ಸುಂಟಿಕೊಪ್ಪ: ಮುಸ್ಲಿಂ ಬಾಂಧವರಿಂದ ಬಕ್ರಿದ್ ಹಬ್ಬ ಆಚರಣೆ

| Published : Jun 18 2024, 12:47 AM IST

ಸಾರಾಂಶ

ಪಟ್ಟಣದ ವಿವಿಧ ಮಸೀದಿಗಳಲ್ಲಿ ಬೆಳಗ್ಗಿನಿಂದಲೇ ಶುಭ್ರ ಬಟ್ಟೆಗಳನ್ನು ತೊಟ್ಟು ನೂರಾರು ಸಂಖ್ಯೆಯಲ್ಲಿ ನೆರೆದಿದ್ದರು. ಮಸೀದಿಯ ಮೌಲ್ವಿಗಳು ವಿಶೇಷವಾದ ಪ್ರಾರ್ಥನೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ನಾಡಿನಾದ್ಯಂತ ತ್ಯಾಗ ಬಲಿದಾನ ಸಂಕೇತವಾದ ಬಕ್ರಿದ್ ಹಬ್ಬವನ್ನು ಮುಸ್ಲಿಂ ಬಾಂಧವರು ಶ್ರದ್ಧಾ ಭಕ್ತಿಯಿಂದ ಸೋಮವಾರ ಆಚರಿಸಿದರು.

ಪಟ್ಟಣದ ವಿವಿಧ ಮಸೀದಿಗಳಲ್ಲಿ ಬೆಳಗ್ಗಿನಿಂದಲೇ ಶುಭ್ರ ಬಟ್ಟೆಗಳನ್ನು ತೊಟ್ಟು ನೂರಾರು ಸಂಖ್ಯೆಯಲ್ಲಿ ನೆರೆದಿದ್ದರು.

ಬಕ್ರೀದ್ ಸುಂಟಿಕೊಪ್ಪ ಪಟ್ಟಣದ ಸುನ್ನಿ ಶಾಫಿ ಜುಮ್ಮ ಮಸ್ಜಿದ್‌ನಲ್ಲಿ ಮುಸ್ಲಿಯರ್ ಆರೀಫ್ ಸಖಾಫಿ, ಸುನ್ನಿ ಹನಫಿ ಮುಸ್ಲಿಂ ಜಮೀಯ ಮಸೀದಿ ಮೌಲನಾ ಜುಬ್ಬೇರ್ ಅಜಾರತ್, ಸುನ್ನಿ ಶಾಫಿ ಜುಮಾ ಮಸ್ಜಿದ್ ಧಾರ್ಮಿಕ ಮೌಲವಿ ಮೊಹಮದ್ ಹುಸೈನ್, ಕೂಬ ಮಸ್ಜಿದ್ ಮೌಲನಾ ಇನಾಂ ಹಾಗೂ ಗದ್ದೆಹಳ್ಳದ ನೂರು ಜುಮ್ಮ ಮಸ್ಜಿದ್‌ನ ಆಸೀಫ್ ಶಾಖಾಫಿ ಅವರು ಧಾರ್ಮಿಕ ಪ್ರವಚನ, ಪ್ರಾರ್ಥನೆ, ಮಸೀದಿಯ ಮೌಲ್ವಿಗಳು ಕುರಾನ್ ವಿಶೇಷವಾದ ಪ್ರಾರ್ಥನೆ ಸಲ್ಲಿಸಿದರು. ಮುಸ್ಲಿಂ ಬಾಂಧವರು ಪಾಲ್ಗೊಂಡಿದ್ದರು. ನಂತರ ಪರಸ್ಪರ ವ್ಯಕ್ತಿಗಳನ್ನು ಆಲಂಗಿಸಿಕೊಂಡು ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ನಂತರ ಈದ್ಗಾಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಸಲಾಫಿ ಮಸೀದಿಯಲ್ಲಿ ನಿಶಾದ್ ಸ್ವಲಾಹಿ ಧಾರ್ಮಿಕ ಪ್ರವಚನಗಳನ್ನು ನೆರವೇರಿಸಿದರು. ಬಕ್ರಿದ್ ಪ್ರಾರ್ಥನೆಯಲ್ಲಿ ಗಂಡಸರು, ಮಹಿಳೆಯರು ಹಾಗೂ ಮಕ್ಕಳು ಒಗ್ಗೂಡಿ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿಸಿಕೊಂಡರು.