ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ ಧಾರವಾಡದ ರೆಡ್ಡಿ ಸಹಕಾರಿ ಬ್ಯಾಂಕಿನ ಹಿರಿಯ ಸಲಹೆಗಾರ ಸದಾಶಿವ ನಾಯಕ ಅವರ ಪುತ್ರ ವಿನಯ್ ನಾಯಕ ಭಾನುವಾರ ಇಲ್ಲಿನ ಖಾಸಗಿ ಹೊಟೇಲ್‌ನಲ್ಲಿ ಹಿಂದೂ ಸಂಪ್ರದಾಯದಂತೆ ಜರ್ಮನಿಯ ಕನ್ಯೆ ಸೂಫಿಯಾ ಅವರನ್ನು ವಿವಾಹವಾದರು.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಧಾರವಾಡದ ರೆಡ್ಡಿ ಸಹಕಾರಿ ಬ್ಯಾಂಕಿನ ಹಿರಿಯ ಸಲಹೆಗಾರ ಸದಾಶಿವ ನಾಯಕ ಅವರ ಪುತ್ರ ವಿನಯ್ ನಾಯಕ ಭಾನುವಾರ ಇಲ್ಲಿನ ಖಾಸಗಿ ಹೊಟೇಲ್‌ನಲ್ಲಿ ಹಿಂದೂ ಸಂಪ್ರದಾಯದಂತೆ ಜರ್ಮನಿಯ ಕನ್ಯೆ ಸೂಫಿಯಾ ಅವರನ್ನು ವಿವಾಹವಾದರು.ಮೂಲತಃ ಬಾಗಲಕೋಟೆ ಜಿಲ್ಲಾ ಬಾದಾಮಿ ತಾಲೂಕಿನ ಕಾಡರಕೊಪ್ಪ ಗ್ರಾಮದ ಸದಾಶಿವ ನಾಯಕ ಅವರು ಧಾರವಾಡದ ಕೆಸಿಸಿ ಬ್ಯಾಂಕಿನ ಜನರಲ್ ಮ್ಯಾನೇಜರ್ ಆಗಿ ನಿವೃತ್ತರಾದ ಬಳಿಕ ರೆಡ್ಡಿ ಬ್ಯಾಂಕಿನ ಸಲಹೆಗಾರರಾಗಿದ್ದಾರೆ. ಇವರ ಪುತ್ರ ವಿನಯ್ ಜರ್ಮನಿಯಲ್ಲಿ ಎಂಎಸ್ ಪದವಿ ಪೂರೈಸಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಜರ್ಮನಿ ಸರ್ಕಾರದ ಉದ್ಯೋಗಿ ಆಗಿರುವ ಸೋಫಿಯಾ -ವಿನಯ್ ಅವರ ಪರಿಚಯ ಪ್ರೇಮಕ್ಕೆ ತಿರುಗಿ ಮದುವೆಯಾಗುವ ನಿರ್ಧಾರ ಮಾಡಿದರು. ತಮ್ಮ ಈ ಇಚ್ಛೆಯನ್ನು ತಂದೆಗೆ ಅರುಹಿದಾಗ ಅವರು ಒಪ್ಪಿಗೆ ಸೂಚಿಸಿ, ಹಿಂದೂ ಸಂಪ್ರದಾಯದಂತೆ ಅದ್ಧೂರಿ ಮದುವೆ ಮಾಡಿದರು.