ಸಾರಾಂಶ
ಕೃಷ್ಣ ಪರಮಾತ್ಮ ತನ್ನ ಅವತಾರದ ಮೂಲಕ ಧರ್ಮವನ್ನು ಆಚರಿಸುವ ವಿಧಾನವನ್ನು ತಿಳಿಸಿಕೊಟ್ಟಿರುವುದಲ್ಲದೆ, ಭಕ್ತಿ ಮಾರ್ಗದ ಮೂಲಕ ಅಂತರಂಗದಲ್ಲಿ ಶಾಂತಿಯನ್ನು ಕಂಡುಕೊಳ್ಳುವ ಹಾದಿಯನ್ನು ತೋರಿಸಿ ಕೊಟ್ಟಿದ್ದಾರೆ ಎಂದು ವೈದ್ಯ ಸಾಹಿತಿ ಡಾ.ಎಸ್.ಎಸ್.ದೇವಲಾಪೂರ ಹೇಳಿದರು.
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಕೃಷ್ಣ ಪರಮಾತ್ಮ ತನ್ನ ಅವತಾರದ ಮೂಲಕ ಧರ್ಮವನ್ನು ಆಚರಿಸುವ ವಿಧಾನವನ್ನು ತಿಳಿಸಿಕೊಟ್ಟಿರುವುದಲ್ಲದೆ, ಭಕ್ತಿ ಮಾರ್ಗದ ಮೂಲಕ ಅಂತರಂಗದಲ್ಲಿ ಶಾಂತಿಯನ್ನು ಕಂಡುಕೊಳ್ಳುವ ಹಾದಿಯನ್ನು ತೋರಿಸಿ ಕೊಟ್ಟಿದ್ದಾರೆ ಎಂದು ವೈದ್ಯ ಸಾಹಿತಿ ಡಾ.ಎಸ್.ಎಸ್.ದೇವಲಾಪೂರ ಹೇಳಿದರು.ಪಟ್ಟಣದ ಹೊಸೂರ ರಸ್ತೆಯ ಶ್ರೀ ಸೇವಾ ಭಾರತಿ ಶಿಕ್ಷಣ ಸಂಸ್ಥೆಯ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ಆಧ್ಯಾತ್ಮಿಕತೆಯ ಅರಿವು ತಿಳಿದುಕೊಳ್ಳುವುದು ಅಗತ್ಯ ಎಂದರು. ಚಿಕ್ಕಮಕ್ಕಳ ತಜ್ಞೆ ಡಾ.ಸಿಂಧು ಅಂಗಡಿ ಮಾತನಾಡಿ, ಸಮಾಜದಲ್ಲಿ ಸಾಮರಸ್ಯ, ಭಾತೃತ್ವದಿಂದ ಬದುಕುವಂತಾಗಲು ಕೃಷ್ಣನ ಸಂದೇಶಗಳನ್ನು ಅಧ್ಯಯನ ಮಾಡಬೇಕು. ಕೃಷ್ಣನ ಉಪದೇಶ ಹಾಗೂ ಮಾರ್ಗದರ್ಶನವನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು ಎಂದರು.ಇದೇ ವೇಳೆ ಪುಟಾಣಿಗಳು ಶ್ರೀಕೃಷ್ಣನ ವೇಷ ಧರಿಸಿ ವಿವಿಧ ಗೀತೆಗಳಿಗೆ ನೃತ್ಯ ಮಾಡಿ ಕಾರ್ಯಕ್ರಮಕ್ಕೆ ಮೆರುಗು ತಂದರು. ಈ ಸಂದರ್ಭದಲ್ಲಿ ಎಸ್.ಎಂ.ಕುಲಕರ್ಣಿ, ಎಸ್.ಎಂ.ಸಬನೀಸ್, ಡಾ.ಶ್ರೀದೇವಿ ದೇವಲಾಪುರ, ಎಸ್.ಪಿ.ಗದಗ, ಗೌರಮ್ಮ ಕರ್ಕಿ, ಎಸ್.ಎಸ್.ಪತ್ತಾರ, ಶಿಕ್ಷಕಿಯರಾದ ಅನ್ನಪೂರ್ಣ ಪಾಟೀಲ, ಮಲಪ್ರಭಾ ದಾಸೋಗ ಹಾಗೂ ಪಾಲಕರು ಇದ್ದರು.