ಇಂದು ಬದರಿಧಾಮದ ತಪೋನಿಧಿ ಕೃತಿ ಬಿಡುಗಡೆ

| Published : Sep 22 2024, 01:58 AM IST

ಸಾರಾಂಶ

ನಮ್ಮ ದೇಶದ ಶ್ರೇಷ್ಠ ವೀಣಾವಾದಕ, ದತ್ತಾತ್ರೇಯ ವೀಣೆ ಸಂಶೋಧಕ ದಿ.ದತ್ತಾತ್ರೇಯ ಪರ್ವತೀಕರ ಅವರ ಸಂಗೀತಮಯ ಬದುಕಿನ ಕುರಿತ ''''ಬದರಿಧಾಮದ ತಪೋನಿಧಿ'''' ಕೃತಿ ಬಿಡುಗಡೆ ಸಮಾರಂಭ ಸೆ.22ರಂದು ಸಂಜೆ 5 ಗಂಟೆಗೆ ಇಲ್ಲಿನ ನವನಗರ ಕಲಾಭವನದಲ್ಲಿ ನಡೆಯಲಿದೆ ಎಂದು ಕೃತಿ ಲೇಖಕ ರಾಜೇಂದ್ರ ಪರ್ವತೀಕರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ನಮ್ಮ ದೇಶದ ಶ್ರೇಷ್ಠ ವೀಣಾವಾದಕ, ದತ್ತಾತ್ರೇಯ ವೀಣೆ ಸಂಶೋಧಕ ದಿ.ದತ್ತಾತ್ರೇಯ ಪರ್ವತೀಕರ ಅವರ ಸಂಗೀತಮಯ ಬದುಕಿನ ಕುರಿತ ''''''''ಬದರಿಧಾಮದ ತಪೋನಿಧಿ'''''''' ಕೃತಿ ಬಿಡುಗಡೆ ಸಮಾರಂಭ ಸೆ.22ರಂದು ಸಂಜೆ 5 ಗಂಟೆಗೆ ಇಲ್ಲಿನ ನವನಗರ ಕಲಾಭವನದಲ್ಲಿ ನಡೆಯಲಿದೆ ಎಂದು ಕೃತಿ ಲೇಖಕ ರಾಜೇಂದ್ರ ಪರ್ವತೀಕರ ತಿಳಿಸಿದರು.ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಭಾರತರತ್ನ ಪಂಡಿತ್ ಭೀಮಸೇನ್ ಜೋಶಿ ಅವರ ಪುತ್ರಿ, ರಂಗ ಕಲಾವಿದೆ ಉಷಾ ಕುಲಕರ್ಣಿ ಕೃತಿ ಲೋಕಾರ್ಪಣೆಗೊಳಿಸುವರು. ನಾಡಿನ ಖ್ಯಾತ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ ವಿಶೇಷ ಆಹ್ವಾನಿತರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಮಾಜಿ ಸದಸ್ಯ, ಹಿರಿಯ ತಬಲಾವಾದಕ ಪಂಡಿತ್ ರಾವ್‌ಸಾಹೇಬ್ ಮೋರೆ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ, ದೆಹಲಿಯ ಸಿತಾರ್ ವಾದಕ ಪಂಡಿತ್ ಡಾ.ಗೋಪಾಲಕೃಷ್ಣ ಶಹಾ, ಕೃತಿಯ ಲೇಖಕ ರಾಜೇಂದ್ರ ಪರ್ವತೀಕರ, ಬೆಂಗಳೂರಿನ ಮೋಹನ ಪರ್ವತೀಕರ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪರ್ವತೀಕರ ಅವರ ಬದುಕಿನ ಅಪರೂಪದ ಛಾಯಾಚಿತ್ರಗಳ ಪ್ರದರ್ಶನವೂ ನಡೆಯಲಿದೆ. ನಂತರ ದೆಹಲಿಯ ಸಿತಾರ್ ವಾದಕ ಡಾ.ಗೋಪಾಲಕೃಷ್ಣ ಶಹಾ ಅವರಿಂದ ಸಿತಾರ್ ವಾದನ ಹಾಗೂ ವಾಸುದೇವ ವಿನೋದಿನಿ ನಾಟ್ಯಸಭೆಯಿಂದ ಹಕ್ಕಿಯ ಹೆಗಲೇರಿ ನಾಟಕ ಪ್ರದರ್ಶನ ನಡೆಯಲಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರಿನ ಶ್ರೀ ರಾಘವೇಂದ್ರ ಸ್ವಾಮಿ ಮಿಷನ್ ಟ್ರಸ್ಟ್ ಹಾಗೂ ವಾಸುದೇವ ವಿನೋದಿನಿ ನಾಟ್ಯ ಸಭೆ ಸಹಯೋಗದಲ್ಲಿ ಗುಳೇದಗುಡ್ಡದ ನಾದಯೋಗಿ ದತ್ತಾತ್ರೇಯ ರಾಮರಾವ್ ಪರ್ವತೀಕರ ಸಂಗೀತ ಹಾಗೂ ಸಾಂಸ್ಕೃತಿಕ ಸ್ಮಾರಕ ಸಮಿತಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ರಾಜೇಂದ್ರ ತಿಳಿಸಿದ್ದಾರೆ.

ನಿವೃತ್ತ ಉಪನ್ಯಾಸಕ ಸುರೇಶ ಪರ್ವತೀಕರ, ವಿನಯ ಪರ್ವತೀಕರ, ಅನಂತ ಪುರೋಹಿತ, ಸಚಿನ್ ದೇಸಾಯಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.