ಸಂಘ”ಪ್ರಶಸ್ತಿ ಪ್ರದಾನ ಮಾಡಲಾಗಿದೆ.

ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮತ್ತು ಪ್ರಧಾನ ಕಾರ್ಯದರ್ಶಿ .ಸಿ.ಲೋಕೇಶ್‌, ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್‌ ಮತ್ತಿತರ ಗಣ್ಯರು ಸಂಘದ ಜಗಳೂರು ತಾಲೂಕು ಅಧ್ಯಕ್ಷ ಜಿ.ಎಸ್‌. ಚಿದಾನಂದ ಮತ್ತು ಪದಾಧಿಕಾರಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.

ಹೃದಯಪೂರ್ವಕ ಕೃತಜ್ಞತೆ:

ಜಿ.ಎಸ್.ಚಿದಾನಂದ್ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಜಗಳೂರು ಪತ್ರಕರ್ತರ ಸಂಘದ ಸಾಂಘಿಕ ಮತ್ತು ಕ್ರಿಯಾಶೀಲ ಚಟುವಟಿಕೆಗಳ ಗುರುತಿಸಿ, ಪ್ರಶಸ್ತಿ ನೀಡಿರುವುದಕ್ಕೆ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್ ಮತ್ತಿತರ ಪದಾಧಿಕಾರಿಗಳಿಗೆ ತಾಲೂಕು ಘಟಕ ಪರವಾಗಿ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ತಾಲೂಕು ಪದಾಧಿಕಾರಿಗಳು ಹಾಗೂ ಎಲ್ಲ ಮಾಧ್ಯಮ ಸ್ನೇಹಿತರ ಸಹಕಾರದಿಂದ ಇಲ್ಲಿಯವರೆಗೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಡಿ ನಡೆದ ಎಲ್ಲ ಕಾರ್ಯ ಚಟುವಟಿಕೆಗಳ ಸಮಗ್ರ ಮಾಹಿತಿ ಜೊತೆಗೆ ಪತ್ರಕರ್ತರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲಾಗಿದೆ. ಸಂಘದ ಪ್ರತಿಯೊಬ್ಬ ಸದಸ್ಯರ ಸಹಕಾರ ಮತ್ತು ಶ್ರಮ ಈ ಸಾಧನೆಯಲ್ಲಿದೆ ಎಂದರು.

ನನ್ನ ಮಿತ್ರ ಪತ್ರಿಕೆ ಸಂಪಾದಕ ಅಣಬೂರು ಮಠದ ಕೊಟ್ರೇಶ್ ಮಾತನಾಡಿ, ಪತ್ರಕರ್ತರ ಸಂಘವನ್ನು ಒಗ್ಗೂಡಿಸುವುದು, ನಿವೇಶನ ಸೇರಿದಂತೆ ಸೌಲಭ್ಯಗಳನ್ನು ಕೊಡಿಸುವುದು ಸವಾಲಿನ‌ ಕೆಲಸ. ಅಂತಹ ಸಂದರ್ಭ ಎಲ್ಲರೊಂದಿಗೆ ಸಮನ್ವಯ ಸಾಧಿಸಿ, ಸಂಘದ ಅಭಿವೃದ್ಧಿಯೊಂದಿಗೆ ಎಲ್ಲರ ವಿಶ್ವಾಸಗಳಿಸುತ್ತ, ದಿಟ್ಟ ಹೆಜ್ಜೆಗಳನ್ನು ಇಡುವಲ್ಲಿ ಸಂಘದ ಅಧ್ಯಕ್ಷ ಚಿದಾನಂದ ಕೆಲಸ ನಿರ್ವಹಿಸುತ್ತಿದ್ದಾರೆ. ಕಾರ್ಯನಿರತ ಪತ್ರಕರ್ತರ ಸಂಘಟನೆ ಬೆಳವಣಿಗೆಗೆ ಪ್ರತಿಯೊಬ್ಬರೂ ಸಹಕರಿಸೋಣ, ಸೌಲಭ್ಯ ಪಡೆದುಕೊಳ್ಳೋಣ ಎಂದರು.

ದಾವಣಗೆರೆ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್ ಏಕಬೋಟಿ ಮಾತನಾಡಿ ಜಗಳೂರು ತಾಲೂಕು ಸಂಘಕ್ಕೆ ಅತ್ಯುತ್ತಮ ಪತ್ರಕರ್ತರ ಸಂಘ ಪ್ರಶಸ್ತಿ ಲಭಿಸಿರುವುದು ಅಭಿನಂದನಾರ್ಹ. ರಾಜ್ಯ ಸಮಿತಿ ಹಾಗೂ ಜಿಲ್ಲಾ ಸಮಿತಿ ವತಿಯಿಂದ ಪತ್ರಕರ್ತರಿಗೆ ಸಿಗುವ ಸೌಲಭ್ಯಗಳನ್ನು ಒದಗಿಸಲು ಬದ್ಧ ಎಂದರು.

ಚಿಕ್ಕನಾಯಕನಹಳ್ಳಿ ಜೆಡಿಎಸ್ ಶಾಸಕ ಸುರೇಶ್ ಬಾಬು, ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ, ಜಿಲ್ಲಾಧಿಕಾರಿ ಶುಭಾಕಲ್ಯಾಣಿ, ಪ್ರಜಾಪ್ರಗತಿ ಪತ್ರಿಕೆ‌ ಸಂಪಾದಕ ನಾಗಣ್ಣ, ತುಮಕೂರು ಕಾನಿಪ ಜಿಲ್ಲಾಧ್ಯಕ್ಷ ಚಿ.ನೀ. ಪುರುಷೋತ್ತಮ, ರಾಷ್ಟ್ರೀಯ ಮಂಡಳಿ ಸದಸ್ಯ ಎಸ್.ಕೆ. ಒಡೆಯರ್, ಬದ್ರಿನಾಥ್, ಫಕೃದ್ದೀನ್, ವೀರೇಶ, ಟಿವಿ ನಿರೂಪಕಿ ಸುಕನ್ಯ, ಜಗಳೂರು ತಾಲೂಕು ಕಾನಿಪ ಸಂಘ ಉಪಾಧ್ಯಕ್ಷ ವಾಸೀಂ, ಖಜಾಂಚಿ ಜಗದೀಶ್, ಕಾರ್ಯಕಾರಣಿ ಸದಸ್ಯ ಧನ್ಯಕುಮಾರ್, ಶಿವಲಿಂಗಪ್ಪ, ವೇದಮೂರ್ತಿ, ಮಾದಿಹಳ್ಳಿ ಮಂಜಪ್ಪ, ಸಿದ್ದಮ್ಮನಹಳ್ಳಿ ಬಸವರಾಜ್, ಸೋಮನಗೌಡ, ಎ.ಎಂ.ಮಂಜಯ್ಯ, ಮಹಾಂತೇಶ್ ಬ್ರಹ್ಮ, ಬಿ.ಸತೀಶ್, ಜಗಜೀವನ್ ರಾಮ್, ವಿತರಕ ರವಿಕುಮಾರ್ ಪ್ರಶಸ್ತಿ ವಿತರಣೆ ವೇಳೆ ಇದ್ದರು.

- - - -20ಜೆ.ಜಿ.ಎಲ್.‌1: ತುಮಕೂರಿನಲ್ಲಿ ನಡೆದ ರಾಜ್ಯಮಟ್ಟದ 39ನೇ ಪತ್ರಕರ್ತರ ಸಮ್ಮೇಳನದಲ್ಲಿ ಜಗಳೂರು ತಾಲೂಕು ಸಂಘಕ್ಕೆ “ರಾಜ್ಯದ ಅತ್ಯುತ್ತಮ ಪತ್ರಕರ್ತರ ಸಂಘ ಪ್ರಶಸ್ತಿ ನೀಡಲಾಯಿತು. -20 ಜೆ.ಜಿ.ಎಲ್.‌2: ಜಗಳೂರು ತಾಲೂಕು ಪತ್ರಕರ್ತರ ಸಂಘಕ್ಕೆ ನೀಡಲಾದ ರಾಜ್ಯದ ಅತ್ಯುತ್ತಮ ಪತ್ರಕರ್ತರ ಸಂಘ ಪ್ರಶಸ್ತಿ.