ಜಿಲ್ಲಾದ್ಯಂತ ಸಂಭ್ರಮ ಸಡಗರದ ಆಯುಧ ಪೂಜೆ

| Published : Oct 13 2024, 01:03 AM IST

ಜಿಲ್ಲಾದ್ಯಂತ ಸಂಭ್ರಮ ಸಡಗರದ ಆಯುಧ ಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಮೊದಲು ಫ್ರೆಂಡ್ಸ್ ಕ್ಲಬ್ ಕ್ರೀಡಾಪಟುಗಳು ವೆಂಕಟಯ್ಯನಛತ್ರ ಸರ್ಕಾರಿ ಪದವಿ ಪೂರ್ವ ಕಾಲೇಜ್ ನ ಮೈದಾನದಲ್ಲಿ ಖೋ-ಖೋ ಹಾಗೂ ವಾಲಿಬಾಲ್ ಅಂಕಣವನ್ನು ಹಾಗೂ ಕ್ರೀಡೆ ಸಾಮಗ್ರಿಗಳನ್ನು ಸ್ವಚ್ಛತೆ ಮಾಡಿ, ರಂಗೋಲಿ ಬಿಡಿಸಿ, ಬಣ್ಣ ಹಾಗೂ ಹೂವುಗಳಿಂದ ಅಲಂಕಾರ ಮಾಡಿ ಪೂಜೆ ಸಲ್ಲಿಸಿದರು. ನಂತರ ಪಟಾಕಿ ಸಿಡಿಸಿ ಸಿಹಿ ವಿತರಣೆ ಮಾಡಿ ಆಯುಧ ಪೂಜೆಯನ್ನು ಆಚರಣೆ ಮಾಡಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ತಾಲೂಕಿನ ವೆಂಕಟಯ್ಯನಛತ್ರ ಗ್ರಾಮದಲ್ಲಿ ಯುವಕರು ಹಾಗೂ ಕ್ರೀಡಾಪಟುಗಳು ಕ್ರೀಡಾಂಗಣವನ್ನು ಹಾಗೂ ಕ್ರೀಡಾ ಸಾಮಗ್ರಿಗಳನ್ನು ಪೂಜೆ ಮಾಡುವ ಮುಖಾಂತರ ವಿಶೇಷ ರೀತಿಯಲ್ಲಿ ಆಯುಧ ಪೂಜೆಯನ್ನು ಆಚರಣೆ ಮಾಡಿದರು.

ಕ್ರೀಡಾಪಟುಗಳು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು, ಬಳಿಕ ಮಾತನಾಡಿ. ನಾವು ಆಟ ಆಡುವ ಕ್ರೀಡಾಂಗಣವನ್ನು ಹಾಗೂ ಕ್ರೀಡೆ ಸಾಮಗ್ರಿಗಳನ್ನು ಪೂಜೆ ಮಾಡುವ ಮುಖಾಂತರ ಆಯುಧ ಪೂಜೆ ಆಚರಣೆ ಮಾಡುತ್ತಿರುವುದು ವಿಶೇಷವಾಗಿದೆ. ನಮ್ಮ ಭಾಗದಲ್ಲಿ ಯುವಕರು ಹಲವಾರು ಕ್ರೀಡೆಗಳಿಗೆ ಆಸಕ್ತಿಯಿಂದ ಭಾಗವಹಿಸುತ್ತಾರೆ, ಅದರಲ್ಲೂ ವಿಶೇಷವಾಗಿ ಚಾಮರಾಜನಗರದಲ್ಲಿ ಆಯೋಜಿಸಿದ ದಸರಾ ಗ್ರಾಮೀಣ ಕ್ರೀಡಾಕೂಟ (ದಸರಾ ಕಪ್) ನಲ್ಲಿ ನಮ್ಮ ವೆಂಕಟಯ್ಯನಛತ್ರ ಫ್ರೆಂಡ್ಸ್‌ಕ್ಲಬ್ ತಂಡದವರು ಖೋ-ಖೋ, ಹಗ್ಗ-ಜಗ್ಗಾಟ, ಕ್ರಿಕೆಟ್ ನಲ್ಲಿ ಭಾಗವಹಿಸಿ ಗೆದ್ದು ಪ್ರಶಸ್ತಿಯನ್ನು ತನ್ನ ಮುಡಿಗಿರಿಸಿಕೊಂಡಿದೆ. ಇದರಿಂದ ತುಂಬಾ ಸಂತೋಷ ತಂದಿದೆ, ಎಲ್ಲಾ ಆಟಗಾರರು ಕ್ರೀಡಾ ಸ್ಫೂರ್ತಿಯೊಂದಿಗೆ ಪಂದ್ಯಗಳಲ್ಲಿ ಭಾಗವಹಿಸಬೇಕು, ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮನೋಭಾವನೆಯನ್ನು ಪ್ರತಿಯೊಬ್ಬ ಯುವಕರು ಬೆಳೆಸಿಕೊಳ್ಳಬೇಕು ಎಂದರು.

ಕಾರ್ಯಕ್ರಮಕ್ಕೂ ಮೊದಲು ಫ್ರೆಂಡ್ಸ್ ಕ್ಲಬ್ ಕ್ರೀಡಾಪಟುಗಳು ವೆಂಕಟಯ್ಯನಛತ್ರ ಸರ್ಕಾರಿ ಪದವಿ ಪೂರ್ವ ಕಾಲೇಜ್ ನ ಮೈದಾನದಲ್ಲಿ ಖೋ-ಖೋ ಹಾಗೂ ವಾಲಿಬಾಲ್ ಅಂಕಣವನ್ನು ಹಾಗೂ ಕ್ರೀಡೆ ಸಾಮಗ್ರಿಗಳನ್ನು ಸ್ವಚ್ಛತೆ ಮಾಡಿ, ರಂಗೋಲಿ ಬಿಡಿಸಿ, ಬಣ್ಣ ಹಾಗೂ ಹೂವುಗಳಿಂದ ಅಲಂಕಾರ ಮಾಡಿ ಪೂಜೆ ಸಲ್ಲಿಸಿದರು. ನಂತರ ಪಟಾಕಿ ಸಿಡಿಸಿ ಸಿಹಿ ವಿತರಣೆ ಮಾಡಿ ಆಯುಧ ಪೂಜೆಯನ್ನು ಆಚರಣೆ ಮಾಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಚಿಕ್ಕಮೊಳೆ ಮಹೇಶ್ ನೆರೆದಿದ್ದ ಎಲ್ಲಾ ವೆಂಕಟಯ್ಯನಛತ್ರ ಗ್ರಾಮ ಪಂಚಾಯತಿ ಸದಸ್ಯ ಕೃಷ್ಣಮೂರ್ತಿ ಮುಖಂಡರಾದ ಗೌಡಿಕೆ ನಂಜುಂಡಸ್ವಾಮಿ, ಗೌಡಿಕೆ ರಾಘವೇಂದ್ರ, ಮಹೇಶ್, ಪ್ರಭು, ಮಂಜು, ನವೀನ್, ತರಬೇತಿದಾರರಾದ ಸತೀಶ್, ರಾಜುಹೊಸೂರು, ಭುವನೇಶ್, ಕ್ಲಬ್ ಸದಸ್ಯರಾದ ಮಣಿಕಂಠ, ಚಂದು, ಪ್ರಸಾದ್, ಆನಂದ್, ಸೂರ್ಯ, ಅರ್ಜುನ್, ದರ್ಶನ್, ಕೆಂಪರಾಜು, ವೆಂಕಟೇಶ್, ಮಹೇಶ್ ಸೇರಿದಂತೆ ಕ್ರೀಡಾಪಟುಗಳು ಗ್ರಾಮಸ್ಥರು ಹಾಜರಿದ್ದರು.

‘ನಮ್ಮೂರ ಯುವಕರು ಕ್ರೀಡೆಯ ಜೊತೆ ಜೊತೆಗೆ ಆಯುಧ ಪೂಜೆ, ದೀಪಾವಳಿ, ಸಂಕ್ರಾಂತಿ ಸೇರಿ ವಿಶೇಷ ದಿನಗಳಲ್ಲಿ ಕ್ರೀಡಾಂಗಣವನ್ನು ಅಲಂಕಾರ ಮಾಡಿ ಪೂಜೆ ಮಾಡುವ ಮುಖಾಂತರ ವಿಶೇಷ ರೀತಿಯಲ್ಲಿ ಆಚರಿಸುತ್ತ ಬರುತ್ತಿದ್ದಾರೆ. ಗ್ರಾಮೀಣ ಭಾಗದ ಮಕ್ಕಳು ಕ್ರೀಡೆ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಹಾಗೂ ಇಂತಹ ಕ್ರೀಡಾಪಟುಗಳಿಗೆ ಹೆಚ್ಚು ಪ್ರೋತ್ಸಾಹ ಅಗತ್ಯವಿದೆ.’

ಮುರುಗೇಶ್, ಗ್ರಾಮ ಪಂಚಾಯತಿ ಸದಸ್ಯ