ಸಾರಾಂಶ
ಡಾ.ಬಾಬು ಜಗಜೀವನರಾಮ್ ಅವರು ತಮ್ಮ ಬದುಕಿನುದ್ದಕೂ ಎಲ್ಲಾ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡುವುದರೊಂದಿಗೆ ದೇಶದಲ್ಲಿ ಹಸಿರು ಕ್ರಾಂತಿ ಮಾಡುವ ಮೂಲಕ ಹಸಿರು ಕಾಂತ್ರಿ ಹರಿಕಾರ ಎಂದು ದೇಶವ್ಯಾಪ್ತಿ ಈ ಮಹಾನ್ ನಾಯಕರನ್ನು ಸ್ಮರಿಸಬೇಕು ಎಂದು ತಹಸೀಲ್ದಾರ್ ಮಂಜುನಾಥ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ಕೊರಟಗೆರೆ
ಡಾ.ಬಾಬು ಜಗಜೀವನರಾಮ್ ಅವರು ತಮ್ಮ ಬದುಕಿನುದ್ದಕೂ ಎಲ್ಲಾ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡುವುದರೊಂದಿಗೆ ದೇಶದಲ್ಲಿ ಹಸಿರು ಕ್ರಾಂತಿ ಮಾಡುವ ಮೂಲಕ ಹಸಿರು ಕಾಂತ್ರಿ ಹರಿಕಾರ ಎಂದು ದೇಶವ್ಯಾಪ್ತಿ ಈ ಮಹಾನ್ ನಾಯಕರನ್ನು ಸ್ಮರಿಸಬೇಕು ಎಂದು ತಹಸೀಲ್ದಾರ್ ಮಂಜುನಾಥ್ ತಿಳಿಸಿದರು.ಪಟ್ಟಣ ತಾಲೂಕು ಕಛೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ, ಸಮಾಜಕಲ್ಯಾಣ ಇಲಾಖೆ ಹಾಗೂ ದಲಿತ ಸಂಘಟನೆಗಳ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಡಾ.ಬಾಬು ಜಗಜೀವನರಾಮ್ ರವರ ೧೧೮ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಮಾಜದಲ್ಲಿ ಅಸ್ಪೃಶ್ಯತೆಯನ್ನು ಹೋಗಲಾಡಿಸುವಲ್ಲಿ ಡಾ.ಬಾಬು ಜನಗಜೀವನರಾಮ್ ರವರ ಕೊಡುಗೆ ಅಪಾರವಾಗಿದೆ, ಜಾತಿ ವ್ಯವಸ್ಥೆಯನ್ನು ತೊಡೆದು ಹಾಕಿ ಎಲ್ಲರಲ್ಲೂ ಸಮಾನತೆ ತರುವುದು ಅವರ ಮುಖ್ಯ ಉದ್ದೇಶವಾಗಿತ್ತು. ದೇಶದಲ್ಲಿ ಸಮರ್ಪಕವಾಗಿ ಎಲ್ಲರಿಗೂ ಆಹಾರ ದೊರೆಯದೇ ಇದ್ದಾಗ ಕೇಂದ್ರದಲ್ಲಿ ಕೃಷಿ ಸಚಿವರಾಗಿದ ಸಮಯದಲ್ಲಿ ಕೃಷಿ ಯೋಜನೆ ರೂಪಿಸಿ ರೈತರನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿಸಿದರು. ಆಹಾರ ಉತ್ಪಾದನೆ ಹೆಚ್ಚಿಸಿದರು, ಅಭಿವೃದ್ದಿ ಹೊಂದುತ್ತಿರುವ ದೇಶಗಳ ಪಟ್ಟಿಗೆ ಭಾರತವನ್ನು ಸೇರಿಸುವಲ್ಲಿ ಬಾಬು ಜನಗಜೀವನರಾಮ್ ರವರ ಪಾತ್ರ ಮಹತ್ವದ್ದಾಗಿದೆ ಎಂದರು.
ದಲಿತ ಮುಖಂಡ ದಾಡಿ ವೆಂಕಟೇಶ್ ಮಾತನಾಡಿ ಶಾಲೆಯಲ್ಲಿ ಬೇರೆ ಮಡಕೆಯಿಂದ ನೀರು ಕುಡಿಯಬೇಕೆಂದು ಫರ್ಮಾನು ಹೊರಡಿಸಿದಾಗ ಅವರು ನಿರ್ಭಯವಾಗಿ ಅಸಮಾನತೆಯ ವಿರುದ್ಧ ಹೋರಾಟ ನಡೆಸಿದರು ಎಂದರು. ಕಾರ್ಯಕ್ರಮದಲ್ಲಿ ಇಒ ಅಪೂರ್ವ, ಸಿಪಿಐ ಅನಿಲ್, ಸಮಾಜ ಕಲ್ಯಾಣಾಧಿಕಾರಿ ಯಮುನಾ, ಪ.ಪಂ.ಮುಖ್ಯಾಧಿಕಾರಿ ಉಮೇಶ್, ಸಿಡಿಪಿಓ ಅಂಬಿಕಾ, ಅಬಕಾರಿ ಇಲಾಖೆಯ ರಶ್ಮಿ, ಎಇಇ ಕಾಂತರಾಜು ಖಂದಾಯ ಇಲಾಖೆಯ ವೆಂಕಟೇಶ್, ಬಸವರಾಜು ದಲಿತ ಮುಖಂಡರಾದ ಚಿಕ್ಕರಂಗಯ್ಯ, ಶಿವರಾಮಯ್ಯ, ಚಿಕ್ಕಪ್ಪಯ್ಯ, ನಾಗರಾಜು, ಮಂಜುಣ್ಣ, ದೊಡ್ಡಯ್ಯ, ನಾಗೇಶ್, ವೀರಕ್ಯಾತರಾಯ, ಸೇರಿದಂತೆ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.