ಬಾದನಹಟ್ಟಿ: ಇರುಮುಡಿ ಪೂಜಾ ಕಾರ್ಯಕ್ರಮ

| Published : Jan 17 2024, 01:52 AM IST

ಸಾರಾಂಶ

ಶಬರಿಮಲೆ ಅಯ್ಯಪ್ಪಸ್ವಾಮಿಯ ತತ್ವಾದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಅಭಿವೃದ್ಧಿಪಥದತ್ತ ಮುನ್ನಡೆಯಬೇಕು.

ಕುರುಗೋಡು: ಪ್ರತಿಯೊಬ್ಬರೂ ಜೀವನ ಸಾಕ್ಷಾತ್ಕಾರಕ್ಕಾಗಿ ಪವಿತ್ರ ಅಯ್ಯಪ್ಪಸ್ವಾಮಿ ಮಾಲೆ ಧಾರಣೆ ಮಾಡಿ ಭಕ್ತಿಯಿಂದ ವ್ರತಾಚರಣೆ ಮಾಡಬೇಕು ಎಂದು ಸಮೀಪದ ಬಾದನಹಟ್ಟಿ ಗ್ರಾಮದ ರಾಂಬಾಬು ಗುರುಸ್ವಾಮಿ ತಿಳಿಸಿದರು.

ಸಮೀಪದ ಬಾದನಹಟ್ಟಿ ಗ್ರಾಮದ ಬಾವಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಆಯ್ಯಪ್ಪ ಸ್ವಾಮಿಯ ಮಾಲಾಧಾರಿಗಳು ಬೆಳಗಿನ ಜಾವ ಹಮ್ಮಿಕೊಂಡಿದ್ದ ಇರುಮುಡಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿ, ಶಬರಿಮಲೆ ಅಯ್ಯಪ್ಪಸ್ವಾಮಿಯ ತತ್ವಾದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ಅಭಿವೃದ್ಧಿಪಥದತ್ತ ಮುನ್ನಡೆಯುವಂತೆ ಮನವಿ ಮಾಡಿದರು.

ಗುರುಸ್ವಾಮಿ ಶಾಪೂರು ಮಲ್ಲಿಕಾರ್ಜುನಸ್ವಾಮಿ ಮಾತನಾಡಿ, ಬೇಡಿದ ವರವನ್ನು ನೀಡುವ ಅಯ್ಯಪ್ಪಸ್ವಾಮಿಯು ಬಾದನಹಟ್ಟಿ ಸೇರಿದಂತೆ ಇತರೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಉತ್ತಮ ಮಳೆ, ಬೆಳೆ ಬರಲೆಂದು ಸ್ವಾಮಿಯನ್ನು ಪೂಜಿಸಿದರು. ಮಾತ್ರವಲ್ಲದೆ ಬಾದನಹಟ್ಟಿ ಗ್ರಾಮದ ಅಯ್ಯಪ್ಪಸ್ವಾಮಿ ಭಕ್ತರು ಸತತ 24ನೇ ವರ್ಷದ ಶಬರಿಮಲೆ ಯಾತ್ರೆಗೆ ತೆರಳುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದರು.

ಗುರುಸ್ವಾಮಿ ಸಿ. ನಾಗರಾಜ ಸ್ವಾಮಿ, ಶಪೂರ್ ಮಲ್ಲಿಕಾರ್ಜುನ ಬಸಪ್ಪ ಸ್ವಾಮಿ, ಕುರುಗೋಡು ಎನ್.ಎಂ. ಮಲ್ಲಿಕಾರ್ಜುನ ಸ್ವಾಮಿ, ಪಿ. ಬಸವ ಇತರರು ಇದ್ದರು.