ಜನಸಂಖ್ಯೆ ನಿಯಂತ್ರಣಕ್ಕೆ ಜಾಗೃತಿಯೊಂದೆ ರಾಮಬಾಣ: ಶ್ರೀನಿವಾಸ ರಾವ್

| Published : Jul 18 2024, 01:34 AM IST

ಸಾರಾಂಶ

ಜನಸಂಖ್ಯೆ ಹೆಚ್ಚಳ ದೇಶದ ಆರ್ಥಿಕ ಸ್ಥಿತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದ್ದರಿಂದ ಜನಸಂಖ್ಯೆ ನಿಯಂತ್ರಣ ಎಲ್ಲರ ಜವಾಬ್ದಾರಿ.

ಕನ್ನಡಪ್ರಭ ವಾರ್ತೆ ಉಡುಪಿ

ಜನಸಂಖ್ಯೆ ಹೆಚ್ಚಳವು ದೇಶದ ಆರ್ಥಿಕ ಪರಿಸ್ಥಿತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದ್ದರಿಂದ ಜನಸಂಖ್ಯೆ ನಿಯಂತ್ರಣ ಮತ್ತು ಅದರ ಅರಿವು ಮೂಡಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಹೆಚ್ಚುತ್ತಿರುವ ಜನಸಂಖ್ಯೆ ನಿಯಂತ್ರಣಕ್ಕೆ ಜನಜಾಗೃತಿಯೊಂದೆ ರಾಮಬಾಣವಾಗಿದೆ ಎಂದು ಸಮಾನ ಮನಸ್ಕ ಕನ್ನಡಿಗರ ವೇದಿಕೆ ಅಧ್ಯಕ್ಷ ಶ್ರೀನಿವಾಸ ರಾವ್ ಕೆ. ಹೇಳಿದರು.

ಅವರು ಇಲ್ಲಿನ ಕ್ಯಾತ್ಯಾಯನಿ ನಗರದಲ್ಲಿ ವೇದಿಕೆಯ ವತಿಯಿಂದ ನಡೆದ ವಿಶ್ವ ಜನಸಂಖ್ಯೆ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಈಗಾಗಲೇ ವಿಶ್ವದಲ್ಲಿ ಭಾರತ ಜನಸಂಖ್ಯೆ ಮೊದಲನೇ ಸ್ಥಾನದಲ್ಲಿದೆ. ಆದರೆ ಜನರು ಅವಲಂಬಿತವಾಗಿರುವ ಈ ದೇಶದ ಪ್ರಕೃತಿ ಮಾತ್ರ ಇದ್ದಷ್ಟಿದೆ. ದೇಶದ 140 ಕೋಟಿ ಜನಸಂಖ್ಯೆಯಲ್ಲಿ 70 ಕೋಟಿ ಯುವಕ, ಯುವತಿಯರು ಇದ್ದಾರೆ. 40 ಕೋಟಿ ಮಕ್ಕಳು ಮತ್ತು 30 ಕೋಟಿ ವೃದ್ಧರಿದ್ದಾರೆ. ಅವರ ಅಗತ್ಯತೆಗಳನ್ನು ಈಡೇರಿಸಲು ಪ್ರಕೃತಿ ಬೆಳೆಯುತ್ತಿಲ್ಲ. ಇದನ್ನು ಎಲ್ಲರೂ ಮನಗಾಣಬೇಕು. ಜನಸಂಖ್ಯೆ ನಿಯಂತ್ರಣಕ್ಕೆ ಧರ್ಮವನ್ನು ತಳಕುಹಾಕುವುದು ಸರಿಯಲ್ಲ ಎಂದು ಹೇಳಿದರು.

ವೇದಿಕೆಯ ಮೇಲೆ ವೇದಿಕೆಯ ಪದಾಧಿಕಾರಿಗಳಾದ ಶ್ರೀನಿವಾಸ ರಾವ್ ಕೆ., ಅನುರಾಧಾ ಜಿ. ಎಸ್., ಸುರೇಶ್, ಗಣೇಶ್ ದೇವಾಡಿಗ ಉಪಸ್ಥಿತರಿದ್ದರು.

ಸದಸ್ಯರಾದ ಸರೋಜಿನಿ, ರಕ್ಷಿತಾ, ಮುರುಳಿ, ರಾಜೀವ್, ರವೀಶ್, ಸತೀಶ್, ಪ್ರಮೋದ್, ಬಸವರಾಜ್ ಕೆ. ಗಣೇಶ್ ಸದಸ್ಯರಾದ ಶೋಭಾ ಪಿ, ರಾಘವೇಂದ್ರ, ಶ್ರೀದೇವಿ ದೀಪಾ, ವೇದಿಕೆ ಸದಸ್ಯರಾದ ಸುರೇಶ್ ಮತ್ತು ಅನುರಾಧಾ ಜಿ ಎಸ್., ಶ್ರೀನಿವಾಸ ದೇವಾಡಿಗ, ಲೀಲಾ ಎನ್. ಶಶಿಕಲಾ ಮುಂತಾದವರು ಉಪಸ್ಥಿತರಿದ್ದರು.