ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವತಿಯಿಂದ ಪರ್ಲಡ್ಕದ ಫಾ. ಪತ್ರಾವೋ ಡಿ-ಅಡಿಕ್ಷನ್ ಸೆಂಟರ್ ಸಹಯೋಗದಲ್ಲಿ ಮಾದಕ ವ್ಯಸನದ ಕುರಿತು ಜಾಗೃತಿ ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ಇತ್ತೀಚೆಗೆ ಆಯೋಜಿಸಲಾಯಿತು.

ಪುತ್ತೂರು : ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವತಿಯಿಂದ ಪರ್ಲಡ್ಕದ ಫಾ. ಪತ್ರಾವೋ ಡಿ-ಅಡಿಕ್ಷನ್ ಸೆಂಟರ್ ಸಹಯೋಗದಲ್ಲಿ ಮಾದಕ ವ್ಯಸನದ ಕುರಿತು ಜಾಗೃತಿ ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ಇತ್ತೀಚೆಗೆ ಆಯೋಜಿಸಲಾಯಿತು.

ಸಂಪನ್ಮೂಲ ವ್ಯಕ್ತಿ ಫಾ. ಪತ್ರಾವೋ ಡಿ-ಅಡಿಕ್ಷನ್ ಸೆಂಟರ್‌ನ ಆಪ್ತ ಸಮಾಲೋಚಕಿ ಜೀಟಾ ಮಾತನಾಡಿ ಮಾದಕ ವಸ್ತುಗಳ ದುರ್ಬಳಕೆಯ ಅಪಾಯಗಳು, ಅದರ ತಡೆಗಟ್ಟುವಿಕೆಯ ಮಹತ್ವ ಕುರಿತು ಮಾಹಿತಿ ನೀಡಿದರು. ಫಾ. ಪತ್ರಾವೋ ಡಿ-ಅಡಿಕ್ಷನ್ ಸೆಂಟರ್‌ನ ಸಿಐಪಿ ಯೋಜನೆಯ ಸಂಯೋಜಕಿ ಸಿಸ್ಟರ್ ಜಾನೆಟ್ ಪ್ರತಿಜ್ಞಾವಿಧಿ ಬೋಧಿಸಿದರು.

ಉಪ ಪ್ರಾಂಶುಪಾಲ ಡಾ ವಿಜಯಕುಮಾರ್ ಮೊಳೆಯಾರ್ ಅಧ್ಯಕ್ಷತೆ ವಹಿಸಿದ್ದರು. ಎಂಎಸ್‌ಡಬ್ಲ್ಯು ಸಂಯೋಜಕಿ ಶ್ರೀಮಣಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸೌಪರ್ಣಿಕಾ ಮತ್ತು ತಂಡ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಕನೀಝ್ ನಿರೂಪಿಸಿದರು.