ಗದಗ ಜಿಲ್ಲೆಯಾದ್ಯಂತ ಬಕ್ರೀದ್ ಆಚರಣೆ, ಸಾಮೂಹಿಕ ಪ್ರಾರ್ಥನೆ

| Published : Jun 18 2024, 12:47 AM IST

ಗದಗ ಜಿಲ್ಲೆಯಾದ್ಯಂತ ಬಕ್ರೀದ್ ಆಚರಣೆ, ಸಾಮೂಹಿಕ ಪ್ರಾರ್ಥನೆ
Share this Article
  • FB
  • TW
  • Linkdin
  • Email

ಸಾರಾಂಶ

ಗದಗ ಜಿಲ್ಲೆಯಾದ್ಯಂತ ಸೋಮವಾರ ಬಕ್ರೀದ್‌ನ್ನು ಶ್ರದ್ಧೆಯಿಂದ ಆಚರಿಸಲಾಯಿತು. ಈದ್ಗಾ ಮೈದಾನಗಳಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಗದಗ: ಜಿಲ್ಲೆಯಾದ್ಯಂತ ಸೋಮವಾರ ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬವನ್ನು ಈದ್ಗಾಗಳಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಆಚರಿಸಿದರು.

ಗದಗ ನಗರದ ಜಾಮಿಯಾ ಮಸೀದಿಯಲ್ಲಿ ಬೃಹತ್ ಸಾಮೂಹಿಕ ಪ್ರಾರ್ಥನೆ ಜರುಗಿದ್ದು, ಪ್ರಾರ್ಥನೆ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಎಚ್.ಕೆ. ಪಾಟೀಲ ಪಾಲ್ಗೊಂಡು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಗದಗ ನಗರದ ಪ್ರವಾಸಿ ಮಂದಿರದ ಮುಂಭಾಗದಲ್ಲಿರುವ ಶಾಹಿ ಈದ್ಗಾ ಮೈದಾನದಲ್ಲಿ, ರೈಲ್ವೆ ನಿಲ್ದಾಣದ ಮುಂದಿರುವ ಬೆಟಗೇರಿ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗಳು ಜರುಗಿದವು.

ಅವಳಿ ನಗರದ ವಿವಿಧ ಬಡಾವಣೆಗಳ ವ್ಯಾಪ್ತಿಯಲ್ಲಿರುವ ಮಸೀದಿಗಳಲ್ಲಿಯೇ ಸೋಮವಾರ ಬೆಳಗ್ಗೆ ಬಕ್ರೀದ್ ವಿಶೇಷ ಪ್ರಾರ್ಥನೆಗಳು ಜರುಗಿದವು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ ಬಬರ್ಚಿ, ಸರಫರಾಜ್ ಉಮಚಗಿ, ಉಮರ್ ಫಾರೂಕ್ ಹುಬ್ಬಳ್ಳಿ, ಸಾದಿಕ್ ನರಗುಂದ ಮುಂತಾದ ಮುಖಂಡರು ಒಂದೆಡೆ ಪ್ರಾರ್ಥನೆ ಸಲ್ಲಿಸಿದರು.

ಶಾಹಿ ಈದ್ಗಾದಲ್ಲಿ ಸಿರಾಜ್ ಬಳ್ಳಾರಿ, ಜಾಕೀರ ಮುಜಾವರ, ಅಸ್ಲಂ ನರೇಗಲ್ಲ, ಬಿ.ಎಂ. ಕುಕನೂರ, ಜಹೀರ ತಾಡಪತ್ರಿ ಪಾಲ್ಗೊಂಡಿದ್ದರು. ಬೆಟಗೇರಿ ಈದ್ಗಾದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಪೀರಸಾಬ ಕೌತಾಳ, ಮಹ್ಮದ ಹನೀಫ್ ಶಾಲಗಾರ, ಅನ್ವರ ಈಟಿ, ಸಲಾಂ ಬಳ್ಳಾರಿ, ಫಯಾಜ್ ನಾರಾಯಣಕೇರಿ, ಎಂ.ಆರ್. ಅಣ್ಣಿಗೇರಿ, ಬಾಬುಸಾಬ ನಾರಾಯಣಕೇರಿ, ಅಲಿ ಹೊಂಬಳ ಮುಂತಾದವರು ಪಾಲ್ಗೊಂಡಿದ್ದರು.ಪ್ರಾರ್ಥನೆ: ಗದಗ ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಇರುವ ವಿವಿಧ ಮಸೀದಿಗಳಲ್ಲಿ ಹಾಗೂ ಈದ್ಗಾಗಳಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಅಲ್ಲಾಹ ನಾಡಿನಾದ್ಯಂತ ಸುಖ, ಶಾಂತಿ, ಸಮೃದ್ಧಿ‌ ಕರುಣಿಸಲಿ ಎಂದು ಪ್ರಾರ್ಥಿಸಿದರು. ಬಳಿಕ ಪರಸ್ಪರ ಶುಭಾಷಯ ಕೋರಿದರು.

ಮುಂಡರಗಿಯಲ್ಲಿ ಸಾಮೂಹಿಕ ಪ್ರಾರ್ಥನೆ

ಮುಂಡರಗಿ ಪಟ್ಟಣದ ಈದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬದ ಅಂಗವಾಗಿ ಸೋಮವಾರ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಆನಂತರ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.ಮೆಹಬೂಬಸಾಬ್ ಹವಾಲ್ದಾರ್, ಎಸ್.ಡಿ. ಮಕಾಂದಾರ, ನಬೀಸಾಬ್ ಕೆಲೂರು, ಡಿ.ಎಂ. ನಾಗರಹಳ್ಳಿ, ಆರ್.ಎಂ. ಸೈದರ್, ರಾಜೇಸಾಬ್ ತಪ್ಪಡಿ, ದಸ್ತಗೀರ್ ಸಾಬ್, ಎಂ.ಜಿ. ವಡ್ಡಟ್ಟಿ, ರಾಜಾಭಕ್ಷಿ ಬೆಟಗೇರಿ, ಮಹ್ಮದ ರಫೀಕ್ ಮುಲ್ಲಾ, ಎ.ಪಿ. ದಂಡಿನ, ಎ.ಕೆ. ಮುಲ್ಲಾನವರ, ಎಂ.ಎಚ್. ಬೆಟಗೇರಿ, ಅಮೀನಸಾಬ್ ಬಿಸನಳ್ಳಿ, ಬಾಬಾಜಾನ್ ಗದಗ, ಕಬಲಾಸಾಬ್ ಆಲೂರು, ಫಕ್ರುಸಾಬ್ ಹಾರೋಗೇರಿ, ಅಬ್ದುಲ್ ಖುರೇಶಿ, ಡಿ.ಎಂ. ಕಾತರಕಿ, ಅಲ್ಲಾವುದ್ದೀನ್ ಬನ್ನಿಗೋಳ, ಎಂ.ಬಿ. ತಾಂಬೋಟಿ, ಅನ್ವರ್ ಸಾಬ್ ಹಣಗಿ, ಮೌಲಾಸಾಬ್ ಬಾಗವಾನ್ ಉಪಸ್ಥಿತರಿದ್ದರು.