ಅಯ್ಯಪ್ಪ ಸ್ವಾಮಿ ಮಹಾಪೂಜಾ ಕಾರ್ಯಕ್ರಮ

| Published : Jan 05 2024, 01:45 AM IST

ಸಾರಾಂಶ

ರೋಣ ತಾಲೂಕಿನ ಇಟಗಿ ಗ್ರಾಮದ ಅನ್ನದಾನೇಶ್ವರ ಮಠದಲ್ಲಿ ಅಯ್ಯಪ್ಪ ಸ್ವಾಮಿಯ ಮಹಾ ಪೂಜಾ ಕಾರ್ಯಕ್ರಮವು ಅಯ್ಯಪ್ಪ ಸ್ವಾಮಿಯ ಮಾಲೆಧಾರಿಗಳಿಂದ ಹಾಗೂ ಗ್ರಾಮದ ಹಿರಿಯರು, ಯುವಕರು, ಮಹಿಳೆಯರು ಮಕ್ಕಳು ಸೇರಿದಂತೆ ಶ್ರದ್ಧಾ ಭಕ್ತಿಯಿಂದ ಜರುಗಿತು.

ರೋಣ: ರೋಣ ತಾಲೂಕಿನ ಇಟಗಿ ಗ್ರಾಮದ ಅನ್ನದಾನೇಶ್ವರ ಮಠದಲ್ಲಿ ಅಯ್ಯಪ್ಪ ಸ್ವಾಮಿಯ ಮಹಾ ಪೂಜಾ ಕಾರ್ಯಕ್ರಮವು ಅಯ್ಯಪ್ಪ ಸ್ವಾಮಿಯ ಮಾಲೆಧಾರಿಗಳಿಂದ ಹಾಗೂ ಗ್ರಾಮದ ಹಿರಿಯರು, ಯುವಕರು, ಮಹಿಳೆಯರು ಮಕ್ಕಳು ಸೇರಿದಂತೆ ಶ್ರದ್ಧಾ ಭಕ್ತಿಯಿಂದ ಜರುಗಿತು.

ಗ್ರಾಮದಲ್ಲಿ ಕಳೆದ ಒಂದು ತಿಂಗಳಿಂದ ಗುರುಸ್ವಾಮಿ ಬಸವರಾಜ್ ಭೋವಿ ಅವರ ನೇತೃತ್ವದಲ್ಲಿ ಅಯ್ಯಪ್ಪಸ್ವಾಮಿ ದೇವರಿಗೆ ವಿಶೇಷ ಪೂಜೆಯನ್ನು ದಿನ ನಿತ್ಯ ಸಲ್ಲಿಸಿ ಬುಧವಾರ ಮಹಾ ಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳಲಾಯಿತು.

ಪೂಜಾ ಕಾರ್ಯಕ್ರಮದ ಪ್ರಯುಕ್ತ ಅಯ್ಯಪ್ಪ ಸ್ವಾಮಿ, ಗಣೇಶ, ಸುಬ್ರಮಣ್ಯ ದೇವರ ಪೋಟೋ ಗಳನ್ನು ಮಂಟಪದಲ್ಲಿ ಇರಿಸಿ ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಿ ಅಯ್ಯಪ್ಪ ಸ್ವಾಮಿಯ ೧೮ ಮೆಟ್ಟಿಲಗಳಿಗೆ ನಿರ್ಮಿಸಿ ಅದರ ಮೇಲೆ ದೀಪಗಳನ್ನು ಹಚ್ಚಿ ಅಯ್ಯಪ್ಪ ಸ್ವಾಮಿಯ ನಾಮ ಜಪವನ್ನು ಹಾಗೂ ಭಕ್ತಿಯ ಗೀತೆಗಳನ್ನು ಹಾಡುವದರ ಮೂಲಕ ಪೂಜೆ ಸಲ್ಲಿಸಲಾಯಿತು.

ಅಯ್ಯಪ್ಪ ಸ್ವಾಮಿಯ ಮಾಲಾಧಾರಿಗಳಾದ ಚಂದ್ರು ಮೊಟಗಿ, ಶೇಖಪ್ಪ ಗುಜಮಾಗಡಿ, ಧರ್ಮಪ್ಪ ಕೊಡಗಾನೂರ, ಧರ್ಮಪ್ಪ ಭೋವಿ, ಯಲ್ಲಪ್ಪ ಕುರಿ, ಸಚಿನ ಜಡದೇಲಿ, ಯಲ್ಲಪ್ಪ ಕೋರಿ, ಮಂಜು ನಾಗರಾಳ, ಆನಂದ್ ಬಾರಕೇರ ಸೇರಿದಂತೆ ಇನ್ನೂ ಹಲವಾರು ಯುವಕರು ಹಾಗೂ ಮಕ್ಕಳು ಇದ್ದರು.