ಬೆಳಗೊಳ ಗ್ರಾಪಂ ಅಧ್ಯಕ್ಷರಾಗಿ ಬಿ.ಸಿ.ಪುಟ್ಟರಾಜು ಆಯ್ಕೆ

| Published : Oct 17 2024, 12:04 AM IST

ಬೆಳಗೊಳ ಗ್ರಾಪಂ ಅಧ್ಯಕ್ಷರಾಗಿ ಬಿ.ಸಿ.ಪುಟ್ಟರಾಜು ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮ ಪಂಚಾಯ್ತಿ ನೂತನ ಅಧ್ಯಕ್ಷರಾಗಿ ಬಿ.ಸಿ.ಪುಟ್ಟರಾಜು ಅವಿರೋಧವಾಗಿ ಆಯ್ಕೆಯಾದರು. ನಿಕಟಪೂರ್ವ ಅಧ್ಯಕ್ಷ ಬಿ.ವಿ.ಸುರೇಶ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದು ಗ್ರಾಪಂನ ಒಟ್ಟು 26 ಮಂದಿ ಸದಸ್ಯರಲ್ಲಿ ಓರ್ವರು ನಿಧನರಾಗಿದ್ದು, 6 ಮಂದಿ ಚುನಾವಣಾಗೆ ಗೈರು ಹಾಜರಿಯಾಗಿದ್ದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ಬೆಳಗೊಳ ಗ್ರಾಮ ಪಂಚಾಯ್ತಿ ನೂತನ ಅಧ್ಯಕ್ಷರಾಗಿ ಬಿ.ಸಿ.ಪುಟ್ಟರಾಜು ಅವಿರೋಧವಾಗಿ ಆಯ್ಕೆಯಾದರು.

ನಿಕಟಪೂರ್ವ ಅಧ್ಯಕ್ಷ ಬಿ.ವಿ.ಸುರೇಶ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದು ಗ್ರಾಪಂನ ಒಟ್ಟು 26 ಮಂದಿ ಸದಸ್ಯರಲ್ಲಿ ಓರ್ವರು ನಿಧನರಾಗಿದ್ದು, 6 ಮಂದಿ ಚುನಾವಣಾಗೆ ಗೈರು ಹಾಜರಿಯಾಗಿದ್ದರು.

ಉಳಿದ 19 ಮಂದಿ ಸದಸ್ಯರು ಹಾಜರಾಗಿ ಬಿ.ಸಿ. ಪುಟ್ಟರಾಜು ಹೊರತು ಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ, ತಾಪಂ ಇಒ ವೇಣು ಅವಿರೊಧ ಆಯ್ಕೆ ಘೋಷಣೆ ಮಾಡಿದರು.

ನಂತರ ನೂತನ ಅಧ್ಯಕ್ಷ ಬಿ.ಸಿ.ಪುಟ್ಟರಾಜು ಮಾತನಾಡಿ, ಪಂಚಾಯ್ತಿ ಸದಸ್ಯರ ಸಲಹೆಯೊಂದಿಗೆ ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಕುಡಿಯುವ ನೀರು, ರಸ್ತೆ, ಚರಂಡಿ ಅಭಿವೃದ್ದಿಗೆ ನರೇಗಾ ಯೋಜನೆ ಸದ್ಬಳಕೆ ಮಾಡಿಕೊಂಡು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಪಡಿಸುತ್ತೇನೆ ಎಂದು ಭರವಸೆ ನೀಡಿದರು.

ಈ ವೇಳೆ ಗ್ರಾಪಂ ಉಪಾಧ್ಯಕ್ಷೆ ಜಯಲಕ್ಷ್ಮಮ್ಮ, ನಿಕಟಪೂರ್ವ ಅಧ್ಯಕ್ಷ ಬಿ.ವಿ.ಸುರೇಶ್, ಸದಸ್ಯರಾದ ಅರವಿಂದ್, ರವಿಕುಮಾರ್ ಬಿ.ರಜಿನಿ, ಕಾಂತರಾಜು, ರಾಧಮ್ಮ, ಪ್ರಭಾ, ಸವಿತಾ ರವಿಕುಮಾರ್ ಸೇರಿದಂತೆ ಇತರ ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಉಪಸ್ಥಿತರಿದ್ದರು.

ಗ್ರಾಪಂ ಪಿಡಿಒ ಪರಮೇಶ್, ತಾಪಂ ವ್ಯವಸ್ಥಾಪಕ ಬೈರೇಶ್, ಕಾರ್ಯದರ್ಶಿ ವೆಂಕಟರಾಮು ಚುನಾವಣಾ ಸಹಾಯಕರಾಗಿದ್ದರು. ಬೆಳಗೊಳ ಗ್ರಾಮದ ಯಜಮಾನರು, ಗ್ರಾಮಸ್ಥರ ನೇತೃತ್ವದಲ್ಲಿ ಸದಸ್ಯರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.19 ರಂದು ವಿದ್ಯುತ್ ವ್ಯತ್ಯಯ

ಮಂಡ್ಯ:66/11 ಕೆ.ವಿ. ಮಂಡ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್-6 ಹೊಸಹಳ್ಳಿ ನಗರ ಫೀಡರ್‌ನಲ್ಲಿ ಅ.19 ರಂದು ತುರ್ತು ಕಾರ್ಯನಿರ್ವಹಣೆ ಕೆಲಸ ಹಮ್ಮಿಕೊಂಡಿರುವುದರಿಂದ ಅಂದು ಬೆಳಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ನಗರ ಪ್ರದೇಶಗಳಾದ ಸುಭಾಷ್‌ನಗರ, ಆಶೋಕ ನಗರ, ವಿದ್ಯಾನಗರ, ವಿ.ವಿ. ರೋಡ್, ಹೊಸಹಳ್ಳಿ, ವಿನಾಯಕ ಬಡಾವಣೆ, ನೂರು ಅಡಿ ರೋಡ್, ನೆಹರು ನಗರ, ಹಾಲಹಳ್ಳಿ, ಹೌಸಿಂಗ್ ಬೋರ್ಡ್ 1 & 2 ಹಂತ, ದ್ವಾರಕನಗರ, ಗಾಂಧಿನಗರ, , ಶ್ರೀ ರಾಮ ನಗರ, ಎನ್ಜಿಒ ಲೇಔಟ್, ಕಾವೇರಿ ನಗರ 1 ಮತ್ತು 2 ನೇ ಹಂತ, ಚಂದ್ರ ದರ್ಶನ, ಚಾಮುಂಡೇಶ್ವರಿ ನಗರ, ಅನ್ನಪೂರ್ಣೇಶ್ವರಿ ನಗರ ಎರಡನೇ ಹಂತ, ಶಂಕರನಗರ, ಕ್ಯಾತುಂಗೆರೆ ಬಡಾವಣೆ , ಶಂಕರಪ್ಪ ಬಡಾವಣೆ, ಮಿಮ್ಸ್ ಆಸ್ಪತ್ರೆ.ಗ್ರಾಮಾಂತರ ಪ್ರದೇಶಗಳಾದ ಕಾರಸವಾಡಿ, ಮಂಗಲ, ಹನಿಯಂಬಾಡಿ, ಚೀರನಹಳ್ಳಿ, ಹೆಬ್ಬಕವಾಡಿ, ಕೊತ್ತತ್ತಿ, ಮೊತ್ತಹಳ್ಳಿ, ಬೇವಿನಹಳ್ಳಿ, ಹುಲ್ಲುಕೆರೆ, ಎ. ಹುಲಿಕೆರೆ, ಬಿ.ಹುಲಿಕೆರೆ. ಮತ್ತು ಐ.ಪಿ ಮಾರ್ಗಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮಂಡ್ಯ ಸೆಸ್ಕ್ ವಿಭಾಗದ ಕಾರ್ಯ ನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.