ಸಾರಾಂಶ
ಚನ್ನಗಿರಿ ತಾಲೂಕಿನಾದ್ಯಾಂತ ದಸರಾ ಹಬ್ಬದ ಆಯುಧ ಪೂಜೆ ಶುಕ್ರವಾರ ನಡೆದರೆ, ಶನಿವಾರ ವಿಜಯದಶಮಿಯನ್ನು ಅತಿ ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು.
ಚನ್ನಗಿರಿ: ತಾಲೂಕಿನಾದ್ಯಾಂತ ದಸರಾ ಹಬ್ಬದ ಆಯುಧ ಪೂಜೆ ಶುಕ್ರವಾರ ನಡೆದರೆ, ಶನಿವಾರ ವಿಜಯದಶಮಿಯನ್ನು ಅತಿ ವಿಜೃಂಭಣೆಯಿಂದ ಆಚರಣೆ ಮಾಡಲಾಯಿತು. ಶನಿವಾರ ವಿಜಯದಶಮಿ ಹಬ್ಬದಂದು ಜನತೆಯು ಸಿಹಿಯಾದ ಭಕ್ಷ ಭೋಜನಗಳನ್ನು ಮಾಡಿಕೊಂಡು ದೇವರನ್ನು ಪೂಜಿಸಿ ಸಿಹಿಊಟವನ್ನು ಸವಿದರು. ಪಟ್ಟಣದ ಎಲ್ಲ ದೇವಾಲಯಗಳ ದೇವರುಗಳನ್ನು ಅಲಂಕೃತಗೊಂಡ ಪಲ್ಲಕ್ಕಿಯಲ್ಲಿ ಕುಳ್ಳಿರಿಸಿಕೊಂಡು ಪಟ್ಟಣದ ಹೊರವಲಯದ ಶ್ರೀ ಮೌದ್ಗಲ್ ಆಂಜನೇಯ ಸ್ವಾಮಿ ದೇವಾಲಯ ಬಳಿಯಿರುವ ಬನ್ನಿ ಮಂಟಪದ ಬಳಿ ಕರೆ ತರಲಾಯಿತು. ಅಲ್ಲಿ ದೇವರುಗಳನ್ನು ಪ್ರತಿಷ್ಠಾಪಿಸಿ, ಶ್ರೀ ಮೌದ್ಗಲ್ ಆಂಜನೇಯಸ್ವಾಮಿಗೆ ತಹಸೀಲ್ದಾರ್ ಶಂಕರಪ್ಪ ಪೂಜೆ ಸಲ್ಲಿಸಿದರು.
ಅನಂತರ ಬನ್ನಿ ಮಂಟಪದ ಬಳಿಗೆ ಬಂದು ಪಟ್ಟಣದ ಎಲ್ಲ ದೇವರಿಗೆ, ಅಂಬಿನ ಕಂಬಕ್ಕೆ ಪೂಜೆ ಸಲ್ಲಿಸಿದರು. ಬಿಲ್ಲಿನಿಂದ ಅಂಬಿನ ಕಂಬಕ್ಕೆ ಚುಚ್ಚಿದರು. ಅನಂತರ ನಾಡಿಗರ ಮನೆತನದ ಮಧುಕೇಶ್ ಅವರು ಅಂಬಿನ ಕಂಬವನ್ನು ಛೇದಿಸಿ ಅಂಬಿನೋತ್ಸವ ನೆರವೇರಿಸಿದರು. ಅಂಬಿನೋತ್ಸವಕ್ಕೆ ಬಂದಿದ್ದ ನೂರಾರು ಸಂಖ್ಯೆಯ ಭಕ್ತಾಧಿಗಳು ಬನ್ನಿಪತ್ರೆಯನ್ನು ಒಬ್ಬರಿಗೊಬ್ಬರು ವಿನಿಮಯ ಮಾಡಿಕೊಂಡು, ಶುಭಾಶಯಗಳ ಕೋರಿದರು.- - - -12ಕೆಸಿಎನ್‌ಜಿ1:
ಅಂಬಿನ ಕಂಬಕ್ಕೆ ಬಿಲ್ಲಿನಿಂದ ಚುಚ್ಚಿ ತಹಸೀಲ್ದಾರ್ ಶಂಕರಪ್ಪ ಅಂಬಿನೋತ್ಸವ ನೆರವೇರಿಸಿದರು.