ಸಾರಾಂಶ
ಬಾದಾಮಿ: ದಕ್ಷಿಣ ಭಾರತದಲ್ಲಿಯೇ ಸುಪ್ರಸಿದ್ಧ ಸುಕ್ಷೇತ್ರ ಬನಶಂಕರಿಯ ಜಾತ್ರಾ ಮಹೋತ್ಸವ ಜ.18 ರಿಂದ 29ರವರೆಗೆ ಅದ್ಧೂರಿಯಾಗಿ ಜರುಗಲಿದೆ.
ಬಾದಾಮಿ: ದಕ್ಷಿಣ ಭಾರತದಲ್ಲಿಯೇ ಸುಪ್ರಸಿದ್ಧ ಸುಕ್ಷೇತ್ರ ಬನಶಂಕರಿಯ ಜಾತ್ರಾ ಮಹೋತ್ಸವ ಜ.18 ರಿಂದ 29ರವರೆಗೆ ಅದ್ಧೂರಿಯಾಗಿ ಜರುಗಲಿದೆ. ಜ.18ರಂದು ಪುಷ್ಯ ಶುದ್ಧ ಅಷ್ಟಮಿ ನವರಾತ್ರಿ ಆರಂಭ, ಘಟಸ್ಥಾಪನೆ, ಧ್ವಜಾರೋಹಣ, ಜ.19ರಿಂದ 23ರವರೆಗೆ ಹೋಮ ಹವನಾದಿಗಳು, ವಾಹನೋತ್ಸವ ಮತ್ತು ಅಷ್ಟಾವಧಾನ, ಜ.24 ರಂದು ಬುಧವಾರ ಪುಷ್ಯ ಶುದ್ಧ ಚತುರ್ದಶಿ ಪಲ್ಲೇದ ಹಬ್ಬ, ಜ.25ರಂದು ಗುರುವಾರ ಪುಷ್ಯ ಶುದ್ಧ ಪೌರ್ಣಿಮೆ ಸಂಜೆ 5 ಗಂಟೆಗೆ ಮಹಾರಥೋತ್ಸವ ಜರುಗಲಿದೆ.
ಜ.29ರಂದು ಪುಷ್ಯ ಕೃಷ್ಣ ಚತುರ್ಥಿ ಸಂಜೆ 5 ಗಂಟೆಗೆ ಕಳಸ ಇಳಿಸುವ ಮೂಲಕ ಜಾತ್ರೆ ಸಂಪನ್ನಗೊಳ್ಳಲಿದೆ ಎಂದು ಬನಶಂಕರಿ ದೇವಸ್ಥಾನ ಟ್ರಸ್ಟ್ ಕಮಿಟಿ ಚೇರ್ಮನ್ ಎಂ.ಎಸ್. ಪೂಜಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜ.18ರಂದು ಬನಶಂಕರಿ ದೇವಿ ದರ್ಶನ ಇಲ್ಲ: ಬನಶಂಕರಿ ದೇವಿ ಜಾತ್ರೆ ನಿಮಿತ್ತ ಜ.18ರಂದು ದೇವಿಯ ಘಟಸ್ಥಾಪನೆ ಇರುವುದರಿಂದ ಬೆಳಗ್ಗೆ 6.30 ರಿಂದ 9.30ರವರೆಗೆ ಧರ್ಮದರ್ಶನಕ್ಕೆ ಅವಕಾಶವಿದೆ. ಬೆಳಗ್ಗೆ 9.30 ರಿಂದ ಸಂಜೆ 4.30 ರವರೆಗೆ ಧರ್ಮದರ್ಶನ ಸೇರಿ ಯಾವುದೇ ಸೇವೆಗಳು ಲಭ್ಯವಿರುವುದಿಲ್ಲ. ಸಂಜೆ 4.30 ರ ನಂತರ ಧರ್ಮದರ್ಶನ ಮತ್ತು ವಿಶೇಷ ಸೇವೆಗಳು ಪ್ರಾರಂಭವಾಗಲಿವೆ.