ಸಾರಾಂಶ
ಶ್ರೀ ರಾಮ ಲಲ್ಲಾ (ಬಾಲರಾಮ)ನ ನೂತನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಯ ನಿಮಿತ್ತ ಅಯೋಧ್ಯೆಯಿಂದ ಆಗಮಿಸಿದ ಪವಿತ್ರ ಮಂತ್ರಾಕ್ಷತೆ ವಿತರಣೆ ಅಭಿಯಾನ ಹುದಲಿ ಗ್ರಾಮದ ನಡೆಯಿತು.
ಕನ್ನಡಪ್ರಭ ವಾರ್ತೆ ಯಮಕನಮರಡಿಅಯೋಧ್ಯೆಯ ರಾಮ ಮಂದಿರದಲ್ಲಿ ಶ್ರೀ ರಾಮ ಲಲ್ಲಾ (ಬಾಲರಾಮ)ನ ನೂತನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಯ ನಿಮಿತ್ತ ಅಯೋಧ್ಯೆಯಿಂದ ಆಗಮಿಸಿದ ಪವಿತ್ರ ಮಂತ್ರಾಕ್ಷತೆ ವಿತರಣೆ ಅಭಿಯಾನ ಹುದಲಿ ಗ್ರಾಮದ ನಡೆಯಿತು. ಇಲ್ಲಿನ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಬೆಳಗ್ಗೆ ಏಳು ಗಂಟೆಗೆ ಹಿರಿಯರು ಹಾಗೂ ಹಿಂದು ಸಂಘಟನೆಗಳ ಸ್ವಯಂ ಸೇವಕರು ಹಾಗೂ ಅಯ್ಯಪ್ಪ ಸ್ವಾಮಿ ಮಾಲಾಧಾರಿ ಭಕ್ತರು ಆಂಜನೇಯನ ಮೂರ್ತಿಗೆ ಹಾಗೂ ಮಂತ್ರಾಕ್ಷತೆಯ ಕಲಶಕ್ಕೆ ಪೂಜೆ ಮತ್ತು ಹನುಮಾನ್ ಚಾಲೀಸಾ, ಮಾರುತಿ ಸ್ತೋತ್ರ ಪಠಣ ಮತ್ತು ಮಹಾ ಆರತಿ ಜಯ ಘೋಷಗಳ ಸಮರ್ಪಣೆಯ ಪುನಸ್ಕಾರಗಳಿಂದ ವಿದ್ಯುಕ್ತವಾಗಿ ಚಾಲನೆಯನ್ನು ಕೊಡಲಾಯಿತು.
ನಂತರ ಗ್ರಾಮದ ಪ್ರತಿ ಮನೆಗೂ ಮಂತ್ರಾಕ್ಷತೆ, ಹನುಮಾನ್ ಚಾಲೀಸಾ, ಶ್ರೀ ರಾಮ ಜನ್ಮಭೂಮಿ ಮಂದಿರದ ವಿವರಣೆ ಮತ್ತು ಪರಿಚಯದ ಕರಪತ್ರ ಹಾಗೂ ಶ್ರೀ ರಾಮ ಮಂದಿರದ ತೈಲ ಚಿತ್ರದ ಕರಪತ್ರ ವಿತರಿಸಲಾಯಿತು..ಈ ವೇಳೆ ಗ್ರಾಮದ ಹಿರಿಯ ಶ್ರೀ ಅಡಿವೆಪ್ಪ ಗಂಗಪ್ಪ ಗಿಡಗೇರಿ, ಶ್ರೀ ಗೋವಿಂದ ದೇಶಪಾಂಡೆ, ಶೇಖರಗೌಡ ಮೋದಗಿ, ರಮೇಶ ತುಕ್ಕಾರ, ಅನಂತ ದೇಶಪಾಂಡೆ, ಸಿದ್ದಗೌಡ ಮೋದಗಿ, ಈರಣ್ಣ ತೋಟಗಿ, ಲಕ್ಷ್ಮಿಕಾಂತ್ ತುಕ್ಕಾರ, ಶ್ರೀನಂದನ ತುಕ್ಕಾರ ಮತ್ತು ಗ್ರಾಮದ ಯುವಕರು ಹಾಗೂ ಅಯ್ಯಪ್ಪ ಸ್ವಾಮಿಯ ಮಾಲಾಧಾರಿಗಳು ಇದ್ದರು.ಪೊಟೋ 04 ವಾಯ ಎಮ್ ಕೆ 02: