ಸಾರಾಂಶ
ಕೊಡಗು ಜಿಲ್ಲಾ ಬಂಟರ ಭವನ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿಯಾಗಿ ಕೊಡಗು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಬಿ.ಡಿ. ಜಗದೀಶ್ ರೈ ಅಧಿಕಾ ಸ್ವೀಕರಿಸಿದ್ದಾರೆ. ಮಡಿಕೇರಿಯಲ್ಲಿ ಟ್ರಸ್ಟ್‌ನ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಕನ್ನಡಪ್ರಭವಾರ್ತೆ ವಿರಾಜಪೇಟೆ
ಕೊಡಗು ಜಿಲ್ಲಾ ಬಂಟರ ಭವನ ಟ್ರಸ್ಟ್ ನ ಮ್ಯಾನೇಜಿಂಗ್ ಟ್ರಸ್ಟಿ ಯಾಗಿ ಕೊಡಗು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ಬಿ.ಡಿ. ಜಗದೀಶ್ ರೈ ಆಯ್ಕೆಯಾಗಿದ್ದಾರೆ.ಮಡಿಕೇರಿಯಲ್ಲಿ ಶುಕ್ರವಾರ ನಡೆದ ಟ್ರಸ್ಟ್ ನ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದು, ಟ್ರಸ್ಟ್ ನ ಹಾಲಿ ಮ್ಯಾನೇಜಿಂಗ್ ಟ್ರಸ್ಟಿ ಬಿ.ಕೆ.ರವೀಂದ್ರ ರೈ ಅವರು ಟ್ರಸ್ಟ್ನ ಅಧಿಕಾರ ಮತ್ತು ದಾಖಲೆಗಳನ್ನು ಟ್ರಸ್ಟಿ ಗಳ ಸಮ್ಮುಖದಲ್ಲಿ ಹಸ್ತಾಂತರಿಸಿದರು.
ಟ್ರಸ್ಟ್ನ ನೂತನ ಕಾರ್ಯದರ್ಶಿಯಾಗಿ ಬಿ.ಕೆ.ಸತೀಶ್ ರೈ ಹಾಗೂ ಖಜಾಂಚಿಯಾಗಿ ಅಪ್ಪು ಬಾಲಕೃಷ್ಣ ರೈ ಆಯ್ಕೆಯಾಗಿದ್ದಾರೆ. ಸಭೆಯಲ್ಲಿ ಜಿಲ್ಲಾ ಬಂಟರಭವನದ ಟ್ರಸ್ಟಿಗಳು ಉಪಸ್ಥಿತರಿದ್ದರು ಎಂದು ಕೊಡಗು ಜಿಲ್ಲಾ ಬಂಟರಭವನ ಟ್ರಸ್ಟ್ನಕಾರ್ಯದರ್ಶಿ ಬಿ.ಕೆ. ಸತೀಶ್ ರೈ ಅವರು ತಿಳಿಸಿದ್ದಾರೆ.ಜಿಲ್ಲಾ ಬಂಟರ ಸಂಘದ ಮಾಧ್ಯಮ ಸಲಹೆಗಾರರಾಗಿ ವಿರಾಜಪೇಟೆಯ ಡಾ. ಹೇಮಂತ್ ಕುಮಾರ್ ಶೆಟ್ಟಿ ಎಂ.ಎನ್. ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕೊಡಗು ಜಿಲ್ಲಾ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ರವೀಂದ್ರ ವಿ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.