ಬಾಬಾಸಾಹೇಬ ಅಂಬೇಡ್ಕರ ಜಯಂತಿ ಆಚರಣೆ

| Published : Apr 15 2024, 01:22 AM IST

ಸಾರಾಂಶ

ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ತಹಸೀಲ್ದಾರ ರವರು ಪುತ್ತಳಿಗೆ ಮಾಲಾರ್ಪಣೆ ಮಾಡಿದರು. ದಲಿತ ಮುಖಂಡ ವಿಜಯಕುಮಾರ ಲೊಡ್ಡನೋರ ಬುದ್ದವಂದನೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಚಿತ್ತಾಪುರ

ಪತ್ರಿ ವರ್ಷದಂತೆ ಈ ವರ್ಷವೂ ಅಂಬೇಡ್ಕರ ವೃತ್ತದಲ್ಲಿ ತಾಲೂಕು ಆಡಳಿತ ಮತ್ತು ದಲಿತ ಸಮನ್ವಯ ಸಮಿತಿಯ ವತಿಯಿಂದ ಬಾಬಾಸಾಹೇಬ ಅಂಬೇಡ್ಕರ ರವರ ಜಯಂತಿ ಅಂಗವಾಗಿ ಕ್ಷೇತ್ರದ ಶಾಸಕರು ಹಾಗೂ ಸಚಿವರಾದ ಪ್ರಿಯಾಂಕ್ ಖರ್ಗೆರವರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಲೊಕಸಭೆ ಚುನಾವಣೆ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಈ ಬಾರಿ ಬಾಬಾಸಾಹೇಬ ಅಂಬೇಡ್ಕರ್ ಅವರು ಜಯಂತಿಯನ್ನು ಸರಳವಾಗಿ ತಾಲೂಕು ಆಡಳಿತ ಮತ್ತು ದಲಿತ ಸಮನ್ವಯ ಸಮಿತಿಯವರು ಹಮ್ಮಿಕೊಂಡಿದ್ದರು. ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ತಹಸೀಲ್ದಾರ ರವರು ಪುತ್ತಳಿಗೆ ಮಾಲಾರ್ಪಣೆ ಮಾಡಿದರು. ದಲಿತ ಮುಖಂಡ ವಿಜಯಕುಮಾರ ಲೊಡ್ಡನೋರ ಬುದ್ದವಂದನೆ ಸಲ್ಲಿಸಿದರು.

ಮುಖಂಡರಾದ ನಾಗರೆಡ್ಡಿ ಪಾಟೀಲ್ ಕರದಾಳ, ಭೀಮಣ್ಣ ಸಾಲಿ, ಸುನಿಲ್ ದೊಡ್ಮನಿ, ಮಲ್ಲಿಕಾರ್ಜುನ ಕಾಳಗಿ, ರಾಮಲಿಂಗ ಬಾನರ್, ಶರಣು ಡೊಣಗಾಂವ, ದೇವಿಂದ್ರ ಕುಮಸಿ, ಮಲ್ಲಿಕಾರ್ಜುನ ಮುಡಬೂಳಕರ್, ಪಾಶಾಮಿಯ್ಯ ಕುರೇಶಿ, ಉದಯಕುಮಾರ ಸಾಗರ, ಆನಂದ ಕಲ್ಲಕ್ಕ್ ರಾಜಣ್ಣ ಕರದಾಳ, ಸಂಜಯ ಬುಳಕರ್, ನಾಗರೆಡ್ಡಿ ಗೊಬಶೇನ್, ಮರೆಪ್ಪ ಸಂದೇನ್, ತಾಲೂಕು ಮಟ್ಟದ ಅಧಿಕಾರಿಗಳು ದಲಿತ ಸಂಘಟನೆಯವರು ಸೇರಿದಂತೆ ಇತರರು ಇದ್ದರು.