ಭಾರತೀಯ ಮಾನದಂಡಗಳ ಬಳಕೆ ಕುರಿತು ಅರಿವು ತರಬೇತಿ ಕಾರ್ಯಕ್ರಮ

| Published : Feb 02 2025, 11:47 PM IST

ಭಾರತೀಯ ಮಾನದಂಡಗಳ ಬಳಕೆ ಕುರಿತು ಅರಿವು ತರಬೇತಿ ಕಾರ್ಯಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಭಾರತೀಯ ಮಾನದಂಡ ಬ್ಯೂರೋ, ಬೆಂಗಳೂರು ಶಾಖೆಯಿಂದ ಗ್ರಾಮ ಪಂಚಾಯತ್ ಮಟ್ಟದಲ್ಲಿ ಭಾರತೀಯ ಮಾನದಂಡಗಳ ಬಳಕೆಯ ಕುರಿತು ಅರಿವು ತರಬೇತಿ ಕಾರ್ಯಕ್ರಮವನ್ನು ಪಟ್ಟಣದ ಎಂ.ಜಿ.ಹಾಲ್.ನಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್ ಮತ್ತು ಜಿಲ್ಲೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೀರ್ತನ ಅವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ, ತರೀಕೆರೆ

ಭಾರತೀಯ ಮಾನದಂಡ ಬ್ಯೂರೋ, ಬೆಂಗಳೂರು ಶಾಖೆಯಿಂದ ಗ್ರಾಮ ಪಂಚಾಯತ್ ಮಟ್ಟದಲ್ಲಿ ಭಾರತೀಯ ಮಾನದಂಡಗಳ ಬಳಕೆಯ ಕುರಿತು ಅರಿವು ತರಬೇತಿ ಕಾರ್ಯಕ್ರಮವನ್ನು ಪಟ್ಟಣದ ಎಂ.ಜಿ.ಹಾಲ್.ನಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್ ಮತ್ತು ಜಿಲ್ಲೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೀರ್ತನ ಅವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.

ಭಾರತೀಯ ಮಾನದಂಡ ಬ್ಯೂರೋನ ಸಂಪನ್ಮೂಲ ವ್ಯಕ್ತಿ ಮಧುಸೂದನ್ ಬಿ. ತರಬೇತಿಯಲ್ಲಿ ಮಾತನಾಡಿ, ಭಾರತೀಯ ಮಾನದಂಡ ಬ್ಯೂರೋ ಪ್ರಸ್ತುತ ಉತ್ಪನ್ನಗಳ ಗುಣಮಟ್ಟವನ್ನು ಮಾನದಂಡಗೊಳಿಸುತ್ತಿದೆ. ಉತ್ಪನ್ನಗಳಿಗೆ ಐಎಸ್.ಐ. ಮತ್ತು ಐಎಸ್.ಒ. ಪ್ರಮಾಣಪತ್ರ , ಪ್ರಯೋಗಾಲಯದಲ್ಲಿ ಉತ್ಪನ್ನಗಳ ಗುಣಮಟ್ಟ ಖಚಿತಪಡಿಸಿ, ಚಿನ್ನಾಭರಣಗಳಿಗೆ ಹಾಲ್ ಮಾರ್ಕಿಂಗ್ ಪ್ರಮಾಣಪತ್ರ ನೀಡುತ್ತಿದೆ. ಚಿನ್ನದ ಶುದ್ಧತೆ ಖಚಿತಪಡಿಸಿ, ವಿದೇಶೀ ಉತ್ಪನ್ನಗಳಿಗೆ ಪ್ರಮಾಣಪತ್ರ ನೀಡುತ್ತಿದೆ. ಸೇವಾ ವಿತರಣಾ, ಎಲೆಕ್ಟ್ರಾನಿಕ್ ಮತ್ತು ತಾಂತ್ರಿಕ ಸಾಧನಗಳಿಗಾಗಿ ಬಿಐಎಸ್ ಪ್ರಮಾಣೀಕರಣಗಳೊಂದಿಗೆ ಬಿ.ಐ.ಎಸ್. ಕೇರ್ ಕಾರ್ಯಾಚರಣೆಯ ಅನ್ವಯಣೆ ಕುರಿತು ಮಾಹಿತಿ ನೀಡಿದರು.ಗ್ರಾಮ ಪಂಚಾಯತ್ ಮಟ್ಟದಲ್ಲಿ ಸರಕುಗಳನ್ನು ಖರೀದಿಸುವಾಗ, ಸರಕಾರದ ಇ-ಮಾರ್ಕೆಟ್‌ನಲ್ಲಿ ಐಎಸ್,ಐ, ಗುಣಮಟ್ಟದ ಪ್ರಮಾಣಪತ್ರ ಮತ್ತು ಕಡ್ಡಾಯ ಪ್ರಮಾಣಪತ್ರ ಹೊಂದಿವೆ ಎಂದು ಪರಿಶೀಲಿಸಬೇಕು. ಪ್ರಸ್ತುತ, ಕೇಂದ್ರ ಸರಕಾರ ಮೇಲಿನ 723 ಉತ್ಪನ್ನಗಳಿಗೆ ಬಿಐಎಸ್ ಕಡ್ಡಾಯ ಗುಣಮಟ್ಟ ಪ್ರಮಾಣೀಕರಣ ಅಗತ್ಯವಿದೆ ಎಂದು ಘೋಷಿಸಿದೆ. ಗೃಹಾವಸಿಯ ಗ್ಯಾಸ್ ಸಿಲಿಂಡರ್, ಹೆಲ್ಮೆಟ್, ಸಿಮೆಂಟ್, ಕುಕ್ಕರ್, ಕ್ರೀಡಾ ಆಟಿಕೆಗಳು, ಚಪ್ಪಲಿಗಳು, ವಾಹನ ಟೈರ್‌ಗಳು, ಹಾಲು ಪುಡಿ ಇತ್ಯಾದಿಗಳಿಗೆ ಕಡ್ಡಾಯ ಪ್ರಮಾಣೀಕರಣ ಘೋಷಿಸಲಾಗಿದೆ. ಬಿಐಎಸ್ ಕೇರ್ ಆಪ್ ಪ್ರಕ್ರಿಯೆ ಸಹಾಯದಿಂದ ದೋಷಪೂರಿತ ಸರಕುಗಳ ಬಗ್ಗೆ ದೂರುಗಳನ್ನು ಸುಲಭವಾಗಿ ನೋಂದಾಯಿಸುವ ತರಬೇತಿ ನೀಡಲಾಯಿತು. ತಾಲೂಕಿನ 26 ಗ್ರಾಮ ಪಂಚಾಯತ್‌ಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಪಿಡಿಒಗಳು, ತಾಲೂಕು ಪಂಚಾಯತ್ ಅಧಿಕಾರಿಗಳು ಮತ್ತು ಸಿಬ್ಬಂದಿ ಮತ್ತು ಬಿಐಎಸ್ ಅಧಿಕಾರಿ ಶಿವಕುಮಾರ್ ಭಾಗವಹಿಸಿದರು.-

2ಕೆಟಿಆರ್.ಕೆ.1ಃ

ತರೀಕೆರೆಯಲ್ಲಿ ನಡೆದ ತರಬೇತಿ ಕಾರ್ಯಕ್ರಮದಲ್ಲಿ ಭಾರತೀಯ ಮಾನದಂಡ ಬ್ಯೂರೋನ ಸಂಪನ್ಮೂಲ ವ್ಯಕ್ತಿ ಮಧುಸೂದನ್ ಬಿ. ಮಾತನಾಡಿದರು.