ಸಾರಾಂಶ
ಬಾದಾಮಿ: ಮೇ.7 ರಂದು ಜರುಗಲಿರುವ ಲೋಕಸಭಾ ಚುನಾವಣೆ ನಿಮಿತ್ತ ವಿಕಲಚೇತನರಿಂದ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮ ಜರುಗಿತು. ತಾ.ಪಂ, ತಾಲೂಕಾಡಳಿತ, ಜಿಲ್ಲಾಡಳಿತ, ಸ್ವೀಪ್ ಸಮಿತಿಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಗರದ ಪಿಕಾರ್ಡ ಬ್ಯಾಂಕ್ ಆವರಣದಿಂದ ಆರಂಭವಾದ ಜಾಗೃತಿ ಜಾಥಾ ಮುಖ್ಯ ರಸ್ತೆ, ರಾಮದುರ್ಗ ಸರ್ಕಲ್, ಅಂಬೇಡ್ಕರ ಸರ್ಕಲ್, ಗುಹಾಂತರ ದೇವಾಲಯ ಎದುರುಗಡೆ ವರೆಗೆ ನಡೆಯಿತು.
ಬಾದಾಮಿ: ಮೇ.7 ರಂದು ಜರುಗಲಿರುವ ಲೋಕಸಭಾ ಚುನಾವಣೆ ನಿಮಿತ್ತ ವಿಕಲಚೇತನರಿಂದ ಮತದಾನ ಜಾಗೃತಿ ಜಾಥಾ ಕಾರ್ಯಕ್ರಮ ಜರುಗಿತು. ತಾ.ಪಂ, ತಾಲೂಕಾಡಳಿತ, ಜಿಲ್ಲಾಡಳಿತ, ಸ್ವೀಪ್ ಸಮಿತಿಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಗರದ ಪಿಕಾರ್ಡ ಬ್ಯಾಂಕ್ ಆವರಣದಿಂದ ಆರಂಭವಾದ ಜಾಗೃತಿ ಜಾಥಾ ಮುಖ್ಯ ರಸ್ತೆ, ರಾಮದುರ್ಗ ಸರ್ಕಲ್, ಅಂಬೇಡ್ಕರ ಸರ್ಕಲ್, ಗುಹಾಂತರ ದೇವಾಲಯ ಎದುರುಗಡೆ ವರೆಗೆ ನಡೆಯಿತು. ಗುಹಾಂತರ ದೇವಾಲಯದ ಎದುರು ಎಲ್ಲರೂ ತಪ್ಪದೇ ಮತದಾನ ಮಾಡುವಂತೆ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಮತದಾನ ಎಲ್ಲರ ಹಕ್ಕು, ತಪ್ಪದೇ ಮತದಾನ ಮಾಡಿರಿ, ಮತದಾನದ ಮಹತ್ವ ತಿಳಿಸಿರಿ ಎಂದು ಘೋಷಣೆಗಳನ್ನು ಕೂಗಿದರು.
ಈ ವೇಳೆ ತಾ.ಪಂ.ಸಹಾಯಕ ನಿರ್ದೇಶಕ ಸತೀಶ ಮಾಗೊಂಡ, ಪುರಸಭೆ ಮುಖ್ಯಾಧಿಕಾರಿ ಡಿ.ಸುಧಾಕರ, ರಾಷ್ಟ್ರಮಟ್ಟದ ವಿಕಲಚೇತನ ಕ್ರೀಡಾಪಟು ಸಿದ್ದಾರೂಢ ಕೊಪ್ಪದ, ಎಂ.ಆರ್.ಡಬ್ಲೂ. ಮಹಾಂತೇಶ ಪಾಟೀಲ ಸೇರಿದಂತೆ ತಾಲೂಕಿನ ವಿ.ಆರ್.ಡಬ್ಲೂ, ಯು.ಆರ್.ಡಬ್ಲೂ ಗಳು, ಪುರಸಭೆ, ತಾ.ಪಂ.ಸಿಬ್ಬಂದಿ ಭಾಗವಹಿಸಿದ್ದರು.